/newsfirstlive-kannada/media/post_attachments/wp-content/uploads/2024/10/ROHIT_SHARMA_GILL.jpg)
ಭಾರತದ ಜೊತೆಗಿನ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಕ್ಯಾಪ್ಟನ್ ಟಾಮ್ ಲಾಥಮ್ ಟಾಸ್​ ಗೆದ್ದುಕೊಂಡು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತವನ್ನ ಫೀಲ್ಡಿಂಗ್​ಗೆ ಆಹ್ವಾನ ಮಾಡಿದ್ದಾರೆ.
ಮೊದಲ ಪಂದ್ಯ ಟೀಮ್ ಇಂಡಿಯಾ ಸೋತು ಹೋಗಿದ್ದರಿಂದ ಎರಡನೇ ಪಂದ್ಯ ಬಹಳ ಮುಖ್ಯವಾಗಿದೆ. ಚಿನ್ನಸ್ವಾಮಿಯಲ್ಲಿ ಮಾಡಿದಂತ ತಪ್ಪುಗಳನ್ನು ತಿದ್ದಿಕೊಂಡು ಪುಣೆ ಮೈದಾನದಲ್ಲಿ ಎಲ್ಲ ಪ್ಲೇಯರ್ಸ್ ಆಡಬೇಕಿದೆ. ಇದರ ನಡುವೆ ತಂಡದ ಆಟಗಾರರಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಮೊಹಮ್ಮದ್ ಸಿರಾಜ್, ಕೆ.ಎಲ್ ರಾಹುಲ್ ಹಾಗೂ ಕುಲ್​ದೀಪ್ ಯಾದವ್​ರನ್ನ ಟೀಮ್​ನಿಂದ ಹೊರಗಿಡಲಾಗಿದೆ. ಇವರ ಬದಲಿಗೆ ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್ ಹಾಗೂ ಶುಭ್​ಮನ್​ ಗಿಲ್​ರನ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕಳೆದ ಮ್ಯಾಚ್​ನಲ್ಲಿ ಮುಂಬೈನ ಯುವ ಪ್ಲೇಯರ್ ಸರ್ಫರಾಜ್ 150 ರನ್​ಗಳ ಕಾಣಿಕೆ ನೀಡಿದ ಹಿನ್ನೆಲೆಯಲ್ಲಿ ತಂಡದಲ್ಲಿ ಮತ್ತೆ ಸ್ಥಾನ ಪಡೆದುಕೊಂಡಿದ್ದಾರೆ.
ಪುಣೆ ಮೈದಾನ ವೇಗದ ಬೌಲರ್​ಗಳಿಗಿಂತ ಸ್ಪಿನ್ ಬೌಲರ್​ಗಳಿಗೆ ಹೆಚ್ಚು ಅನುಕೂಲಕರವಾಗಲಿದೆ. ಹೀಗಾಗಿ ಎರಡು ತಂಡಗಳಲ್ಲಿ ಸ್ಪಿನ್ನರ್ ಎಂಟ್ರಿಯಾಗಲಿದ್ದಾರೆ. ಟೀಮ್ ಇಂಡಿಯಾದಲ್ಲಿ ಸ್ಪಿನ್ನರ್ ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್​ ಆಗಮಿಸಿದ್ದಾರೆ. ವೇಗದ ಬೌಲಿಂಗ್​​ಗಾಗಿ ಆಕಾಶ್ ದೀಪ್ ಅವರನ್ನ ಸೇರಿಸಿಕೊಳ್ಳಲಾಗಿದೆ. ಬ್ಯಾಟಿಂಗ್​​ ಲೈನ್​ನಲ್ಲಿ ಶುಭ್​ಮನ್ ಗಿಲ್​ರನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಬ್ಯಾಟಿಂಗ್​ನಲ್ಲಿ ಓಪನರ್ ಆಗಿ ಕ್ಯಾಪ್ಟನ್ ರೋಹಿತ್ ಜೊತೆ ಯಶಸ್ವಿ ಜೈಸ್ವಾಲ್ ಆಗಮಿಸಲಿದ್ದಾರೆ. ಆದರೆ ಶುಭ್​ಮನ್ ಗಿಲ್ ಕೂಡ ತಂಡದಲ್ಲಿದ್ದು ಕೆಲವೊಮ್ಮೆ ಓಪನರ್ ಆಗಿ ಜೈಸ್ವಾಲ್ ಬದಲಿಗೆ ಗಿಲ್ ಬರಬಹುದು. ಇದು ಭಾರತದ ಬ್ಯಾಟಿಂಗ್ ವೇಳೆ ತಿಳಿದು ಬರಲಿದೆ. ಕೊಹ್ಲಿ, ಪಂತ್ ಹಾಗೂ ಸರ್ಫರಾಜ್ ಬ್ಯಾಟಿಂಗ್​ ಲೈನ್​ನಲ್ಲಿದ್ದಾರೆ. ಯುವ ಬ್ಯಾಟರ್ ಸರ್ಫರಾಜ್ ಮತ್ತೆ ಆರ್ಭಟಿಸುವ ಮುನ್ಸೂಚನೆ ಇದೆ.
ಟೀಮ್ ಇಂಡಿಯಾ ಆಟಗಾರರ ಹೆಸರು: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಜಸ್​​ಪ್ರೀತ್ ಬುಮ್ರಾ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ