ಚಾಂಪಿಯನ್ ಟ್ರೋಫಿ ವೇಳಾಪಟ್ಟಿ ಪ್ರಕಟ: ಭಾರತ-ಪಾಕ್ ಮುಖಾಮುಖಿ ಯಾವಾಗ? ಪಂದ್ಯ ಎಲ್ಲಿ?

author-image
Ganesh Nachikethu
Updated On
ಚಾಂಪಿಯನ್ ಟ್ರೋಫಿ ವೇಳಾಪಟ್ಟಿ ಪ್ರಕಟ: ಭಾರತ-ಪಾಕ್ ಮುಖಾಮುಖಿ ಯಾವಾಗ? ಪಂದ್ಯ ಎಲ್ಲಿ?
Advertisment
  • ಬಹುನಿರೀಕ್ಷಿತ ಚಾಂಪಿಯನ್ ಟ್ರೋಫಿ 2025ರ ಟೂರ್ನಿ
  • ಚಾಂಪಿಯನ್ ಟ್ರೋಫಿ ಸಂಪೂರ್ಣ ವೇಳಾಪಟ್ಟಿ ಪ್ರಕಟ
  • ಟೀಮ್​ ಇಂಡಿಯಾ ಎಲ್ಲಾ ಪಂದ್ಯ ದುಬೈನಲ್ಲೇ ಆಡಲಿದೆ!

ಬಹುನಿರೀಕ್ಷಿತ ಚಾಂಪಿಯನ್ ಟ್ರೋಫಿ 2025ರ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ರಿಲೀಸ್​ ಮಾಡಿದೆ. ಟೀಮ್​ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲೇ ಆಡಲಿದೆ. ಉಳಿದ ದೇಶಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ.

ಮುಂದಿನ ವರ್ಷ ಫೆಬ್ರವರಿ 19ನೇ ತಾರೀಕಿನಿಂದಲೇ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಶುರುವಾಗಲಿದೆ. ಟೀಮ್​ ಇಂಡಿಯಾ ಮಾತ್ರ ಫೆಬ್ರವರಿ 20ನೇ ತಾರೀಕಿನಿಂದ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಅಭಿಯಾನ ಆರಂಭಿಸಲಿದೆ.

ಚಾಂಪಿಯನ್ ಟ್ರೋಫಿ ಟೂರ್ನಿಯಲ್ಲಿ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ಇದೆ. ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳಿವೆ. ಟೂರ್ನಿಯ ಫೈನಲ್‌ ಪಂದ್ಯ ಮಾರ್ಚ್ 9 ರಂದು ನಡೆಯಲಿದೆ.

ಟೀಮ್​ ಇಂಡಿಯಾ ಪಂದ್ಯಗಳು ಯಾವಾಗ?

ಇನ್ನು, ಟೀಮ್​ ಇಂಡಿಯಾ ಫೆಬ್ರವರಿ 20ರಿಂದ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡಲಿದೆ. ನಂತರ ಫೆಬ್ರವರಿ 23ರಂದು ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಮಾರ್ಚ್ 2ರಂದು ನ್ಯೂಜಿಲೆಂಡ್ ವಿರುದ್ಧ 3ನೇ ಮತ್ತು ಕೊನೆಯ ಪಂದ್ಯ ಆಡಲಿದೆ. ಎರಡೂ ಗುಂಪಿನ ಅಗ್ರ-2 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಫೈನಲ್‌ ಪಂದ್ಯ ಲಾಹೋರ್‌ನಲ್ಲಿ ನಡೆಯಲಿದೆ. ಭಾರತ ಫೈನಲ್‌ಗೆ ಅರ್ಹತೆ ಪಡೆದರೆ ಆ ಪಂದ್ಯ ದುಬೈನಲ್ಲಿ ನಡೆಯಲಿದೆ.

ಚಾಂಪಿಯನ್ಸ್ ಟ್ರೋಫಿ 2025ರ ಭಾರತದ ವೇಳಾಪಟ್ಟಿ ಹೀಗಿದೆ!

ಫೆಬ್ರವರಿ-20 : ಬಾಂಗ್ಲಾದೇಶ vs ಭಾರತ, ದುಬೈ
ಫೆಬ್ರವರಿ-23 : ಪಾಕಿಸ್ತಾನ vs ಭಾರತ- ದುಬೈ
ಮಾರ್ಚ್-2 : ನ್ಯೂಜಿಲೆಂಡ್ vs ಭಾರತ- ದುಬೈ
ಮಾರ್ಚ್-4 : ಸೆಮಿಫೈನಲ್ ಪಂದ್ಯ 1- ದುಬೈ
ಮಾರ್ಚ್-5 : ಸೆಮಿಫೈನಲ್ ಪಂದ್ಯ 2- ಲಾಹೋರ್, ಪಾಕಿಸ್ತಾನ
ಮಾರ್ಚ್- 9 : ಫೈನಲ್ ಪಂದ್ಯ- ಲಾಹೋರ್ ಅಥವಾ ದುಬೈ

ಇದನ್ನೂ ಓದಿ:ಟೀಮ್​ ಇಂಡಿಯಾಗೆ ಬಿಗ್​ ಶಾಕ್​​; 4ನೇ ಟೆಸ್ಟ್​ನಿಂದ ಕ್ಯಾಪ್ಟನ್​ ರೋಹಿತ್​ ಔಟ್​​; ಕಾರಣವೇನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment