IND vs NZ; ಟೀಮ್ ಇಂಡಿಯಾಕ್ಕೆ ತೀವ್ರ ಸಂಕಷ್ಟ.. ಕೊಹ್ಲಿ, ಗಿಲ್, ಸರ್ಫರಾಜ್ ಕೇವಲ 1 ರನ್​ಗೆ ಔಟ್

author-image
Bheemappa
Updated On
IND vs NZ; ಟೀಮ್ ಇಂಡಿಯಾಕ್ಕೆ ತೀವ್ರ ಸಂಕಷ್ಟ.. ಕೊಹ್ಲಿ, ಗಿಲ್, ಸರ್ಫರಾಜ್ ಕೇವಲ 1 ರನ್​ಗೆ ಔಟ್
Advertisment
  • ವಿಲ್ ಯಂಗ್ ಅರ್ಧಶತಕ ಬಿಟ್ಟರೇ ಉಳಿದ ಬ್ಯಾಟರ್ಸ್ ಔಟ್ ಆದ್ರು
  • ಮತ್ತೆ ವಿಫಲ ಬ್ಯಾಟಿಂಗ್ ಮಾಡಿರುವ ರೋಹಿತ್ ಶರ್ಮಾ, ಜೈಸ್ವಾಲ್
  • ಅಲ್ಪ ಮೊತ್ತದ ಟಾರ್ಗೆಟ್​ ಮುಟ್ಟಲು ಟೀಮ್ ಇಂಡಿಯಾ ಹರಸಾಹಸ

ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಕೇವಲ 31 ರನ್​ಗೆ ಪ್ರಮುಖವಾದ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್​ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ನ್ಯೂಜಿಲೆಂಡ್ ತಂಡ ಸಾಧರಣ ಮೊತ್ತ ದಾಖಲಿಸಿತ್ತು. ಕೇವಲ 174 ರನ್​ಗೆ ಆಲೌಟ್ ಆಗಿತ್ತು. ವಿಲ್ ಯಂಗ್ ಅವರ ಹಾಫ್​ಸೆಂಚುರಿ ಬಿಟ್ಟರೇ ಉಳಿದವರೆಲ್ಲ ಬಂದಷ್ಟೇ ವೇಗವಾಗಿ ಪೆವಿಲಿಯನ್​ಗೆ ಸೇರಿದ್ದರು. ಆರ್​ ಅಶ್ವಿನ್, ಜಡೇಜಾ ಅವರ ಆಕ್ರಮಣಕಾರಿ ಸ್ಪೆಲ್​ ಸ್ಪಿನ್ ಮುಂದೆ ಕಿವೀಸ್ ಪ್ಲೇಯರ್ಸ್​ ಬ್ಯಾಟಿಂಗ್ ಮಾಡಲು ಹರಸಾಹಸ ಪಟ್ಟರು. ಹೀಗಾಗಿ ಆರ್​ ಅಶ್ವಿನ್ 3 ವಿಕೆಟ್ ಪಡೆದರೆ, ಜಡೇಜಾ 5 ವಿಕೆಟ್ ಕಿತ್ತು ಸಂಭ್ರಮಿಸಿದರು.

ಆದರೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ 174 ರನ್​ಗಳ ಸಾಧರಣ ಮೊತ್ತದ ಟಾರ್ಗೆಟ್​ ಬೆನ್ನು ಹತ್ತಿದೆ. ಆದರೆ ಕೇವಲ 31 ರನ್​ಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿ ಇದೆ. ಜೈಸ್ವಾಲ್ 5, ರೋಹಿತ್ ಶರ್ಮಾ 11, ಶುಭ್​ಮನ್ ಗಿಲ್ 1, ವಿರಾಟ್​ ಕೊಹ್ಲಿ 1, ಸರ್ಫರಾಜ್ 1 ರನ್​ಗೆ ಔಟ್ ಆದರು. ಈ ಮೂಲಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮತ್ತೊಮ್ಮೆ ವಿಫಲ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಪಂದ್ಯದಲ್ಲಿ 150 ರನ್​ಗಳನ್ನ ಸಿಡಿಸಿದ್ದ ಸರ್ಫರಾಜ್ ಕೂಡ ಬ್ಯಾಟಿಂಗ್​ನಲ್ಲಿ ಯಾವುದೇ ಸುಧಾರಣೆ ಕಾಣಲಿಲ್ಲ. ಶುಭ್​ಮನ್ ಗಿಲ್​ ಇದೇ ಪಂದ್ಯದಲ್ಲಿ 90 ರನ್​ ಸಿಡಿಸಿದ್ದರು. ಆದರೆ 2ನೇ ಇನ್ನಿಂಗ್ಸ್​ನಲ್ಲಿ 1 ರನ್​ ಅಷ್ಟೇ ಗಳಿಸಿ ಔಟ್ ಆಗಿದ್ದಾರೆ.

ಇದನ್ನೂ ಓದಿ:ಅಂಚೆ ಇಲಾಖೆಯಿಂದ ಶೀಘ್ರವೇ ದೊಡ್ಡ ಮಟ್ಟದಲ್ಲಿ ಉದ್ಯೋಗಗಳ ನೇಮಕಾತಿ..!

publive-image

ಸದ್ಯ ಟೀಮ್ ಇಂಡಿಯಾ ಟಾರ್ಗೆಟ್​ ತಲುಪಿದರೆ ಕಿವೀಸ್​ ಎದುರಿನ 3ನೇ ಟೆಸ್ಟ್​ ಪಂದ್ಯದಲ್ಲಿ ವಿಜಯ ಸಾಧಿಸುತ್ತದೆ. ಒಂದು ವೇಳೆ ಟಾರ್ಗೆಟ್​ ಒಳಗೆ ಆಲೌಟ್ ಆದರೆ ಕಿವೀಸ್ ವಿಜಯ ಪತಾಕೆ ಹಾರಿಸಿದಂತೆ ಅಗುತ್ತದೆ. ಭಾರತ ವೈಟ್​ವಾಶ್​ನಿಂದ ಪಾರಾಗಲು ಈ ಕೊನೆ ಇನ್ನಿಂಗ್ಸ್​ನಲ್ಲಿ ಜಯ ಸಾಧಿಸಬೇಕಿದೆ. ಸದ್ಯ ಭಾರತಕ್ಕೆ ಗೆಲುವು ಸಾಧಿಸಲು 95 ರನ್​ಗಳು ಬೇಕಿವೆ .

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment