/newsfirstlive-kannada/media/post_attachments/wp-content/uploads/2024/09/KL_RAHUL_VIRAT.jpg)
ಇಂಡೋ-ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯದ ಕ್ರೇಜ್ ಬೆಂಗಳೂರಲ್ಲಿ ಜೋರಾಗಿದೆ. ಮನೆ ಮಗ ಕೆ.ಎಲ್.ರಾಹುಲ್ ಆಟವನ್ನ ಕಣ್ತುಂಬಿಕೊಳ್ಳಲು ಕರ್ನಾಟಕದ ಕ್ರಿಕೆಟ್ ಫ್ಯಾನ್ಸ್ ಕಾದಿದ್ದಾರೆ. ಹೋಮ್ಗ್ರೌಂಡ್ ಚಿನ್ನಸ್ವಾಮಿಯಲ್ಲಿ 3ನೇ ಟೆಸ್ಟ್ ಆಡಲು ಸಜ್ಜಾಗಿರೋ ರಾಹುಲ್, ಒಂದು ಕೊರಗನ್ನ ನನಸು ಮಾಡಿಕೊಳ್ಳೋ ಹಂಬಲದಲ್ಲಿದ್ದಾರೆ. ಅದಕ್ಕೆ ಮಳೆರಾಯನ ಕೃಪೆ ಕೂಡ ಬೇಕಿದೆ.
ಇಂಡೋ-ನ್ಯೂಜಿಲೆಂಡ್ ಟೆಸ್ಟ್ ಸರಣಿ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಕಳೆದ 2 ದಿನಗಳಿಂದ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಉಭಯ ತಂಡಗಳು ಸಿದ್ಧತೆ ನಡೆಸ್ತಿವೆ. ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಕಠಿಣ ತಾಲೀಮು ನಡೆಸ್ತಿದ್ದು, ನೆಟ್ಸ್ನಲ್ಲಿ ಆಟಗಾರರು ಬೆವರಿಳಿಸಿದ್ದಾರೆ.
ಇದನ್ನೂ ಓದಿ:ಗಂಭೀರ್ ಅಂದು ನುಡಿದಿದ್ದ ಮಾತು ನಿಜವಾಗಿಸಿದ ಸಂಜು; ಏನದು..?
ಮನೆ ಮಗ ರಾಹುಲ್ ಮೇಲೆ ಅಭಿಮಾನಿಗಳ ಕಣ್ಣು
ಮನೆ ಮಗ ಕೆ.ಎಲ್ ರಾಹುಲ್, ಬುಧವಾರದಿಂದ ಆರಂಭವಾಗೋ ಮೊದಲ ಟೆಸ್ಟ್ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್. ಆಡಿ ಬೆಳೆದ ಚಿನ್ನಸ್ವಾಮಿ ಮೈದಾನದಲ್ಲಿ ಭಾರತದ ಪರ ಬ್ಯಾಟ್ ಝಳಪಿಸಲು ರೆಡಿಯಾಗಿದ್ದಾರೆ. ಹೆಮ್ಮೆಯ ಕನ್ನಡಿಗನಿಗೆ ಚಿಯರ್ ಮಾಡಲು ಕರ್ನಾಟಕದ ಕ್ರಿಕೆಟ್ ಫ್ಯಾನ್ಸ್ ಕಾದಿದ್ದಾರೆ. ಹೋಮ್ಗ್ರೌಂಡ್ಗೆ ಕಮ್ಬ್ಯಾಕ್ ಮಾಡಿರುವ ರಾಹುಲ್ ಮೇಲೆ ನಿರೀಕ್ಷೆ ಭಾರವೇ ಇದೆ.
ಸಾಲಿಡ್ ಫಾರ್ಮ್ನಲ್ಲಿ ರಾಹುಲ್, ಘರ್ಜನೆ ಪಕ್ಕಾ?
ಇನ್ಕನ್ಸಿಸ್ಟೆನ್ಸಿ ಸಮಸ್ಯೆ ಎದುರಿಸಿ ಟೀಕೆಗಳಿಗೆ ಗುರಿಯಾಗಿದ್ದ ರಾಹುಲ್, ಈ ಹಿಂದಿನ ಟೆಸ್ಟ್ನಲ್ಲಿ ಸಾಲಿಡ್ ಆಟವಾಡಿ ಮಿಂಚಿದ್ದಾರೆ. ಬಾಂಗ್ಲಾದೇಶ ಎದುರು ಕಾನ್ಪುರದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಸ್ಪೋಟಕ ಇನ್ನಿಂಗ್ಸ್ ಕಟ್ಟಿದ್ರು. ಬಾಂಗ್ಲಾ ಬೌಲರ್ಗಳನ್ನ ಬೆಂಡೆತ್ತಿದ್ದ ರಾಹುಲ್, ಟೆಸ್ಟ್ ಕ್ರಿಕೆಟ್ನಲ್ಲಿ ಟಿ20 ಆಟವಾಡಿದ್ರು. 7 ಬೌಂಡರಿ, 2 ಸಿಕ್ಸರ್ ಸಹಿತ 43 ಎಸೆತಗಳಲ್ಲೇ 68 ರನ್ ಚಚ್ಚಿದ್ರು.
ಇದನ್ನೂ ಓದಿ:India vs New Zealand ಮೊದಲ ಟೆಸ್ಟ್ ರದ್ದು..? ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ
ಕಠಿಣ ಅಭ್ಯಾಸ
ಕಳೆದ ಎರಡು ದಿನಗಳಿಂದ ಚಿನ್ನಸ್ವಾಮಿ ಮೈದಾನದಲ್ಲಿ ಕೆ.ಎಲ್.ರಾಹುಲ್, ಭರ್ಜರಿ ತಾಲೀಮು ನಡೆಸ್ತಿದ್ದಾರೆ. ನೆಟ್ಸ್ನಲ್ಲಿ ಗಂಟೆಗಟ್ಟಲೇ ಬ್ಯಾಟಿಂಗ್ ಅಭ್ಯಾಸ ನಡೆಸಿ ಬೆವರಿಳಿಸಿದ್ದಾರೆ. ಸ್ಪಿನ್ ಹಾಗೂ ಪೇಸ್ ಎರಡರ ಎದುರು ಉತ್ತಮ ಬ್ಯಾಟಿಂಗ್ ನಡೆಸಿರುವ ರಾಹುಲ್, ತವರಿನ ಅಭಿಮಾನಿಗಳ ಎದುರು ಸ್ಮರಣೀಯ ಇನ್ನಿಂಗ್ಸ್ ಕಟ್ಟೋ ಲೆಕ್ಕಾಚಾರದಲ್ಲಿದ್ದಾರೆ.
ರಾಹುಲ್ ಕ್ಲಾಸಿಕ್ ಆಟ
ಚಿನ್ನಸ್ವಾಮಿ ಮೈದಾನದಲ್ಲಿ ಡೊಮೆಸ್ಟಿಕ್ ಹಾಗೂ ಕ್ಲಬ್ ಕ್ರಿಕೆಟ್ ಆಡಿ ಪಳಗಿರುವ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್. ತವರಿನಂಗಳಲ್ಲಿ ಆಡಿದ ಟೆಸ್ಟ್ ಪಂದ್ಯಗಳಲ್ಲೂ ರಾಹುಲ್, ಉತ್ತಮ ಪರ್ಫಾಮೆನ್ಸ್ ನೀಡಿದ್ದಾರೆ. ರಾಹುಲ್ರ ಈ ಸಾಲಿಡ್ ಟ್ರ್ಯಾಕ್ ರೆಕಾರ್ಡ್ ಫ್ಯಾನ್ಸ್ ವಿಶ್ವಾಸ ಹೆಚ್ಚಿಸಿದ್ರೆ ಕಿವೀಸ್ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ.
ಚಿನ್ನಸ್ವಾಮಿಯಲ್ಲಿ ರಾಹುಲ್
ಚಿನ್ನಸ್ವಾಮಿ ಮೈದಾನದಲ್ಲಿ 3 ಇನ್ನಿಂಗ್ಸ್ಗಳನ್ನಾಡಿರುವ ಕೆ.ಎಲ್.ರಾಹುಲ್, 195 ರನ್ಗಳಿಸಿದ್ದಾರೆ. ಮೂರು ಇನ್ನಿಂಗ್ಸ್ಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದು 65ರ ಸರಾಸರಿ ಹೊಂದಿದ್ದಾರೆ.
ಇದನ್ನೂ ಓದಿ:ಕೊಹ್ಲಿ, ರೋಹಿತ್ ಕೆಂಗಣ್ಣಿಗೆ ಗುರಿಯಾಗಿದ್ದ ಈ ನಿಯಮವನ್ನು ರದ್ದು ಮಾಡಿದ ಬಿಸಿಸಿಐ, ಆದರೆ..!
ನ್ಯೂಜಿಲೆಂಡ್ ವಿರುದ್ಧ ನೀಗುತ್ತಾ ಶತಕದ ಬರ?
ಚಿನ್ನಸ್ವಾಮಿ ಮೈದಾನದಲ್ಲಿ ಆಡಿದ ಮೂರೂ ಇನ್ನಿಂಗ್ಸ್ಗಳಲ್ಲಿ ಹಾಫ್ ಸೆಂಚುರಿ ಸಿಡಿಸಿರುವ ಕೆ.ಎಲ್ ರಾಹುಲ್, ಶತಕದ ಗಡಿ ದಾಟುವಲ್ಲಿ ಫೇಲ್ ಆಗಿದ್ದಾರೆ. ಇದೀಗ ಕಿವೀಸ್ ವಿರುದ್ಧ ಶತಕ ಸಿಡಿಸುವ ಹಂಬಲ ರಾಹುಲ್ದ್ದಾಗಿದೆ. ತವರಿನಂಗಳದಲ್ಲಿ ತವರಿನ ಅಭಿಮಾನಿಗಳ ಎದುರು ಸೆಂಚುರಿ ಸಿಡಿಸೋ ಕನಸು ನನಸಾಗಲಿ ಅನ್ನೋದೇ ಎಲ್ಲರ ಆಶಯವಾಗಿದೆ.
ಇದನ್ನೂ ಓದಿ:ಬರ್ತ್ ಡೇ ದಿನವೂ ಹಾರ್ದಿಕ್ಗೆ ಕಾಡಿತ್ತು ಬೇಸರ; ಸ್ಟಾರ್ ಯೂಟ್ಯೂಬರ್ ಜೊತೆ ನತಾಶಾ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್