/newsfirstlive-kannada/media/post_attachments/wp-content/uploads/2024/10/CHINNASWAMY.jpg)
ಬೆಂಗಳೂರು: ನಿನ್ನೆ ಶುರುವಾಗಬೇಕಿದ್ದ ಟೀಮ್ ಇಂಡಿಯಾ, ನ್ಯೂಜಿಲೆಂಡ್ ತಂಡದ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಇದೀಗ ಕ್ರಿಕೆಟ್ ಅಭಿಮಾನಿಗಳಿಗೆ ಮಳೆರಾಯ ಗುಡ್ನ್ಯೂಸ್ ನೀಡಿದ್ದು, ಇಂದು ಪಂದ್ಯ ಆರಂಭ ಆಗೋದು ಬಹುತೇಕ ಕನ್ಫರ್ಮ್ ಆಗಿದೆ.
ಬೆಳಗ್ಗೆ ಜಿನುಗುತ್ತಿದ್ದ ಮಳೆರಾಯ ಬ್ರೇಕ್ ಕೊಟ್ಟಿದ್ದು, ಬೆಂಗಳೂರಲ್ಲಿ ಸೂರ್ಯ ಉದಯಿಸಿದ್ದಾನೆ. ಎಲ್ಲವೂ ಅಂದುಕೊಂಡಂತೆ ಆದರೆ ಬೆಳಗ್ಗೆ 9.30 ರಿಂದ ಪಂದ್ಯ ಆರಂಭ ಆಗಲಿದೆ. ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿರುವ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧವೂ ಗೆಲುವಿನ ನಗಾರೆ ಬೀರುವ ಇರಾದೆಯಲ್ಲಿದೆ.
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧದ ಮೊದಲ ದಿನದ ಪಂದ್ಯ ದಿಢೀರ್ ರದ್ದು; ಟೀಮ್ ಇಂಡಿಯಾ ಕನಸು ಭಗ್ನ!
ಅದೇ ಟೀಮ್ ಫಿಕ್ಸ್..
ಬಾಂಗ್ಲಾ ಎದುರಿನ ಟೆಸ್ಟ್ನಲ್ಲಿ ಕಣಕ್ಕಿಳಿದಿದ್ದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ. ಕಳೆದ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ರೋಹಿತ್, ಈಗ ಫಾರ್ಮ್ಗೆ ಮರಳಬೇಕಿದೆ. ದತ್ತು ಪುತ್ರ ವಿರಾಟ್ ಹಾಗೂ ಮನೆ ಮಗ ಕೆ.ಎಲ್.ರಾಹುಲ್ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ಇವರಿಬ್ಬರ ಬ್ಯಾಟಿಂಗ್ ಝಲಕ್ ನೋಡಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ.
ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲೂ ಬದಲಾವಣೆ ಕಷ್ಟ ಸಾಧ್ಯ. ಪಿಚ್ ಮೇಲಿನ ಹುಲ್ಲು, ಮೋಡಕವಿದ ವಾತಾವರಣ ವೇಗಿಗಳಿಗೆ ನೆರವಾಗಲಿದೆ. ಹೀಗಾಗಿ 3 ಪೇಸರ್ಸ್ ಆ್ಯಂಡ್ 2 ಸ್ಪಿನ್ನರ್ಸ್ ಫಾರ್ಮಲಾದಲ್ಲೇ ಕಣಕ್ಕಿಳಿಯಲಿದ್ದು, ಜಸ್ಪ್ರೀತ್ ಬೂಮ್ರಾ, ಮೊಹಮದ್ ಸಿರಾಜ್, ಆಕಾಶ್ ದೀಪ್ ಪೇಸರ್ಗಳಾಗಿ ಚೆಂಡು ಹಂಚಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಜಡೇಜಾ, ಅಶ್ವಿನ್ ಸ್ಪಿನ್ ಟ್ವಿನ್ಸ್ ಆಗಿ ಕಣಕ್ಕಿಳಿಯೋದು ಫಿಕ್ಸ್.! ಲಂಕಾ ಪ್ರವಾಸದಲ್ಲಿ ಸ್ಪಿನ್ ಎದುರು ಕಿವೀಸ್ ಪರದಾಡಿದೆ. ಹೀಗಾಗಿ 3ನೇ ಸ್ಪಿನ್ನರ್ ಆಗಿ ಅಕ್ಷರ್ ಅಥವಾ ಕುಲ್ದೀಪ್ ಯಾದವ್ ಕಣಕ್ಕಿಳಿದರೂ ಅಚ್ಚರಿ ಇಲ್ಲ.
ಇದನ್ನೂ ಓದಿ: ವಿಜಯದಶಮಿ ಜಾಕ್ಪಾಟ್; ಗಳಿಕೆಯಲ್ಲಿ ಕೊಹ್ಲಿಯನ್ನೇ ಮೀರಿಸಿದ ಕಿಂಗ್ ಜಡೇಜಾ..!
GREAT NEWS FROM THE CHINNASWAMY STADIUM.
- No rain and we're set to have the Test match on time. 🇮🇳 pic.twitter.com/F8uoMjZbUH— Mufaddal Vohra (@mufaddal_vohra) October 17, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ