/newsfirstlive-kannada/media/post_attachments/wp-content/uploads/2025/02/Axar_Patel.jpg)
2025ರ ಚಾಂಪಿಯನ್ಸ್ ಟ್ರೋಫಿಯ ಮಹತ್ವದ ಪಂದ್ಯ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆಯುತ್ತಿದೆ. ಸದ್ಯ ಬ್ಯಾಟಿಂಗ್ ಮಾಡುತ್ತಿರುವ ಪಾಕಿಸ್ತಾನದ ಓಪನರ್ ಬ್ಯಾಟ್ಸ್ಮನ್ ಅನ್ನು ರನೌಟ್ ಮಾಡುವ ಮೂಲಕ ಟೀಮ್ ಇಂಡಿಯಾ ಪ್ಲೇಯರ್ ಸಂಭ್ರಮಿಸಿದ್ದಾರೆ.
ದುಬೈ ಅಂತರರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಅದರಂತೆ ಓಪನಿಂಗ್ ಬ್ಯಾಟಿಂಗ್ಗೆ ಆಗಮಿಸಿದ ಇಮಾಮ್-ಉಲ್-ಹಕ್ ಹಾಗೂ ಬಾಬರ್ ಅಜಂ ಕೆಲ ಸಮಯ ಭಾರತ ಬೌಲರ್ಸ್ ಅನ್ನು ಕಾಡಿದರು. ಪಾಕ್ ಓಪನರ್ಸ್ ಇನ್ನೇನು ಕ್ರೀಸ್ನಲ್ಲಿ ಸೆಟಲ್ ಆಗಬೇಕು ಎನ್ನುವಷ್ಟರಲ್ಲಿ ಯುವ ಆಲ್ರೌಂಡರ್ ಅಕ್ಷರ್ ಪಟೇಲ್ ನೇರ ವಿಕೆಟ್ಗೆ ಬಾಲ್ ಎಸೆಯುವ ಮೂಲಕ ಬಿಗ್ ವಿಕೆಟ್ ಉರುಳಿಸಿದ್ದಾರೆ.
ಸ್ಪಿನ್ನರ್ ಕುಲ್ದೀಪ್ ಯಾದವ್ 10ನೇ ಓವರ್ನ ಮೊದಲ ಬಾಲ್ ಮಾಡಿದರು. ಇದನ್ನು 10 ರನ್ ಗಳಿಸಿ ಆಡುತ್ತಿದ್ದ ಇಮಾಮ್-ಉಲ್-ಹಕ್ ಅವರು ಫ್ರಂಟ್ ಬಂದು ಬಾರಿಸಿದರು. ಆದರೆ ಅಕ್ಷರ್ ಪಟೇಲ್ ಶರವೇಗದಲ್ಲಿ ಬಾಲ್ ಪಿಕ್ ಮಾಡಿ ನೇರ ವಿಕೆಟ್ಗೆ ಹೊಡೆದರು. ಈ ನಿರ್ಧಾರ ಮೂರನೇ ಅಂಪೈರ್ ಬಳಿಗೆ ಹೋಗಿತ್ತು. ಅವರು ಎಲ್ಲವನ್ನು ಸರಿಯಾಗಿ ಪರಿಶೀಲಿಸಿ ಇಮಾಮ್-ಉಲ್-ಹಕ್ ರನೌಟ್ ಎಂದು ಸ್ಕ್ರೀನ್ ತೋರಿಸಲಾಯಿತು. ಇದರಿಂದ ಸ್ಟೇಡಿಯಂನಲ್ಲಿದ್ದ ಪಾಕ್ ಅಭಿಮಾನಿಗಳು ಬೇಸರದಿಂದ ತಲೆ ಮೇಲೆ ಕೈ ಇಟ್ಟುಕೊಂಡರು.
ಭಾರತದ ನಾಯಕ ರೋಹಿತ್ ಶರ್ಮಾ ಟಾಸ್ ಸೋತು ಮೊದಲು ಫೀಲ್ಡಿಂಗ್ ಮಾಡುತ್ತಿದ್ದಾರೆ. ಸ್ಟೇಡಿಯಂ ಎಲ್ಲ ಫುಲ್ ಆಗಿದ್ದು ಅಭಿಮಾನಿಗಳ ಸೆಲೆಬ್ರೆಷನ್ ದೊಡ್ಡ ಮಟ್ಟದಲ್ಲಿದೆ. ಈ ಪಂದ್ಯದ ಪ್ರತಿ ಬಾಲ್ ಕೂಡ ಮಹತ್ವ ಪಡೆದುಕೊಂಡಿದೆ ಎನ್ನಬಹುದು. ಸದ್ಯ ಪಾಕಿಸ್ತಾನ 20 ಓವರ್ಗೆ 2 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದೆ. ಪಾಂಡ್ಯ ಬೌಲಿಂಗ್ನಲ್ಲಿ ಬಾಬಾರ್ ಅಜಂ ಕೂಡ 23 ರನ್ಗೆ ಔಟ್ ಆಗಿದ್ದಾರೆ.
this run out, can watch it on loop! axar patel. pic.twitter.com/QetVkbTM1o
— 𝒑. (@ssnoozemode)
this run out, can watch it on loop! axar patel. https://t.co/QetVkbTM1o
— 𝒑. (@ssnoozemode) February 23, 2025
">February 23, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ