/newsfirstlive-kannada/media/post_attachments/wp-content/uploads/2023/12/INDvsSA.jpg)
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ-20 ಸರಣಿಯ ಮೊದಲ ಪಂದ್ಯ ಇವತ್ತು ಡರ್ಬನ್​​ನಲ್ಲಿ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಪಂದ್ಯ ಆರಂಭವಾಗಲಿದೆ. ಸ್ಪೋರ್ಟ್ಸ್​​ 18 ಮತ್ತು ಜಿಯೋ ಸಿನಿಮಾದಲ್ಲಿ ಪಂದ್ಯವನ್ನು ನೋಡಬಹುದಾಗಿದೆ.
ವಿಶ್ವಕಪ್ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ಸೌತ್ ಆಫ್ರಿಕಾ ತವರಿನಲ್ಲಿ ಕಾದುಕುಳಿತಿದೆ. ಇತ್ತ ಚಾಂಪಿಯನ್​ ಟೀಮ್ ಇಂಡಿಯಾ, ಅದೇ ಗೆಲುವಿನ ನಾಗಲೋಟ ಮುಂದುವರಿಸುವ ತವಕದಲ್ಲಿದೆ. ಆದ್ರೆ, ಇದು ನಿಜಕ್ಕೂ ಸಾಧ್ಯಾನಾ ಎಂಬ ಪ್ರಶ್ನೆ ಉದ್ಭವಿಸಿದೆ. ಕಾರಣ ಟೀಮ್ ಇಂಡಿಯಾ ಆಟಗಾರರು!
ಟಿ20 ಸರಣಿಯಲ್ಲಿ ಇಂಡೋ-ಆಫ್ರಿಕಾ ತಂಡಗಳು ಮುಖಾಮುಖಿ ಆಗ್ತಿವೆ ನಿಜ. ಈ ಸರಣಿ ಇಂಡೋ, ಸೌತ್ ಆಫ್ರಿಕಾ ಟಿ20 ಎನ್ನುವುದಕ್ಕಿಂತ, ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿಯಂತೆ ಭಾಸವಾಗ್ತಿದೆ. ಇದಕ್ಕೆ ಕಾರಣ ಟಿ20 ತಂಡದಲ್ಲಿ ಕಾಣಿಸಿಕೊಳ್ತಿರುವ ಆಟಗಾರರು!
ಸೌತ್ ಆಫ್ರಿಕಾ ಸರಣಿಗೆ ಬಲಿಷ್ಠ ಯುವ ಆಟಗಾರರ ತಂಡವನ್ನೇ ಪ್ರಕಟಿಸಲಾಗಿದೆ. ಟೀಮ್ ಇಂಡಿಯಾ ಎಂಟ್ರಿಯ ಹಾದಿ ಮಾತ್ರ ಐಪಿಎಲ್. ಐಪಿಎಲ್​ನಲ್ಲಿ ಮಿಂಚು ಅರಿಸಿಯೇ ಟಿ20 ತಂಡದಲ್ಲಿ ಸ್ಥಾನ ಪಡೆದ ಈ ಆಟಗಾರರು, ಬಲಿಷ್ಠ ಸೌತ್ ಆಫ್ರಿಕಾ ಸವಾಲಿಗೆ ಸಜ್ಜಾಗಿದ್ದಾರೆ. ನಾಯಕ ಸೂರ್ಯಕುಮಾರ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಆರ್ಶ್​ದೀಪ್ ಸಿಂಗ್​​​ ಹೊರತು ಪಡೆಸಿದ್ರೆ ಉಳಿದೆಲ್ಲಾ ಆಟಗಾರರು ಅನಾನುಭವಿಗಳಾಗಿದ್ದಾರೆ. ಕೆಲ ಆಟಗಾರರು ಬೆರಳೆಣಿಕೆ ಅಂತಾರಾಷ್ಟ್ರೀಯ ಪಂದ್ಯಗಳನ್ನಷ್ಟೇ ಆಡಿದ್ದಾರೆ. ರಮಣ್​ ದೀಪ್ ಸಿಂಗ್, ವೈಶಾಕ್ ವಿಜಯ್ ಕುಮಾರ್, ಯಶ್​ ದಯಾಳ್​ಗೆ ಇದು ಮೊದಲ ಕರೆಯಾಗಿದೆ.
ಇದನ್ನೂ ಓದಿ:IND vs SA ಟಿ20ಯಲ್ಲಿ ಇವರೇ ಸೆಂಟರ್ ಆಫ್ ಅಟ್ರ್ಯಾಕ್ಷನ್; ಎದುರಾಳಿಗೆ ಶುರುವಾಗಿದೆ ನಡುಕ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us