/newsfirstlive-kannada/media/post_attachments/wp-content/uploads/2024/10/IND-VS-NZ-1-1.jpg)
ನ್ಯೂಜಿಲೆಂಡ್​ ವಿರುದ್ಧದ 3ನೇ ಟೆಸ್ಟ್​ಗೂ ಮುನ್ನ ಟೀಮ್​ ಇಂಡಿಯಾಗೆ ಹೊಸ ಟೆನ್ಶನ್​ ಶುರುವಾಗಿದೆ. ಬ್ಯಾಕ್​ ಟು ಬ್ಯಾಕ್​​ ಹೀನಾಯ ಸೋಲಿನ ಮುಖಭಂಗದ ಬಳಿಕ ಟೀಮ್​ ಮ್ಯಾನೇಜ್​ಮೆಂಟ್​ಗೆ​ ದಿಕ್ಕೇ ತೋಚದಂತಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ 2 ಟೆಸ್ಟ್​​ಗಳಲ್ಲಿ ಸೋಲುಂಡ ಟೀಮ್​ ಇಂಡಿಯಾ ಸರಣಿ ಕೈ ಚೆಲ್ಲಿದೆ. ಇದ್ರೊಂದಿಗೆ ಭಾರತದ ನೆಲದಲ್ಲಿನ ಸುದೀರ್ಘ 12 ವರ್ಷಗಳ ಟೆಸ್ಟ್​ ಸರಣಿ ಗೆಲುವಿನ ಯಾತ್ರೆಗೆ ಬ್ರೇಕ್​ ಬಿದ್ದಿದೆ. ಹೀನಾಯ ಸೋಲುಂಡು ಮುಖಭಂಗ ಅನುಭವಿಸಿದ್ದು, ಈಗ ಮುಗಿದ ಕಥೆ. ಮುಂದಿನ 3 ಟೆಸ್ಟ್​ ಗೆದ್ದು ವೈಟ್​ವಾಷ್​ ಮುಖಭಂಗದಿಂದ ಪಾರಾಗೋ ಯತ್ನ ಸದ್ಯ ಟೀಮ್​ ಇಂಡಿಯಾದಲ್ಲಿ ನಡೀತಿದೆ.
ಟೀಮ್​ ಇಂಡಿಯಾದಲ್ಲಿ ಗೊಂದಲ
ಬೆಂಗಳೂರು ಹಾಗೂ ಪುಣೆಯಲ್ಲಿ ಮಕಾಡೆ ಮಲಗಿದ ಟೀಮ್​ ಇಂಡಿಯಾ ಮುಂದೆ ಇದೀಗ ಮುಂಬೈನಲ್ಲಿ ಮಾನ ಉಳಿಸಿಕೊಳ್ಳೋ ಕಠಿಣ ಸವಾಲಿದೆ. ಈ ಟಫ್​ ಟಾಸ್ಕ್​ ಮುಂದಿರೋವಾಗ್ಲೇ ಬಿಸಿಸಿಐಗೆ ಹೊಸ ಟೆನ್ಶನ್​ ಶುರುವಾಗಿದೆ. ಬೆಂಗಳೂರು ಹಾಗೂ ಪುಣೆ ಟೆಸ್ಟ್​ನ ಸೋಲಿನ ಬಳಿಕ ಟೀಮ್​ ಮ್ಯಾನೇಜ್​ಮೆಂಟ್​ ಹಾಗೂ ಬಿಸಿಸಿಐ ಬಾಸ್​ಗಳಿಗೆ ಪಿಚ್​ ಕನ್ಪ್ಯೂಶನ್​ ಶುರುವಾಗಿದೆ.
ಬೆಂಗಳೂರಲ್ಲಿ ಪೇಸ್​​ ಫ್ರೆಂಡ್ಲಿ ಪಿಚ್​ನಲ್ಲಿ ಸೋಲು
ನ್ಯೂಜಿಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯ ನಡೆದ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದ ಪಿಚ್​​ ಪೇಸರ್​ಗೆ ಹೆಚ್ಚು ಸಹಾಯ ಮಾಡಿತ್ತು. ಪುಣೆಯಲ್ಲಿ ನಡೆದ 2 ಟೆಸ್ಟ್​ನ ಪಿಚ್​ ಸ್ಪಿನ್ನರ್ಸ್​ಗೆ ಹೆಚ್ಚು ಸಹಾಯ ಮಾಡ್ತು. ಆ ಎರಡೂ ಪಿಚ್​ಗಳಲ್ಲಿ ಭಾರತದ ಆಟಗಾರರು ಮಕಾಡೆ ಮಲಗಿದ್ರೆ, ನ್ಯೂಜಿಲೆಂಡ್​ ಆಟಗಾರರು ದರ್ಬಾರ್​ ನಡೆಸಿದ್ರು. ಹೀಗಾಗಿ ಮುಂಬೈ ಟೆಸ್ಟ್​ಗೆ ಯಾವ ತರ ಪಿಚ್​ ತಯಾರು ಮಾಡಬೇಕು ಅನ್ನೋ ಗೊಂದಲ ಶುರುವಾಗಿದೆ.
ನ್ಯೂಜಿಲೆಂಡ್ ರೆಡಿ..!
ಸರಣಿಯ ಮೊದಲ 2 ಪಂದ್ಯಗಳಲ್ಲಿ ಪೇಸ್​ ಹಾಗೂ ಸ್ಪಿನ್​ ಪಿಚ್​ಗೆ ತಕ್ಕಂತೆ ನ್ಯೂಜಿಲೆಂಡ್​ ಆಡಿದೆ. ನಾಯಕ ಟಾಮ್​ ಲಾಥಮ್​ ಮತ್ತು ಮ್ಯಾನೇಜ್​​ಮೆಂಟ್​ ಪರ್ಫೆಕ್ಟ್​ ಆಗಿ ಪಿಚ್​ ರೀಡ್​ ಮಾಡಿದ್ದಲ್ಲದೇ, ಕಂಡೀಷನ್ಸ್​ಗೆ ತಕ್ಕಂತೆ ಟೀಮ್​ ಕಾಂಬಿನೇಷನ್​​ ಸೆಲೆಕ್ಟ್​ ಮಾಡಿ ಆಟವನ್ನ ಆಡ್ತು. ಬೆಂಗಳೂರಲ್ಲಿ ಕಿವೀಸ್​ ಪೇಸರ್ಸ್​ ವಿಕೆಟ್​​ ಬೇಟೆಯಾಡಿದ್ರೆ, ಪುಣೆಯಲ್ಲಿ ನ್ಯೂಜಿಲೆಂಡ್​ ಸ್ಪಿನ್ನರ್ಸ್​ ಸಖತ್​ ಆಟವಾಡಿದರು. ಬ್ಯಾಟ್ಸ್​ಮನ್​ಗಳು ಎರಡೂ ಕಂಡಿಷನ್ಸ್​ನಲ್ಲಿ ಭಾರತೀಯ ಬೌಲರ್ಸ್​ನ ಕಾಡಿದ್ರು.
ಭಾರತ ತಂಡದ ಆಟಗಾರರು ತಾವೇ ತಯಾರಿಸಿದ ಖೆಡ್ಡಾಗೆ ತಾವೇ ಬಿದ್ರು. ಸರಣಿ ಸೋತಿರೋ ಟೀಮ್​ ಇಂಡಿಯಾಗೆ, ವೈಟ್​ವಾಷ್​ ಮುಖಭಂಗದಿಂದ ಪಾರಾಗಲು ದಾರಿಯೇ ಕಾರಣದಂತಾಗಿದೆ. ಪೇಸ್​ ಫ್ರೆಂಡ್ಲಿ ಪಿಚ್​ ಮಾಡೋದಾ? ಸ್ಪಿನ್​ ಫ್ರೆಂಡ್ಲಿ ಪಿಚ್​ ಮಾಡೋದಾ? ಎಂಬ ಪ್ರಶ್ನೆಗೆ ಉತ್ತರವೇ ಸಿಗದಂತಾಗಿದೆ. ಟೆಸ್ಟ್​ ಆರಂಭಕ್ಕೆ ಕೇವಲ 3 ದಿನ ಬಾಕಿ ಉಳಿದಿದೆ. ಮುಂಬೈನ ವಾಂಖೆಡೆ ಮೈದಾನದ ಪಿಚ್​​ ಕ್ಯುರೇಟರ್​ಗಾಗಲಿ, ಮುಂಬೈ ಕ್ರಿಕೆಟ್​ ಅಸೋಸಿಯೇಷನ್​ಗಾಗಲಿ ಯಾವ ರೀತಿ ಪಿಚ್​ ಬೇಕು ಅನ್ನೋ ಸೂಚನೆಯೇ ಬಂದಿಲ್ಲವಂತೆ.
‘ಯಾವುದೇ ಸೂಚನೆ ಬಂದಿಲ್ಲ’
ಭಾರತ-ನ್ಯೂಜಿಲೆಂಡ್ ನಡುವಿನ 3ನೇ ಟೆಸ್ಟ್ ಆಯೋಜನೆಗೆ ವಾಂಖೆಡೆ ಮೈದಾನ ಸಿದ್ಧವಾಗಿದೆ. ಫಾಸ್ಟ್ ಟ್ರ್ಯಾಕ್ ಮಾಡಬೇಕಾ.? ಸ್ಪಿನ್ ಟ್ರ್ಯಾಕ್ ಮಾಡಬೇಕಾ? ಎಂಬ ಬಗ್ಗೆ ಗೊಂದಲವಿದೆ. ಈವರೆಗೂ ಟೀಮ್ ಮ್ಯಾನೇಜ್ಮೆಂಟ್ ಅಥವಾ ಬೋರ್ಡ್ನಿಂದ ಯಾವುದೇ ಸೂಚನೆ ಬಂದಿಲ್ಲ-MCA ಅಧಿಕಾರಿ
ಮುಂಬೈನಲ್ಲಿ ಟಾಸ್​ ಗೆದ್ದವರೇ ಬಾಸ್
ಮುಂಬೈನ ವಾಂಖೆಡೆ ಪಿಚ್​ನಲ್ಲಿ ಟಾಸ್​ ಗೆದ್ದವರೇ ಬಾಸ್​ ಅನ್ನೋದನ್ನು ಈ ಹಿಂದಿನ ಟ್ರ್ಯಾಕ್​ ರೆಕಾರ್ಡ್​ ಹೇಳ್ತಿದೆ. ವಾಂಖೆಡೆಯಲ್ಲಿ ರೆಡ್​ ಸಾಯ್ಲ್​​​ ಪಿಚ್​ಗಳಿದ್ದು ಆರಂಭಿಕ ದಿನಗಳಲ್ಲಿ ಬ್ಯಾಟ್ಸ್​ಮನ್​ಗಳಿಗೆ ಹೆಚ್ಚು ಸಹಾಯ ಮಾಡಲಿದೆ. ದಿನ ಕಳೆದಂತೆ ಟರ್ನ್​ ಅಂಡ್ ಬೌನ್ಸ್​ನ ಪಿಚ್​ ಪ್ರೊಡ್ಯೂಸ್​ ಮಾಡಲಿದೆ. ಇದ್ರಿಂದ ಸ್ಪಿನ್ನರ್​ಗಳಿಗೆ ಹೆಚ್ಚಿನ ಸಹಾಯ ಸಿಗಲಿದೆ. ಹೀಗಾಗಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಳ್ಳುವ ತಂಡಕ್ಕೆ
ಅಡ್ವಾಂಟೇಜ್​ ಹೆಚ್ಚು.
ಒಟ್ಟಿನಲ್ಲಿ ಸರಣಿ ಗೆದ್ದಿರುವ ನ್ಯೂಜಿಲೆಂಡ್ ನೀವು ಯಾವುದೇ ಪಿಚ್​ ಕೊಟ್ಟರೂ ನಾವು ಯುದ್ಧಕ್ಕೆ ರೆಡಿ ಎಂಬ ಲೆಕ್ಕಾಚಾರದಲ್ಲಿದೆ. ವೈಟ್​ವಾಷ್​ ಮುಖಭಂಗದಿಂದ ಪಾರಾಗುವ ಒತ್ತಡಕ್ಕೆ ಸಿಲುಕಿರೋ ಟೀಮ್​ ಇಂಡಿಯಾಗೆ ಪಿಚ್​ ತಯಾರು ಮಾಡೋದೇ ದೊಡ್ಡ ಗೊಂದಲವಾಗಿ ಕಾಡ್ತಿದೆ. ಪೇಸ್​ ಹಾಗೂ ಸ್ಪಿನ್​ ಎರಡೂ ಪಿಚ್​ನಲ್ಲಿ ಮಕಾಡೆ ಮಲಗಿರೋ ರೋಹಿತ್​ ಪಡೆ ಮುಂಬೈನಲ್ಲಿ ಯಾವ ತೆರನಾದ ಪಿಚ್​​​​ ತಯಾರಿಗೆ ಸೂಚನೆ ನೀಡುತ್ತೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಅನುಷ್ಕಾ ಶರ್ಮಾ ಮುಂದೆ ಗಳಗಳನೇ ಕಣ್ಣೀರಿಟ್ಟಿದ್ರಂತೆ ಕೊಹ್ಲಿ.. ಕಾರಣ..?
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us