/newsfirstlive-kannada/media/post_attachments/wp-content/uploads/2024/06/IND-VS-SA-4.jpg)
ಇಂದು ಟಿ20 ವಿಶ್ವಕಪ್ ಫೈನಲ್ ಪಂದ್ಯವು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿದೆ. ಫೈನಲ್ ಫೈಟ್ನಲ್ಲಿ ಸೋಲಿಲ್ಲದ ಸರದಾರರು ಮುಖಾಮುಖಿಯಾಗ್ತಿದ್ದು, ಅಜೇಯವಾಗಿಯೇ ಟ್ರೋಫಿ ಗೆಲ್ಲಲು ಎದುರು ನೋಡ್ತಿವೆ. ಹರಿಣಗಳು ಚೊಚ್ಚಲ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ರೆ. ಇತ್ತ ಟೀಮ್ ಇಂಡಿಯಾ 17 ವರ್ಷಗಳ ಬಳಿಕ ಟಿ20 ವಿಶ್ವ ಮುಕುಟ ಮುಡಿಗೇರಿಸಿಕೊಳ್ಳಲು ಪಣ ತೊಟ್ಟಿದೆ.
ಹೈವೋಲ್ಟೇಜ್ ಪಂದ್ಯಗಳ ಮಧ್ಯೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ದಿಢೀರ್ ಸಭೆಯನ್ನು ಕರೆದಿದೆ. ICC ಎಲ್ಲಾ ಮಂಡಳಿಯ ಸದಸ್ಯರನ್ನು ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣಕ್ಕೆ ಬರುವಂತೆ ಆಹ್ವಾನಿಸಿದೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳ ಮಂಡಳಿ ಅಧ್ಯಕ್ಷರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ:‘ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋತರೆ..’ ರೋಹಿತ್ ಶರ್ಮಾ ವಿರುದ್ಧ ಶಾಕಿಂಗ್ ಹೇಳಿಕೆ ಕೊಟ್ಟ ಗಂಗೂಲಿ
ವರದಿಗಳ ಪ್ರಕಾರ.. ಟಿ20 ವಿಶ್ವಕಪ್‌ನ ಅಂತಿಮ ಪಂದ್ಯಕ್ಕೂ ಮುನ್ನ ಐಸಿಸಿ ಸಭೆ ನಡೆಸಬಹುದು. ಪಾಕ್ನ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ರಜಾ ನಖ್ವಿ ಹಾಗೂ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಪರಸ್ಪರ ಭೇಟಿಯಾಗಬಹುದು. ಜೊತೆಗೆ 2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ:ಗುಡ್ ನ್ಯೂಸ್.. ಫೈನಲ್ ಪಂದ್ಯವನ್ನೂ ನೀವು ಥಿಯೇಟರ್ನಲ್ಲೂ ನೋಡಬಹುದು..!
2023ರ ಏಷ್ಯಾ ಕಪ್ ಬಳಿಕ PCB ಮತ್ತು BCCI ನಡುವೆ ಯುದ್ಧ ನಡೆಯುತ್ತಿದೆ. 2023ರಲ್ಲಿ ಏಷ್ಯಾ ಕಪ್ ಅನ್ನು ಪಾಕಿಸ್ತಾನ ಆಯೋಜನೆ ಮಾಡಿತ್ತು. ಬಿಸಿಸಿಐ ಪಾಕಿಸ್ತಾನಕ್ಕೆ ಭಾರತ ತಂಡವನ್ನು ಕಳುಹಿಸಲು ನಿರಾಕರಿಸಿತ್ತು. ಇದೇ ಕಾರಣಕ್ಕೆ ಭಾರತದ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಸಲಾಗಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿ ಆತಿಥ್ಯದ ಜವಾಬ್ದಾರಿಯನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ. ಅದರ ಅಡಿಯಲ್ಲಿ ಟೀಮ್ ಇಂಡಿಯಾ ಎಲ್ಲಾ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಡಲಿದೆ ಎನ್ನಲಾಗುತ್ತಿದೆ. ಇವತ್ತಿನ ಸಭೆಯಲ್ಲಿ ಈ ವಿಚಾರ ನಿರ್ಧಾರವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:ವಿಶ್ವಕಪ್ ಗೆದ್ದ ತಂಡಕ್ಕೆ ಎಷ್ಟು ಕೋಟಿ ಬಹುಮಾನ ಸಿಗುತ್ತೆ.. ರನ್ನರ್ ಅಪ್ಗೂ ಇದೆ ಬಂಪರ್ ಲಾಟರಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ