/newsfirstlive-kannada/media/post_attachments/wp-content/uploads/2024/10/ROHIT-6.jpg)
ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್​ನ ಎರಡನೇ ದಿನ ರೋಹಿತ್ ಪಡೆಗೆ ದೊಡ್ಡ ಆಘಾತ ಆಗಿದೆ. ಮಳೆಯ ನಡುವೆಯೂ ಟಾಸ್​ ಗೆದ್ದ ಬ್ಯಾಟಿಂಗ್ ಆರಂಭಿಸಿದ್ದ ಟೀಂ ಇಂಡಿಯಾ, ಕಿವೀಸ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿದೆ.
ಮಳೆಯ ಕಾರಣ ಸದ್ಯ ಪಂದ್ಯವನ್ನು ನಿಲ್ಲಿಸಲಾಗಿದೆ. ಆದರೆ 12.4 ಓವರ್​ ಆಡಿರುವ ಭಾರತ 13 ರನ್​ಗಳಿಸಿ 3 ವಿಕೆಟ್​ ಕಳೆದುಕೊಂಡಿದೆ. ಟೀಂ ಇಂಡಿಯಾದ ಟಾಪ್ ಆರ್ಡರ್​ ಬ್ಯಾಟ್ಸ್​​ಮನ್​ಗಳು ಮತ್ತೆ ಫೇಲ್ ಆಗಿದ್ದಾರೆ.
16 ಬಾಲ್ ಎದುರಿಸಿದ ಕ್ಯಾಪ್ಟನ್ ರೋಹಿತ್ 2 ರನ್​ಗಳಿಸಿ ಪೆವಿಲಿಯನ್​ಗೆ ಹೋದರು. ನಂತರ ಬಂದ ಕೊಹ್ಲಿ 9 ಬಾಲ್ ಎದುರಿಸಿ ಸೊನ್ನೆ ಸುತ್ತಿದರು. ಪ್ಲೆಯಿಂಗ್-11ನಲ್ಲಿ ಕೊನೆಗೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದ ಸರ್ಫರಾಜ್ ಖಾನ್ 3 ಬಾಲ್ ಆಡಿ ಸೊನ್ನೆ ಸುತ್ತಿದ್ದಾರೆ. ಸದ್ಯ ಯಶಸ್ವಿ ಜೈಸ್ವಾಲ್ ಹಾಗೂ ರಿಷಬ್ ಪಂತ್​​​ ಕ್ರೀಸ್​ನಲ್ಲಿದ್ದಾರೆ. ಮಳೆ ಹಿನ್ನೆಲೆಯಲ್ಲಿ ಮ್ಯಾಚ್​​ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ