newsfirstkannada.com

Sakath Story: ‘ಸಿಕ್ಸ್​ ಬಾರಿಸಿದ್ರೆ ಬ್ಯಾಟ್​ನಲ್ಲಿ ಹೊಡಿತೀನಿ’- ವೀರೇಂದ್ರ ಸೆಹ್ವಾಗ್‌ಗೆ ಸಚಿನ್ ತೆಂಡೂಲ್ಕರ್ ವಾರ್ನಿಂಗ್!

Share :

Published August 19, 2023 at 12:01pm

    ಸೆಹ್ವಾಗ್ ಹುಚ್ಚಾಟದ ಬ್ಯಾಟಿಂಗ್‌ಗೆ ಸಚಿನ್ ತೆಂಡೂಲ್ಕರ್​​ ಕೋಪ

    ಸಚಿನ್ ಹೇಳಿರುವುದು ಬುದ್ಧಿ ಮಾತಿಗೋ, ಸಾಧನೆ ಮಾಡಲೋ?​

    ಪಾಕ್​ ವಿರುದ್ಧದ ಟೆಸ್ಟ್​ನಲ್ಲಿ ಸೆಹ್ವಾಗ್​ ಸಿಡಿಲಬ್ಬರದ ಬ್ಯಾಟಿಂಗ್​

ವೀರೇಂದ್ರ ಸೆಹ್ವಾಗ್ ಅಂದ್ರೆ ಕ್ರಿಕೆಟ್ ಅಭಿಮಾನಿಗಳ ಕಣ್‌ ಮುಂದೆ ಬರೋದೇ ಅವರ​ ಸ್ಫೋಟಕ ಬ್ಯಾಟಿಂಗ್. ಆದ್ರೆ, ಇದೇ ಹುಚ್ಚಾಟದ ಬ್ಯಾಟಿಂಗ್​ ಸಚಿನ್​​ ತೆಂಡೂಲ್ಕರ್​ ಕೋಪಕ್ಕೆ ಕಾರಣವಾಗಿತ್ತು.

ವೀರೇಂದ್ರ ಸೆಹ್ವಾಗ್ .. ಟೀಮ್ ಇಂಡಿಯಾದ ಡೇರಿಂಗ್ ಆ್ಯಂಡ್ ಡ್ಯಾಶಿಂಗ್ ಬ್ಯಾಟ್ಸ್​ಮನ್​.. ಚೆಂಡು ಇರೋದೇ ದಂಡಿಸೋಕೆ ಅನ್ನೋದು ಸೆಹ್ವಾಗ್​ರ ಮೂಲ ಮಂತ್ರ. ಯಾವುದೇ ಫಾರ್ಮೆಟ್​ ಆಗಲಿ, ಬೌಂಡರಿಗೆ ಅಟ್ಟೋದೆ ಸೆಹ್ವಾಗ್​ರ ಪರಮ ಗುರಿ. ಆದರೆ, ಇದೇ ಬ್ಯಾಟಿಂಗ್ ಗಾಡ್​ ಆಫ್​ ಕ್ರಿಕೆಟ್​​ ​ಸಚಿನ್ ತೆಂಡೂಲ್ಕರ್ ಆಕ್ರೋಶಕ್ಕೆ ಕಾರಣವಾಗಿತ್ತು.

ಲಾಂಗ್​ನಲ್ಲಿ ಸಿಕ್ಸ್ ಹೊಡೆದಿದ್ದ ಸೆಹ್ವಾಗ್

ಹೌದು! ಅದು 2004ರ ಪಾಕ್ ಪ್ರವಾಸ.. ಈ ಪ್ರವಾಸದ ಮುಲ್ತಾನ್ ಟೆಸ್ಟ್​ನಲ್ಲಿ ಅಕ್ಷರಶಃ ಪಾಕ್​ ಬೌಲರ್​ಗಳನ್ನ ವಿರೇಂದ್ರ ಸೆಹ್ವಾಗ್, ಇನ್ನಿಲ್ಲದೆ ದಂಡಿಸಿದ್ದರು. ಆದರೆ ದ್ರಾವಿಡ್ ವಿಕೆಟ್ ಪತನದ ಬಳಿಕ ಕ್ರೀಸ್​ಗೆ ಆಗಮಿಸಿದ್ದ ಸಚಿನ್​, ಸೆಹ್ವಾಗ್​​​​ ಬ್ಯಾಟಿಂಗ್ ನೋಡಿ ಮೆಂಟಲ್ ಆಗಿದ್ದರು. ಪಾಕ್​​ನ ಸಕ್ಲೇನ್ ಮುಷ್ತಾಕ್ ಬೌಲಿಂಗ್​ನಲ್ಲಿ ಲಾಂಗ್​ನಲ್ಲಿ ಸಿಕ್ಸ್ ಹೊಡೆದಿದ್ದ ಸೆಹ್ವಾಗ್, ಕ್ಯಾಚ್ ಔಟ್ ಆಗುವ ಚಾನ್ಸ್ ಇತ್ತು. ಆದರೆ ಸ್ವಲ್ಪದರಲ್ಲೇ ಬಚಾವ್ ಆಗಿದ್ರು.

ಸೆಹ್ವಾಗ್​ ಮತ್ತು ಸಚಿನ್

ಈ ವೇಳೆ ಸೆಹ್ವಾಗ್ ಬಳಿಗೆ ಬಂದ ಸಚಿನ್, ಮತ್ತೆ ಸಿಕ್ಸ್​ ಹೊಡೆಯೋಕೆ ಮುಂದಾದ್ರೆ, ಬ್ಯಾಟ್​ನಲ್ಲಿ ನಿನ್ನೆ ಹೊಡೆಯುತ್ತೇನೆ ಎಂದು ವಾರ್ನಿಂಗ್​​​ ಮಾಡಿದ್ದರು. ಅಷ್ಟೇ ಅಲ್ಲ, ಇದೇ ವೇಳೆ ನಿನಗೆ 300 ರನ್ ಹೊಡೆಯೋ ಚಾನ್ಸ್ ಇದೆ. ಮಿಸ್ ಮಾಡ್ಕೊಬೇಡ ಎಂಬ ಮಾತುಗಳನ್ನ ಹೇಳಿದ್ದರು. ಇದಕ್ಕೆ ಸೆಹ್ವಾಗ್, ಪಾಕ್​ ಮೇಲೆ 250 ರನ್ ಯಾರು ಹೊಡೆದಿಲ್ಲ. ನಾನೇ ಮೊದಲಿಗ ಅಂತಾ ತಮಾಷೆಯಾಗಿ ಉತ್ತರಿಸಿದ್ದರು. ನಂತರ ಸೆಹ್ವಾಗ್​​ ನೋಡ ನೋಡುತ್ತಲೇ ಸಿಕ್ಸರ್​ನೊಂದಿಗೆ ತ್ರಿಶಕವನ್ನೇ ಪೂರೈಸಿಬಿಟ್ಟರು.

ಸೆಹ್ವಾಗ್​ ತ್ರಿಶತಕ ಸಿಡಿಸಿದ್ದೇ ತಡ ಸಚಿನ್ ಸಂಭ್ರಮದಲ್ಲಿ ತೇಲಾಡಿದ್ದರು. ಸಚಿನ್ ಮುಖದಲ್ಲಿನ ಮಂದಹಾಸ ನೋಡಿದ ಸೆಹ್ವಾಗ್ ಸಂತಸಕ್ಕೂ ಕೂಡ ಪಾರವೇ ಇರಲಿಲ್ಲ. ಇಂಟ್ರೆಸ್ಟಿಂಗ್.. ವಿಚಾರ ಅಂದ್ರೆ, ಈ ತ್ರಿಬಲ್ ಸೆಂಚುರಿ ಬಳಿಕವೇ ಸೆಹ್ವಾಗ್​ಗೆ ನಜಾಫ್‌ಗಢದ ನವಾಬ್ ಎಂಬ ಅಡ್ಡ ಹೆಸರು ಬಂತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Sakath Story: ‘ಸಿಕ್ಸ್​ ಬಾರಿಸಿದ್ರೆ ಬ್ಯಾಟ್​ನಲ್ಲಿ ಹೊಡಿತೀನಿ’- ವೀರೇಂದ್ರ ಸೆಹ್ವಾಗ್‌ಗೆ ಸಚಿನ್ ತೆಂಡೂಲ್ಕರ್ ವಾರ್ನಿಂಗ್!

https://newsfirstlive.com/wp-content/uploads/2023/08/SACHIN_SEHWAG_1-1.jpg

Load More