ಯಂಗ್ ಇಂಡಿಯಾಕ್ಕೆ ಕಪ್ ಗೆಲ್ಲುವ ತವಕ.. ಸೂರ್ಯ ಪಡೆಯಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಹೇಗಿದೆ?

author-image
Bheemappa
Updated On
IND vs BAN T20; ಈ ಪಿಚ್​ನಲ್ಲಿ ಸೆಕೆಂಡ್ ಬ್ಯಾಟಿಂಗ್ ಮಾಡಿದ್ರೆ ಸೂರ್ಯಗೆ ಅದೃಷ್ಟ, ಯಾಕೆ?
Advertisment
  • ಕೊನೆ ಪಂದ್ಯದಲ್ಲಿ ಡೆಬ್ಯು ಕನಸು ಕಾಣುತ್ತಿರುವ ಯುವ ಕನ್ನಡಿಗ
  • ತವರಲ್ಲಿ ಮಾನ ಉಳಿಸಿಕೊಳ್ಳಲು ದಕ್ಷಿಣ ಆಫ್ರಿಕಾ ಹೋರಾಟ
  • 2-1 ಅಂತರದಿಂದ ಮುನ್ನಡೆ ಸಾಧಿಸಿರುವ ಯಂಗ್ ಇಂಡಿಯಾ

ಇಂದು ಜೊಹಾನ್ಸ್​ಬರ್ಗ್​ನಲ್ಲಿ T20 ಸರಣಿಯ ಫೈನಲ್ ಫೈಟ್ ನಡೆಯಲಿದೆ. 2-1 ಅಂತರದಿಂದ ಮುನ್ನಡೆ ಸಾಧಿಸಿರುವ ಯಂಗ್ ಇಂಡಿಯಾ, ಕಪ್ ಗೆಲ್ಲೋ ತವಕದಲ್ಲಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾಕ್ಕೆ, ಪ್ರತಿಷ್ಠೆಯ ಸವಾಲ್. ಸರಣಿಯನ್ನ ಸಮಬಲ ಮಾಡಿಕೊಂಡು, ತವರಿನಲ್ಲಿ ಮಾನ ಉಳಿಸಿಕೊಳ್ಳಲು ದಕ್ಷಿಣ ಆಫ್ರಿಕಾ ಹೋರಾಟಕ್ಕೆ ಸಜ್ಜಾಗಿದೆ.

ಈ​​ ಫೈಟ್​ನಲ್ಲಿ ಸರಣಿ ಗೆಲುವಾ, ಸಮಬಲನಾ..?

ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧದ T20 ಸರಣಿ, ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಈಗಾಗಲೇ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿರುವ ಸೂರ್ಯಕುಮಾರ್ ಪಡೆ, ಜೋಬರ್ಗ್​​ನಲ್ಲಿ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.

publive-image

ಫಾರ್ಮ್​​ಗೆ ಮರಳಿದ ಅಭಿಷೇಕ್.. ಶಾಕ್ ಕೊಟ್ಟ ಸಂಜು..!

ಡೇರಿಂಗ್ ಌಂಡ್ ಡ್ಯಾಶಿಂಗ್ ಬ್ಯಾಟ್ಸ್​ಮನ್ ಅಭಿಷೇಕ್ ಶರ್ಮಾ, ಸತತ ವೈಫಲ್ಯದಿಂದ ಹೊರಬಂದಿದ್ದಾರೆ. ಸೆಂಚೂರಿಯನ್​ನಲ್ಲಿ ಸಾಲಿಡ್ ಬ್ಯಾಟಿಂಗ್ ಮಾಡಿದ ಪಂಜಾಬ್ ಬಾಯ್, ಫಾರ್ಮ್​​ಗೆ ಮರಳಿದ್ದಾರೆ. ಮತ್ತೊಂದೆಡೆ ಸಂಜು ಸ್ಯಾಮ್ಸನ್​ರ ಸತತ 2 ಗೋಲ್ಡನ್ ಡಕ್, ಟೀಮ್ ಮ್ಯಾನೇಜ್ಮೆಂಟ್ ನಿದ್ದೆಗೆಡಿಸಿದೆ.

ಬಲಿಷ್ಠ ಮಿಡಲ್ ಆರ್ಡರ್​​​​ ಟೀಮ್ ಇಂಡಿಯಾ ಬಲ..!

ತಿಲಕ್ ವರ್ಮಾ, ಕ್ಯಾಪ್ಟನ್ ಸೂರ್ಯಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ, ಮಿಡಲ್ ಆರ್ಡರ್​​ ಬಲ ಹೆಚ್ಚಿಸಿದ್ದಾರೆ. ತಿಲಕ್, ಸೂರ್ಯ ಬ್ಯಾಟ್​ನಿಂದ ಕಾಂಟ್ರಿಬ್ಯೂಟ್ ಮಾಡಿದ್ದಾರೆ. ಈ ತ್ರಿಮೂರ್ತಿಗಳು ಕೊನೆಯ ಪಂದ್ಯದ ಬ್ಯಾಟಿಂಗ್​​ನಲ್ಲಿ ಅಬ್ಬರಿಸಿದ್ದೆ ಆದ್ರೆ, T20 ಸರಣಿ ಭಾರತದ ಪಾಲಾಗುತ್ತದೆ.

ಫೈನಲ್​ ಫೈಟ್​ನಲ್ಲಿ ರಿಂಕು, ಹಾರ್ದಿಕ್ ಅಬ್ಬರ ನಿರೀಕ್ಷೆ..!

ಅಗ್ರೆಸಿವ್ ಆಗಿ ಬ್ಯಾಟ್ ಬೀಸುತ್ತಿರುವ ಹಾರ್ದಿಕ್ ಪಾಂಡ್ಯ, 3 ಪಂದ್ಯಗಳಿಂದ ಕಲೆಹಾಕಿರೋದು 59 ರನ್. 88ರ ಸ್ಟ್ರೈಕ್​ರೇಟ್​ನಲ್ಲಿ ರನ್​ ಕಲೆ ಹಾಕಿರುವ ಪಾಂಡ್ಯರಿಂದ​​​ ಜೋಹಾನ್ಸ್​ಬರ್ಗ್​ನಲ್ಲಿ ರನ್​ ನಿರೀಕ್ಷಿಸಲಾಗುತ್ತಿದೆ. ಇನ್ನು ಸಿಕ್ಸರ್ ಕಿಂಗ್ ರಿಂಕು ಸಿಂಗ್, ಫುಲ್ ಸೈಲೆಂಟ್ ಆಗಿ ಬಿಟ್ಟಿದ್ದಾರೆ. ಫೈನಲ್​​ ಫೈಟ್​ನಲ್ಲಿ ರಿಂಕು, ಬ್ಯಾಟಿಂಗ್​ನಲ್ಲಿ ತನ್ನ ಪರಾಕ್ರಮ ತೋರಿಸಬೇಕಿದೆ.

ಕನ್ನಡಿಗ ವೈಶಾಕ್ ವಿಜಯ್​ಕುಮಾರ್​​ಗೆ ಸಿಗುತ್ತಾ ಡೆಬ್ಯು ಭಾಗ್ಯ..?

ಪಂಜಾಬ್​ನ ಡೈನಾಮಿಕ್ ಆಲ್​ರೌಂಡರ್ ರಮಣ್​ದೀಪ್ ಸಿಂಗ್, ಸೆಂಚೂರಿಯನ್​ನಲ್ಲಿ ಡೆಬ್ಯು ಮಾಡಿದ್ದಾರೆ. ಆದ್ರೆ ಬೆಂಚ್​​ನಲ್ಲಿ ಕಾಯುತ್ತಿರುವ ಕನ್ನಡಿಗ ವೇಗಿ ವೈಶಾಖ್ ವಿಜಯ್​ಕುಮಾರ್​, ಕೊನೆ ಪಂದ್ಯದಲ್ಲಿ ಡೆಬ್ಯು ಕನಸು ಕಾಣುತ್ತಿದ್ದಾರೆ. ಮಹತ್ವದ ಪಂದ್ಯದಲ್ಲಿ ಕ್ಯಾಪ್ಟನ್ ಸೂರ್ಯ, ಕನ್ನಡಿಗನಿಗೆ ಡೆಬ್ಯು ಕ್ಯಾಪ್ ಕೊಡಿಸುತ್ತಾರಾ, ಇಲ್ವಾ ಅನ್ನೋದೇ, ಸಸ್ಪೆನ್ಸ್ ಆಗಿದೆ.

publive-image

ಎದುರಾಳಿಗಳನ್ನ ಕಟ್ಟಿ ಹಾಕುವುದೇ ಬೌಲರ್​ಗಳಿಗೆ ಸವಾಲ್..!

ತವರಿನಲ್ಲಿ ಸರಣಿ ಸಮಬಲಕ್ಕಾಗಿ ಹೋರಾಟ ನಡೆಸಲಿರುವ ಆತಿಥೇಯ ದಕ್ಷಿಣ ಆಫ್ರಿಕಾ, ಇಂದು ಟೀಮ್ ಇಂಡಿಯಾಕ್ಕೆ ತಿರುಗೇಟು ನೀಡುವ ತವಕದಲ್ಲಿದೆ. ಈ ಪಿಚ್, ಬ್ಯಾಟರ್ಸ್​ಗೆ ಹೆಚ್ಚು ನೆರವಾಗೋದ್ರಿಂದ, ಆಫ್ರಿಕನ್ನರು ಟೀಮ್ ಇಂಡಿಯಾ ಬೌಲರ್​ಗಳ ಮೇಲೆ ಸವಾರಿ ನಡೆಸೋಕೆ ರೆಡಿಯಾಗಿದ್ದಾರೆ.

ಜೋಹಾನ್ಸ್​ಬರ್ಗ್​ ಮೈದಾನ, ಇಂದು ಅಕ್ಷರಶಃ ರಣಾಂಗಣವಾಗಲಿದೆ. ರನ್​ಭೂಮಿಯಲ್ಲಿ ಈ ಎರಡು ಬಲಿಷ್ಠ ತಂಡಗಳ ಜಿದ್ದಾಜಿದ್ದಿ ಫೈಟ್ ನೋಡಲು, ಕ್ರಿಕೆಟ್ ಅಭಿಮಾನಿಗಳು ಕಾಯ್ತಿದ್ದಾರೆ. ​​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment