Advertisment

ಟೀಂ ಇಂಡಿಯಾಗೆ ಹೀನಾಯ ಸೋಲು; ಸೋತರೂ ದಕ್ಷಿಣ ಆಫ್ರಿಕಾಗೆ ನಡುಕ ಹುಟ್ಟಿಸಿದ ಚಕ್ರವರ್ತಿ..!

author-image
Ganesh
Updated On
ಟೀಂ ಇಂಡಿಯಾಗೆ ಹೀನಾಯ ಸೋಲು; ಸೋತರೂ ದಕ್ಷಿಣ ಆಫ್ರಿಕಾಗೆ ನಡುಕ ಹುಟ್ಟಿಸಿದ ಚಕ್ರವರ್ತಿ..!
Advertisment
  • ಮೊದಲ ಪಂದ್ಯ ಗೆದ್ದ ಖುಷಿಯಲ್ಲಿದ್ದ ಭಾರತಕ್ಕೆ ಆಘಾತ
  • 3 ವಿಕೆಟ್​ಗಳ ಗೆಲುವು ಪಡೆದುಕೊಂಡ ದಕ್ಷಿಣ ಆಫ್ರಿಕಾ
  • ಶತಕವೀರ ಸಂಜು ಸೊನ್ನೆ ಸುತ್ತಿ ನಿರಾಸೆ ಮೂಡಿಸಿದರು

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ-20 ಪಂದ್ಯ ಗೆದ್ದು ಬೀಗಿದ್ದ ಸೂರ್ಯ ಪಡೆಗೆ ಎರಡನೇ ಮ್ಯಾಚ್​​ನಲ್ಲಿ ಮುಖಭಂಗವಾಗಿದೆ. ಅತಿಥೇಯ ಸಂಘಟನಾತ್ಮಕ ಆಟಕ್ಕೆ ಮೂರು ವಿಕೆಟ್​​ಗಳ ಗೆಲುವು ಸಿಕ್ಕಿದೆ.

Advertisment

ಟಾಸ್ ಸೋತು ಬ್ಯಾಟ್​ ಮಾಡಿದ್ದ ಟೀಂ ಇಂಡಿಯಾ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಆಟಗಾರ ಹಾಗೂ ಹಿಂದಿನ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಸಂಜು ಸ್ಯಾಮ್ಸನ್ ಸೊನ್ನೆ ಸುತ್ತಿ ಔಟ್ ಆದರು. ಅಭಿಷೇಕ್ ಶರ್ಮಾ ಕೂಡ 4 ರನ್​​ಗಳಿಗೆ ಇನ್ನಿಂಗ್ಸ್​ ಮುಗಿಸಿದರು.
ಇನ್ನು ಕ್ಯಾಪ್ಟನ್ ಸೂರ್ಯ ಕುಮಾರ್​ ಯಾದವ್, ಬಂದಷ್ಟೇ ವೇಗದಲ್ಲಿ ಪೆವಿಲಿಯನ್​​ ಪರೇಡ್ ನಡೆಸಿದರು. ಸೂರ್ಯ 4 ರನ್​ಗೆ ಸುಸ್ತಾದರೆ, ತಿಲಕ್ ವರ್ಮಾ 20, ಅಕ್ಸರ್ ಪಟೇಲ್ 27 ಹಾಗೂ ಹಾರ್ದಿಕ್ ಪಾಂಡ್ಯ 39 ರನ್​ಗಳನ್ನ ಆಡಿ ಸ್ವಲ್ಪ ಚೇತರಿಕೆ ನೀಡಿದರು. ರಿಂಕು ಸಿಂಗ್ ಮತ್ತೆ ರನ್​ಗಳಿಸುವಲ್ಲಿ ಫೇಲ್ ಆದರು. ಪರಿಣಾಮ ಭಾರತ ತಂಡ 20 ಓವರ್​ನಲ್ಲಿ 6 ವಿಕೆಟ್​ ಕಳೆದುಕೊಂಡು 124 ರನ್​ಗಳಿಸಿತ್ತು.

ಇದನ್ನೂ ಓದಿ: 2ನೇ ಟಿ20 ಪಂದ್ಯದಲ್ಲಿ ಕೈ ಕೊಟ್ಟ ಅಭಿಷೇಕ್​ ಶರ್ಮಾ; ಟೀಮ್​ ಇಂಡಿಯಾದಿಂದ ಗೇಟ್​ಪಾಸ್​

ಈ ಗುರಿಯನ್ನು ಬೆನ್ನು ಹತ್ತಿದ್ದ ದಕ್ಷಿಣ ಆಫ್ರಿಕಾ, 19 ಓವರ್​ನಲ್ಲಿ 128 ರನ್​ಗಳಿಸುವ ಮೂಲಕ ಅದ್ಭುತ ಗೆಲುವು ಪಡೆಯಿತು. ದಕ್ಷಿಣ ಆಫ್ರಿಕಾ ಪರ ಸ್ಟಬ್ಸ್​ 47 ರನ್​ಗಳಿಸಿ ತಂಡದ ಗೆಲುವಿಗೆ ಪ್ರಮುಖ ಆಧಾರವಾದರು. ಇನ್ನು, ಭಾರತದ ಪರ ವರಣ್ ಚಕ್ರವರ್ತಿ ಐದು ವಿಕೆಟ್ ಪಡೆದು ಎದುರಾಳಿ ತಂಡಕ್ಕೆ ಬಿಗ್ ಶಾಕ್ ನೀಡಿದರು. ನಿಗಧಿತ ನಾಲ್ಕು ಓವರ್​ ಮಾಡಿ ಕೇವಲ 17 ರನ್​​ ಅಷ್ಟೇ ನೀಡಿ ಮಿಂಚಿದರು. ಭಾರತ ತಂಡ ಸೋತರೂ ಬೊಂಬಾಟ್​ ಪ್ರದರ್ಶನ ನೀಡಿದ ವರುಣ್ ಚಕ್ರವರ್ತಿ ಮೆಚ್ಚುಗೆಗೆ ಪಾತ್ರರಾದರು.

Advertisment

ಇದನ್ನೂ ಓದಿ:ವಿಶ್ವಕಪ್ ಫೈನಲ್ ಕ್ಯಾಚ್ ವಿವಾದಕ್ಕೆ ಟ್ವಿಸ್ಟ್.. ದೊಡ್ಡ ಹೇಳಿಕೆ ಕೊಟ್ಟ ದಕ್ಷಿಣ ಆಫ್ರಿಕಾ ಆಟಗಾರ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment