Advertisment

ಫೀಲ್ಡಿಂಗ್​ನಲ್ಲೂ ಟೀಮ್​ ಇಂಡಿಯಾ 3 ಮಹಾ ಯಡವಟ್ಟು; ಪಂತ್ ಹೀಗ್ಯಾಕೆ ಮಾಡಿದರು?

author-image
Ganesh
Updated On
ಫೀಲ್ಡಿಂಗ್​ನಲ್ಲೂ ಟೀಮ್​ ಇಂಡಿಯಾ 3 ಮಹಾ ಯಡವಟ್ಟು; ಪಂತ್ ಹೀಗ್ಯಾಕೆ ಮಾಡಿದರು?
Advertisment
  • ಭಾರತ-ನ್ಯೂಜಿಲೆಂಡ್​ ಮೊದಲ ಟೆಸ್ಟ್​ ಪಂದ್ಯ
  • ಬೆಂಗಳೂರು ಟೆಸ್ಟ್​​ನಲ್ಲಿ ಕಿವೀಸ್​ ತಂಡ ಮೇಲುಗೈ
  • ಚಿನ್ನಸ್ವಾಮಿಯಲ್ಲಿ ನ್ಯೂಜಿಲೆಂಡ್​​ ಸಾಲಿಡ್​​ ಬ್ಯಾಟಿಂಗ್​

ಟೀಮ್​ ಇಂಡಿಯಾ ಬ್ಯಾಟರ್ಸ್​ ಮಕಾಡೆ ಮಲಗಿದ ಪಿಚ್​ನಲ್ಲೇ ಬಳಿಕ ಬ್ಯಾಟಿಂಗ್​ಗಿಳಿದ ನ್ಯೂಜಿಲೆಂಡ್​ ಬ್ಯಾಟರ್ಸ್​ ಬೊಂಬಾಟ್​ ಆಟವಾಡಿದ್ರು. ಬ್ಯಾಟಿಂಗ್​ನಲ್ಲಿ ಫ್ಲಾಪ್​ ಆದ ಟೀಮ್​ ಇಂಡಿಯಾ ಆಟಗಾರರು, ಫೀಲ್ಡಿಂಗ್​ನಲ್ಲೂ ಕಳಪೆ ಪ್ರದರ್ಶನ ನೀಡಿದರು.

Advertisment

46 ರನ್​ಗಳಿಸಿ ಟೀಮ್​ ಇಂಡಿಯಾ ಆಲೌಟ್​ ಆದ ಬಳಿಕ ಬ್ಯಾಟಿಂಗ್​ಗಿಳಿದ ನ್ಯೂಜಿಲೆಂಡ್​​ ಸಾಲಿಡ್​​ ಓಪನಿಂಗ್​ ಪಡೆದುಕೊಳ್ತು. ಡಿವೋನ್​ ಕಾನ್ವೆ, ಬಿರುಸಿನ ಆರಂಭ ಒದಗಿಸಿದ್ರೆ, ಟಾಮ್​ ಲಾಥಮ್​ ತಾಳ್ಮೆಯ ಆಟವಾಡಿದ್ರು. ಮೊದಲ ವಿಕೆಟ್​ಗೆ 65 ರನ್​ಗಳ ಜೊತೆಯಾಟವಾಡಿದರು. ಅಂತಿಮವಾಗಿ ಕಿವೀಸ್ ನಾಯಕ ಟಾಮ್​ ಲಾಥಮ್​ನ ಎಲ್​​ಬಿ ಬಲೆಗೆ ಕೆಡವಿದ ಕುಲ್​ದೀಪ್​ ಯಾದವ್​ ಬ್ರೇಕ್​ ಥ್ರೂ ನೀಡಿದರು. ಬಳಿಕ ಕಣಕ್ಕಿಳಿದ ವಿಲ್​ ಯಂಗ್​ ಇಂಡಿಯನ್​ ಬೌಲರ್​ನ ದಿಟ್ಟವಾಗಿ ಎದುರಿಸಿ ಬಿಗ್​ ಇನ್ನಿಂಗ್ಸ್​ ಕಟ್ಟೋ ಸೂಚನೆ ನೀಡಿದ್ರು. 73 ಎಸೆತ ಎದುರಿಸಿ 5 ಬೌಂಡರಿ ಸಹಿತ 33 ರನ್​ಗಳಿಸಿದ್ದ ವೇಳೆ ವಿಲ್​ ಯಂಗ್​ನ ರವೀಂದ್ರ ಜಡೇಜಾ ಔಟ್​ ಮಾಡಿದರು.

ಇದನ್ನೂ ಓದಿ:ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆ.ಎಲ್​.ರಾಹುಲ್ ಮತ್ತೊಂದು ಮಿಸ್ಟೇಕ್: VIDEO ವೈರಲ್

ಶತಕದಂಚಿನಲ್ಲಿ ಎಡವಿದ ಡಿವೋನ್​ ಕಾನ್ವೆ.!
ವಿಕೆಟ್​ ಪತನವಾದ್ರೂ ಅಬ್ಬರದ ಆಟವನ್ನೇ ಮುಂದುವರೆಸಿದ ಡಿವೋನ್​ ಕಾನ್ವೆ, ಬೌಂಡರಿ - ಸಿಕ್ಸರ್​ ಸಿಡಿಸಿ ಅಬ್ಬರಿಸಿದ್ರು. 11 ಬೌಂಡರಿ, 3 ಸಿಕ್ಸರ್​ ಸಿಡಿಸಿದ್ದ ಕಾನ್ವೆ, ಶತಕದಂಚಿನಲ್ಲಿ ಎಡವಿದ್ರು. 91 ರನ್​ಗಳಿದ್ದ ವೇಳೆ ಅಶ್ವಿನ್​ ಸ್ಪಿನ್​ ಬಲೆಗೆ ಬಿದ್ದರು. ಬಳಿಕ ಕ್ರಿಸ್​​ನಲ್ಲಿ ರಚಿನ್​ ರವಿಂದ್ರ, ಡೇರಿಲ್​ ಮಿಚೆಲ್​ ಜೊತೆಯಾಗಿದ್ದಾರೆ. ದಿನದ ಅಂತ್ಯಕ್ಕೆ ನ್ಯೂಜಿಲೆಂಡ್​ 3 ವಿಕೆಟ್​ ನಷ್ಟಕ್ಕೆ 180 ರನ್​ಗಳಿಸಿದೆ. ರಚಿನ್ ರವೀಂದ್ರ​ 22, ಡೇರಿಲ್​​ ಮಿಚೆಲ್​​ 14 ರನ್​ಗಳಿಸಿದ್ದು, ನಾಳೆಗೆ ಕ್ರಿಸ್​ ಕಾಯ್ದುಕೊಂಡಿದ್ದಾರೆ. ನ್ಯೂಜಿಲೆಂಡ್​ ತಂಡ 180 ರನ್​ಗಳ ಮುನ್ನಡೆ ಸಾಧಿಸಿದೆ.

Advertisment

ಫೀಲ್ಡಿಂಗ್​ನಲ್ಲೂ ಟೀಮ್​ ಇಂಡಿಯಾ ಯಡವಟ್ಟು
ಬ್ಯಾಟಿಂಗ್​ನಲ್ಲಿ ಫ್ಲಾಪ್​ ಶೋ ನೀಡಿ ಫೀಲ್ಡಿಂಗ್​ಗಿಳಿದ ಟೀಮ್​ ಇಂಡಿಯಾ, ಅಲ್ಲೂ ಮಾಡಿದ್ದು ಯಡವಟ್ಟನ್ನೇ. ನ್ಯೂಜಿಲೆಂಡ್​ ಬ್ಯಾಟಿಂಗ್​ ವೇಳೆ ಟೀಮ್​ ಇಂಡಿಯನ್ಸ್​ ಬರೋಬ್ಬರಿ 3 ಕ್ಯಾಚ್​​ ಮಾಡಿದ್ರು. ಸುಲಭದ ಸ್ಟಂಪ್​ ಔಟ್​​ ಅನ್ನೋ ರಿಷಭ್​ ಪಂತ್​ ಮಿಸ್​​ ಮಾಡಿದರು. ಒಟ್ಟಿನಲ್ಲಿ ನಿನ್ನೆಯ ದಿನದಾಟದಲ್ಲಿ ಎಲ್ಲಾ ವಿಭಾಗದಲ್ಲೂ ನ್ಯೂಜಿಲೆಂಡ್​ ಮೇಲುಗೈ ಸಾಧಿಸಿದ್ರೆ ಟೀಮ್​ ಇಂಡಿಯಾ ಹಿನ್ನಡೆ ಮೇಲೆ ಹಿನ್ನಡೆ ಅನುಭವಿಸಿದೆ. 3ನೇ ದಿನದಾಟವಾದ ಇಂದು ಪುಟಿದೇಳುತ್ತಾ ಕಾದು ನೋಡಬೇಕಿದೆ.

ಇದನ್ನೂ ಓದಿ:ಭಾರತ, ನ್ಯೂಜಿಲೆಂಡ್​ ಮಧ್ಯೆ ಮಹತ್ವದ ಟೆಸ್ಟ್​ ಸರಣಿ; ಟೂರ್ನಿಯಿಂದಲೇ ಸ್ಟಾರ್​ ಪ್ಲೇಯರ್ ಔಟ್​​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment