/newsfirstlive-kannada/media/post_attachments/wp-content/uploads/2024/10/ROHIT_KL_RAHUL-1.jpg)
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಇಂದು ನಡೆಯಲಿದೆ. ಈಗಾಗಲೇ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿರುವ ನ್ಯೂಜಿಲೆಂಡ್ ತಂಡ ಖುಷಿಯಲ್ಲಿದ್ದರೇ, ಇತ್ತ ರೋಹಿತ್ ಶರ್ಮಾ ಬಳಗ ಈ ಪಂದ್ಯವನ್ನ ಗೆಲ್ಲುವ ನಿರೀಕ್ಷೆಯಲ್ಲಿದೆ.
ಟೀಮ್ ಇಂಡಿಯಾ- ನ್ಯೂಜಿಲೆಂಡ್ ನಡುವಿನ ಪಂದ್ಯ ಮಹಾರಾಷ್ಟ್ರದ ಪುಣೆಯ ಸ್ಟೇಡಿಯಂನಲ್ಲಿ ನಡೆಯಲಿದೆ. ಎಂದಿನಂತೆ ಟೆಸ್ಟ್ ಪಂದ್ಯ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ. ಉಭಯ ತಂಡಗಳನ್ನು ಎರಡನೇ ಪಂದ್ಯಕ್ಕಾಗಿ ಭರ್ಜರಿ ತಂತ್ರ, ಪ್ರತಿತಂತ್ರಗಳನ್ನು ರೂಪಿಸಿವೆ. ಚಿನ್ನಸ್ವಾಮಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಪಡೆ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 46 ರನ್ಗಳಿಗೆ ಆಲೌಟ್ ಆಗಿ ಕೆಟ್ಟ ದಾಖಲೆ ಬರೆದಿತ್ತು. ಮತ್ತೆ ಇಂತಹ ಕಹಿ ಘಟನೆ ಮರುಕಳಿಸದಿರಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ.
ರೋಹಿತ್ ಶರ್ಮಾ ಬಳಗದ ಸಂಭಾವ್ಯ ಪಟ್ಟಿಯಲ್ಲಿ ಹೆಸರುಗಳನ್ನು ಅನೌನ್ಸ್ ಮಾಡಲಾಗಿದ್ದು ಕನ್ನಡಿಗ ಕೆ.ಎಲ್ ರಾಹುಲ್ ಅವರ ಹೆಸರನ್ನು ತೆಗೆದು ಹಾಕಲಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ರಾಹುಲ್ ಆಡುವುದು ಬಹುತೇಕ ಕನ್ಫರ್ಮ್ ಇಲ್ಲ. ಬ್ಯಾಟಿಂಗ್ನಲ್ಲಿ ಓಪನರ್ ಆಗಿ ಕ್ಯಾಪ್ಟನ್ ರೋಹಿತ್ ಜೊತೆ ಯಶಸ್ವಿ ಜೈಸ್ವಾಲ್ ಆಗಮಿಸಲಿದ್ದಾರೆ. ಆದರೆ ಶುಭ್ಮನ್ ಗಿಲ್ ಕೂಡ ತಂಡದಲ್ಲಿದ್ದು ಕೆಲವೊಮ್ಮೆ ಓಪನರ್ ಆಗಿ ಜೈಸ್ವಾಲ್ ಬದಲಿಗೆ ಗಿಲ್ ಬರಬಹುದು. ಉಳಿದಂತೆ ಕೊಹ್ಲಿ, ಪಂತ್ ಹಾಗೂ ಸರ್ಫರಾಜ್ ಬ್ಯಾಟಿಂಗ್ ಲೈನ್ನಲ್ಲಿದ್ದಾರೆ. ಯುವ ಬ್ಯಾಟರ್ ಸರ್ಫರಾಜ್ ಮತ್ತೆ ಆರ್ಭಟಿಸುವ ಮುನ್ಸೂಚನೆ ಇದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಭಾರೀ ದುರಂತ; ಕ್ಷಣಾರ್ಧದಲ್ಲೇ ಕುಸಿದ 6 ಅಂತಸ್ತಿನ ಕಟ್ಟಡ.. ನಾಲ್ವರು ಸಾ*ವು
ಪುಣೆ ಮೈದಾನ ವೇಗದ ಬೌಲರ್ಗಳಿಗಿಂತ ಸ್ಪಿನ್ ಬೌಲರ್ಗಳಿಗೆ ಹೆಚ್ಚು ಅನುಕೂಲಕರವಾಗಲಿದೆ. ಹೀಗಾಗಿ ಎರಡು ತಂಡಗಳಲ್ಲಿ ಸ್ಪಿನ್ನರ್ ಎಂಟ್ರಿಯಾಗಲಿದ್ದಾರೆ. ಟೀಮ್ ಇಂಡಿಯಾದಲ್ಲಿ ಸ್ಪಿನ್ನರ್ ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್ ಅಥವಾ ಕುಲದೀಪ್ ಯಾದವ್ ಅಖಾಡಕ್ಕೆ ಇಳಿಯಬಹುದು. ವೇಗಿಗಳಲ್ಲಿ ಮೊಹಮ್ಮದ್ ಸಿರಾಜ್ ಅಥವಾ ಆಕಾಶ್ ದೀಪ್ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.
ಭಾರತದ ಸಂಭಾವ್ಯ XI: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ವಾಷಿಂಗ್ಟನ್ ಸುಂದರ್ ಅಥವಾ ಕುಲದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಅಥವಾ ಆಕಾಶ್ ದೀಪ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ