/newsfirstlive-kannada/media/post_attachments/wp-content/uploads/2024/10/INDW_PAKW_1.jpg)
ಪಾಕಿಸ್ತಾನದ ಮಹಿಳಾ ಕ್ರಿಕೆಟ್ ಟೀಮ್ ವಿರುದ್ಧ ಟೀಮ್ ಇಂಡಿಯಾದ ಆಟಗಾರ್ತಿಯರು ಇಂದು ಅಖಾಡಕ್ಕೆ ಇಳಿಯಲಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್​ ಪಂದ್ಯದಲ್ಲಿ ಇದು ಹೈವೋಲ್ಟೇಜ್ ಪಂದ್ಯವಾಗಿದ್ದು ಯಾರು ಗೆಲ್ಲಬಹುದು ಎಂದು ಕುತೂಹಲ ಮೂಡಿಸಿದೆ. ಇದು ಟೀಮ್ ಇಂಡಿಯಾದ 2ನೇ ಮ್ಯಾಚ್ ಆಗಿದ್ದು ಹರ್ಮನ್​ಪ್ರೀತ್ ಕೌರ್ ಪಡೆಗೆ ಗೆಲ್ಲುವ ನಿರೀಕ್ಷೆ ಹೆಚ್ಚಿದೆ.
ಇದನ್ನೂ ಓದಿ:ಜಾಲಿ ಮೂಡ್​ನಲ್ಲಿ ರೋಹಿತ್-ರಿತಿಕಾ.. ಅಬ್ದು ರೋಜಿಕ್ ಜೊತೆ ಫೋಸ್ ಕೊಟ್ಟಿದ್ದು ಎಲ್ಲಿ?
ಪಾಕಿಸ್ತಾನ ತಂಡದ ನೇತೃತ್ವ ಫಾತಿಮಾ ಸನಾ ವಹಿಸಲಿದ್ದು ಇತ್ತ ಟೀಮ್ ಇಂಡಿಯಾವನ್ನ ಹರ್ಮನ್​ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಈ ಟ್ರೋಫಿಯಲ್ಲಿ ಈಗಾಗಲೇ ನ್ಯೂಜಿಲೆಂಡ್ ವಿರುದ್ಧ ಆರಂಭಿಕ ಪಂದ್ಯವಾಡಿರುವ ಟೀಮ್ ಇಂಡಿಯಾ ಸೋಲು ಕಂಡಿದೆ. ಅಲ್ಲದೇ ಶ್ರೀಲಂಕಾ ವಿರುದ್ಧ ಕಣಕ್ಕೆ ಇಳಿದಿದ್ದ ಪಾಕ್​ 31 ರನ್​ಗಳಿಂದ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಹೀಗಾಗಿ ಇವತ್ತಿನ ಪಂದ್ಯ ಭಾರತಕ್ಕೆ ಮುಖ್ಯವಾಗಿದೆ. ಭಾರತ ಗೆದ್ದು ಗೆಲುವಿನ ಖಾತೆ ತೆರೆದರೆ ಟೂರ್ನಿಯಲ್ಲಿ ಆಡಲಿದೆ. ಇನ್ನು ಭಾರತ ಈ ಪಂದ್ಯದಲ್ಲಿ ಗೆದ್ದು ಗೆಲುವಿನ ಅಕೌಂಟ್ ಓಪನ್ ಮಾಡುತ್ತಾ ಎಂದು ಕಾದು ನೋಡಬೇಕಿದೆ. ಅಲ್ಲದೇ ಪಾಕ್​ ವಿರುದ್ಧ ಭಾರತ ಗೆಲ್ಲುವುದನ್ನೇ ಅಭಿಮಾನಿಗಳು ಕಾಯುತ್ತಿದ್ದಾರೆ. ಇಂದಿನ ಪಂದ್ಯ ಏನಾಗುತ್ತೋ ಎನ್ನುವ ಕುತೂಹಲವಂತೂ ಎಲ್ಲರಲ್ಲೂ ಇದೆ.
ಇನ್ನು ಭಾರತ-ಪಾಕ್ ಮಹಿಳಾ ಟಿ20 ಪಂದ್ಯ ದುಬೈನ ಇಂಟರ್​​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಸಮಯ ಇಂದು ಮಧ್ಯಾಹ್ನಾ 3 ಗಂಟೆ 30 ನಿಮಿಷಕ್ಕೆ ನಡೆಯಲಿದೆ. ಇಂದು ಭಾನುವಾರ ಆಗಿದ್ದರಿಂದ ಪಂದ್ಯ ವೀಕ್ಷಣೆ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ ಎಂದು ಹೇಳಬಹುದು. ಪಂದ್ಯ ನೇರ ಪ್ರಸಾರ ಸ್ಟಾರ್​​ ಸ್ಪೋರ್ಟ್ಸ್​ ನೆಟ್​ವರ್ಕ್​​ ಇರುತ್ತದೆ.
ಭಾರತ- ಪಾಕ್ ಪೈಪೋಟಿಯಲ್ಲಿ ಹೆಚ್ಚು ಪಂದ್ಯ ಗೆದ್ದವರು ಯಾರು? ​
- ಭಾರತ- ಪಾಕ್ ನಡುವೆ ಒಟ್ಟು ಪಂದ್ಯಗಳು= 15
- ಭಾರತ ಗೆದ್ದಿರುವ ಮ್ಯಾಚ್- 12
- ಪಾಕ್ ಗೆದ್ದಿರುವ ಮ್ಯಾಚ್- 3
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ