newsfirstkannada.com

×

ರಾಹುಲ್​​ಗೆ ರಾಹುಕಾಲ; 2ನೇ ಟೆಸ್ಟ್​​ನಲ್ಲಿ ಕನ್ನಡಿಗನ ಸ್ಥಾನದ ಮೇಲೆ ಕಣ್ಣಿಟ್ಟ ಸ್ಟಾರ್​ ಕ್ರಿಕೆಟರ್

Share :

Published October 23, 2024 at 8:37am

Update October 23, 2024 at 8:46am

    ಟೀಮ್ ಇಂಡಿಯಾ ಸೋಲಿಗೆ ರಾಹುಲ್ ಕಾರಣ

    ತಂಡದಿಂದ ಕೈಬಿಡುವಂತೆ ಬಿಸಿಸಿಐಗೆ ಬೇಡಿಕೆ

    ಪಿಚ್​​ಗೆ ಗೌರವ.. ಇದೇ ಲಾಸ್ಟ್ ಮ್ಯಾಚ್..?

ಕೆ.ಎಲ್.ರಾಹುಲ್ ಟೆಸ್ಟ್ ಕ್ರಿಕೆಟ್​ಗೆ ಹೇಳಿ ಮಾಡಿಸಿರುವ ಆಟಗಾರ. ನ್ಯೂಜಿಲೆಂಡ್ ಎದುರು ರಾಹುಲ್, ಕೆಲವೊತ್ತು ಸ್ಟ್ರ್ಯಾಂಡ್​ ಕೊಟ್ಟಿದ್ದರೂ ಸಾಕಿತ್ತು ಪಂದ್ಯದ ಫಲಿತಾಂಶವೇ ಬದಲಾಗ್ತಿತ್ತು. ಇಂಥ ಸಂಕಷ್ಟದಲ್ಲಿ ರಾಹುಲ್ ಕೈ ಹಿಡಿಯಲಿಲ್ಲ. ಈತನ ಆಟಕ್ಕೆ ಅಭಿಮಾನಿಗಳ ಆಕ್ರೋಶದ ಕಟ್ಟೆ ಒಡೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ರೋಸ್ಟ್ ಮಾಡ್ತಿರುವ ಫ್ಯಾನ್ಸ್​, ಬಿಸಿಸಿಐ ಮುಂದೆ ಒಂದು ಬೇಡಿಕೆ ಇಟ್ಟಿದ್ದಾರೆ.

ಮೊದಲ ಇನ್ನಿಂಗ್ಸ್​ ಡಕೌಟ್..
ಬೆಂಗಳೂರಿನ ಟೆಸ್ಟ್​ನಲ್ಲಿ ನಿರೀಕ್ಷೆಯ ಭಾರ ಇದಿದ್ದೇ. ಕನ್ನಡಿಗ ಕೆ.ಎಲ್.ರಾಹುಲ್​ ಮೇಲೆ. ತವರಿನ ಅಂಗಳದಲ್ಲಿ ಕೆ.ಎಲ್.ರಾಹುಲ್ ಅಬ್ಬರಿಸ್ತಾರೆ. ಗೆಲುವಿನ ರೂವಾರಿ ಆಗ್ತಾರೆ ಅಂತಾನೇ ಎಲ್ಲರೂ ನಿರೀಕ್ಷೆ ಇಟ್ಟಿದ್ರು. ಕೆ.ಎಲ್.ರಾಹುಲ್​ ಆ ನಿರೀಕ್ಷೆಯನ್ನೆಲ್ಲಾ ಸುಳ್ಳಾಗಿಸಿದ್ರು.
ಮೊದಲ ಇನ್ನಿಂಗ್ಸ್​ ಶೂನ್ಯಕ್ಕೆ ಪೆವಿಲಿಯನ್ ಸೇರಿದ್ದ ರಾಹುಲ್, 2ನೇ ಇನ್ನಿಂಗ್ಸ್​ನಲ್ಲಿ ಜವಾಬ್ದಾರಿಯುತ ಇನ್ನಿಂಗ್ಸ್​ ಕಟ್ಟಬೇಕಿತ್ತು. ಕನಿಷ್ಠ ಪಕ್ಷ ಎದುರಾರಾಳಿಗೆ ಪ್ರತಿರೋಧವನ್ನಾದರು ಒಡ್ಡಬೇಕಿತ್ತು. ಅನುಭವಿ ಆಟಗಾರ ಇದ್ಯಾವುದು ಮಾಡಲೇ ಇಲ್ಲ. ಪರಿಣಾಮವೇ 2ನೇ ಇನ್ನಿಂಗ್ಸ್​ ಉತ್ತಮ ಸ್ಥಿತಿಯಲ್ಲಿದ್ದ ಟೀಮ್ ಇಂಡಿಯಾ, ದಿಡೀರ್ ಕುಸಿತವಾಯ್ತು. ಸೋಲಿಗೆ ಸಿಲುಕಬೇಕಾಯ್ತು.

ಇದನ್ನೂ ಓದಿ:ಜೈಲಿನಿಂದಲೇ ಖ್ಯಾತ ನಿರ್ದೇಶಕನಿಗೆ ಪತ್ರ! ನನ್ಮ ಮೇಲಿನ ಎಲ್ಲಾ ಪ್ರಕರಣ ರಾಜಕೀಯ ಪ್ರೇರಿತ ಎಂದು ಉಲ್ಲೇಖ!

ಟಫ್ ಟೈಮ್​ನಲ್ಲಿ ರಾಹುಲ್ ಬಿಟ್ಟು ಎಲ್ಲರೂ ಆಡ್ತಾರೆ
ಕೆ.ಎಲ್.ರಾಹುಲ್ ವಿರುದ್ಧ ರೊಚ್ಚಿಗೆದ್ದಿರುವ ಅಭಿಮಾನಿಗಳು, ಟಫ್​ ಟೈಮ್​ನಲ್ಲಿ ಟೀಮ್ ಇಂಡಿಯಾದ ಎಲ್ಲ ಆಟಗಾರರು ಆಡ್ತಾರೆ. ಅದು ಕೆ.ಎಲ್.ರಾಹುಲ್ ಒಬ್ಬರು ಬಿಟ್ಟು ಎನ್ನುವ ಮಾತಿದೆ. ಹೀಗಾಗಿ ನಿರಂತರವಾಗಿ ಹಿನ್ನಡೆ ಅನುಭವಿಸುತ್ತಿರುವ ರಾಹುಲ್​​ರನ್ನು ತಂಡದಿಂದ ಕೈಬಿಟ್ಟರೂ ಅಚ್ಚರಿ ಇಲ್ಲ.

ಪಿಚ್​​ಗೆ ರಾಹುಲ್ ಗೌರವ.. ಇದೇ ಲಾಸ್ಟ್ ಮ್ಯಾಚ್?
ಪಂದ್ಯದ ಸೋಲಿನ ಬಳಿಕ ಆಟಗಾರರು ವಿಶ್ ಮಾಡ್ತಿದ್ರು. ಈ ವೇಳೆ ಕೆ.ಎಲ್.ರಾಹುಲ್​ ಪಿಚ್​ಗೆ ನಮಸ್ಕರಿಸಿದರು. ವೈರಲ್ ಆಗಿರುವ ಈ ವಿಡಿಯೋ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೆ.ಎಲ್​.ರಾಹುಲ್​ರದ್ದು ಇದೇ ಕೊನೆಯ ಪಂದ್ಯವಾ ಎಂಬ ಪ್ರಶ್ನೆ ಮೂಡಿದೆ.

ರಾಹುಲ್​​ಗೆ ‘ರಾಹುಕಾಲ’
ಒಂದ್ಕಡೆ ಸರ್ಫರಾಜ್ ಶತಕ ಸಿಡಿಸಿ ಮಿಂಚಿದ್ದಾರೆ. ಮತ್ತೊಂದೆಡೆ ಸಾಲಿಡ್ ಫಾರ್ಮ್​ನಲ್ಲಿರುವ ಶುಭ್​ಮನ್ ಮತ್ತೆ ಅಭ್ಯಾಸದ ಅಖಾಡಕ್ಕೆ ಇಳಿದಿದ್ದಾರೆ. ಇದು ಸಹಜವಾಗಿಯೇ ವೈಫಲ್ಯ ಅನುಭವಿಸ್ತಿರಯವ ಕೆ.ಎಲ್.ರಾಹುಲ್ ಸ್ಥಾನಕ್ಕೆ ಕುತ್ತು ತಂದಿದೆ. ಮುಂದಿನ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಇರಬೇಕಾ..? ಬೇಡ್ವಾ ಅನ್ನೋ ಪ್ರಶ್ನೆಗೂ ನಾಂದಿಯಾಡಿದೆ.

ಶುಭ್​ಮನ್ ಗಿಲ್ ಆ್ಯಂಡ್ ಸರ್ಫರಾಜ್ ಆಟ ಪರೋಕ್ಷ ರಾಹುಲ್​ಗೆ ಚಿಂತೆಗೆ ದೂಡಿದೆ. ಅಷ್ಟೇ ಅಲ್ಲ. ತಾನೇ ತೋಡಿದ ಹಳಕ್ಕೆ ಕೆ.ಎಲ್.ರಾಹುಲ್ ಬೀಳುವ ದುಸ್ಥಿತಿಗೆ ಸಿಲುಕಿದ್ದಾರೆ. ಹೀಗಾಗಿ ರಾಹುಲ್​​ಗೆ ಸಂಚಕಾರ ಶುರುವಾಗಿದ್ದು, ಈಗಲಾದರು ಎಚ್ಚೆತ್ತುಕೊಳ್ಳದಿದ್ದರೆ ಗೇಟ್​ಪಾಸ್ ಫಿಕ್ಸ್.

ಇದನ್ನೂ ಓದಿ:Air India; ಭರ್ಜರಿ ಉದ್ಯೋಗಗಳು.. ಏರ್​ಪೋರ್ಟ್​ನಲ್ಲಿ ಕೆಲಸ ಮಾಡಲು ಬಯಸುವರಿಗೆ ಸುವರ್ಣಾವಕಾಶ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರಾಹುಲ್​​ಗೆ ರಾಹುಕಾಲ; 2ನೇ ಟೆಸ್ಟ್​​ನಲ್ಲಿ ಕನ್ನಡಿಗನ ಸ್ಥಾನದ ಮೇಲೆ ಕಣ್ಣಿಟ್ಟ ಸ್ಟಾರ್​ ಕ್ರಿಕೆಟರ್

https://newsfirstlive.com/wp-content/uploads/2024/09/KL-Rahul_Team-India.jpg

Load More