Advertisment

IND vs SA; ಚಾಂಪಿಯನ್ಸ್​ vs ರನ್ನರ್​ ಅಪ್​ ಮಧ್ಯೆ ಜಿದ್ದಾಜಿದ್ದಿ.. ಯುವ ಆಟಗಾರರಿಗೆ ಇದು ಚಾಲೆಂಜ್!

author-image
Bheemappa
Updated On
IND vs SA; ಚಾಂಪಿಯನ್ಸ್​ vs ರನ್ನರ್​ ಅಪ್​ ಮಧ್ಯೆ ಜಿದ್ದಾಜಿದ್ದಿ.. ಯುವ ಆಟಗಾರರಿಗೆ ಇದು ಚಾಲೆಂಜ್!
Advertisment
  • ಸೋಲಿನ ಪ್ರತೀಕಾರದ ಕನಸಿನಲ್ಲಿ ಸೌತ್ ಆಫ್ರಿಕಾ ಕ್ರಿಕೆಟ್ ತಂಡ!
  • 15 ಪ್ಲೇಯರ್​ಗಳಲ್ಲಿ ಎಂಟು ಅನಾನುಭವಿ ಆಟಗಾರರು ಇದ್ದಾರೆ
  • ಸೌತ್ ಆಫ್ರಿಕಾಗೆ ಸೆಡ್ಡು ಹೊಡೀತಾರಾ IPL​ನ ಯುವ ಸ್ಟಾರ್ಸ್​.?

ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿ ಮುಗೀತು. ಈಗ ಟಿ20 ಸೀಸನ್ ಆರಂಭವಾಗುತ್ತಿದೆ. ಹಾಲಿ ಚಾಂಪಿಯನ್ಸ್ ಆ್ಯಂಡ್ ರನ್ನರ್ಸ್​ ಎದುರಿನ ಈ ಸರಣಿ ಜಿದ್ದಾಜಿದ್ದಿನ ಕಣವಾಗಿ ಮಾತ್ರವೇ ಉಳಿದಿಲ್ಲ. ಐಪಿಎಲ್ ವರ್ಸಸ್ ಸೌತ್ ಆಫ್ರಿಕನ್ ಪ್ಲೇಯರ್ಸ್ ನಡುವಿನ ಬಲ ಪ್ರದರ್ಶನದ ವೇದಿಕೆ ಆಗಿದೆ. ಅದ್ಯಾಕೆ ಈ ಮಾತು ಹೇಳುತ್ತಿದ್ದೇವೆ ಗೊತ್ತಾ?.

Advertisment

2024ರ ಜೂನ್​ 29 ರಂದು ಭಾರತ -ಸೌತ್​ ಆಫ್ರಿಕಾ ನಡುವಿನ ಫೈನಲ್​ ಫೈಟ್, ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆದ ಈ ಹೈಟೆನ್ಶನ್ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ರೋಹಿತ್ ಶರ್ಮಾ ನೇತೃತ್ವದಲ್ಲಿ ಜಯಭೇರಿ ಬಾರಿಸಿತ್ತು. ಈ ಅದ್ಭುತ ಕ್ಷಣಗಳು ಯಾರು ಮರೆಯಲು ಸಾಧ್ಯ.

ಇದನ್ನೂ ಓದಿ: ಐಷಾರಾಮಿ ಬಂಗಲೆ ಖರೀದಿಸಿದ ಟೀಮ್​ ಇಂಡಿಯಾದ ಯುವ ಬ್ಯಾಟರ್​.. ಇದರ ಬೆಲೆ ಎಷ್ಟು ಕೋಟಿ? 

publive-image

ಟಿ20 ವಿಶ್ವಕಪ್​ ಫೈನಲ್​​ನಲ್ಲಿ ಮುಖಾಮುಖಿಯಾಗಿದ್ದ ಈ ಮದಗಜಗಳು, ಟಿ20 ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಕಾದಾಡಿ ಕೊನೆ ಕ್ಷಣದವರೆಗೆ ಜಿದ್ದಾಜಿದ್ದಿನ ಹೋರಾಟ ನಡೆಸಿದ್ದವು. ಆದ್ರೆ, ಅಂತಿಮವಾಗಿ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್​ ಆಗಿ ಮೆರೆದಾಡಿತು. ಕೊನೆಯಲ್ಲಿ ಎಡವಿದ ಸೌತ್​ ಆಫ್ರಿಕಾ, ರನ್ನರ್​ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಆದ್ರೀಗ ಇದೇ ಮದಗಜಗಳ ಕಾದಾಟಕ್ಕೆ ಕೌಂಟ್​ ಡೌನ್ ಶುರುವಾಗಿದೆ. ಸೌತ್​ ಆಫ್ರಿಕಾಗೆ ಸೆಡ್ಡು ಹೊಡೆಯುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

Advertisment

ನಾಗಲೋಟ ಮುಂದುವರಿಸ್ತಾರಾ ಚಾಂಪಿಯನ್ಸ್..?

ತವರಿನಲ್ಲಿ ವಿಶ್ವಕಪ್ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ಸೌತ್ ಆಫ್ರಿಕಾ ಕಾದುಕುಳಿತಿದ್ದರೆ. ಇತ್ತ ಚಾಂಪಿಯನ್​ ಟೀಮ್ ಇಂಡಿಯಾ, ಅದೇ ಗೆಲುವಿನ ನಾಗಲೋಟ ಮುಂದುವರಿಸುವ ತವಕದಲ್ಲಿದೆ. ಆದ್ರೆ, ಇದು ನಿಜಕ್ಕೂ ಸಾಧ್ಯಾನಾ ಎಂಬ ಪ್ರಶ್ನೆ ಉದ್ಬವಿಸಿದೆ. ಇದಕ್ಕೆ ಕಾರಣ ಟೀಮ್ ಇಂಡಿಯಾ ಆಟಗಾರರು.

ಟಿ20 ಸರಣಿಯಲ್ಲಿ ಇಂಡೋ-ಆಫ್ರಿಕಾ ತಂಡಗಳು ಮುಖಾಮುಖಿ ಆಗ್ತಿವೆ ನಿಜ. ಆದ್ರೆ, ಈ ಸರಣಿ ಇಂಡೋ, ಸೌತ್ ಆಫ್ರಿಕಾ ಟಿ20 ಎನ್ನುವುದಕ್ಕಿಂತ, ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿಯಂತೆ ಭಾಸವಾಗ್ತಿದೆ. ಇದಕ್ಕೆ ಕಾರಣ ಟಿ20 ತಂಡದಲ್ಲಿ ಕಾಣಿಸಿಕೊಳ್ತಿರುವ ಆಟಗಾರರು.

ಟೀಮ್ ಇಂಡಿಯಾದಲ್ಲಿ ಐಪಿಎಲ್ ಆಟಗಾರರ ದಂಡು..!

ಸೌತ್ ಆಫ್ರಿಕಾ ಸರಣಿಗೆ ಬಲಿಷ್ಠ ಯುವ ಆಟಗಾರರ ತಂಡವನ್ನೇ ಪ್ರಕಟಿಸಲಾಗಿದೆ. ಆದ್ರೆ, ಟೀಮ್ ಇಂಡಿಯಾ ಎಂಟ್ರಿಯ ಹಾದಿ ಮಾತ್ರ ಐಪಿಎಲ್. ಐಪಿಎಲ್​ನಲ್ಲಿ ಮಿಂಚು ಅರಿಸಿಯೇ ಟಿ20 ತಂಡದಲ್ಲಿ ಸ್ಥಾನ ಪಡೆದ ಈ ಆಟಗಾರರು. ಈಗ ಬಲಿಷ್ಠ ಸೌತ್ ಆಫ್ರಿಕಾ ಸವಾಲಿಗೆ ಸಜ್ಜಾಗಿದ್ದಾರೆ.

Advertisment

ಇಂಟ್ರೆಸ್ಟಿಂಗ್ ಅಂದ್ರೆ, ನಾಯಕ ಸೂರ್ಯಕುಮಾರ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಆರ್ಶ್​ದೀಪ್ ಸಿಂಗ್​​​ ಹೊರತು ಪಡೆಸಿದ್ರೆ, ಉಳಿದೆಲ್ಲಾ ಆಟಗಾರರು ಅನಾನುಭವಿಗಳಾಗಿದ್ದಾರೆ. ಇನ್ನು ಕೆಲ ಆಟಗಾರರು ಬೆರಳೆಣಿಕೆ ಅಂತರಾಷ್ಟ್ರೀಯ ಪಂದ್ಯಗಳನ್ನಷ್ಟೇ ಆಡಿದ್ದಾರೆ. ಇದಿಷ್ಟೇ ಅಲ್ಲ, ರಮಣ್​ ದೀಪ್ ಸಿಂಗ್, ವೈಶಾಕ್ ವಿಜಯ್ ಕುಮಾರ್, ಯಶ್​ ದಯಾಳ್​ಗೆ, ಇದು ಮೊದಲ ಕರೆಯಾಗಿದೆ. ಹೀಗಾಗಿ ಪ್ರತೀಕಾರಕ್ಕಾಗಿ ಕಾದು ಕುಳಿತಿರುವ ಸೌತ್ ಆಫ್ರಿಕಾಗೆ ಸೆಡ್ಡು ಹೊಡೀತಾರಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದೆ.

ಇದನ್ನೂ ಓದಿ: 2000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ.. SSLC ಇಂದ ಪದವಿವರೆಗೆ ಓದಿದವರು ಅರ್ಜಿ ಸಲ್ಲಿಸಬಹುದು

publive-image

ಹರಿಣಗಳಿಗೆ ಸವಾಲ್ ಆಗ್ತಾರಾ ಐಪಿಎಲ್ ಸ್ಟಾರ್ಸ್​..?

ಚಾಂಪಿಯನ್ಸ್​ ಟೀಮ್ ಇಂಡಿಯಾ, ಸೌತ್ ಆಫ್ರಿಕಾ ಸವಾಲಿಗೆ ಸಜ್ಜಾಗಿದೆ. ಆದ್ರೆ. ಮೂರು ವಿಭಾಗಗಳಲ್ಲಿ ಬಲಿಷ್ಠವಾಗಿರುವ ಸೌತ್​ ಆಫ್ರಿಕಾನಾ, ತನ್ನದೇ ತವರಿನಲ್ಲಿ ಮಣಿಸುವುದು ನಿಜಕ್ಕೂ ಟಫ್ ಟಾಸ್ಕ್. ಒಂದು ಕಡೆ ಟಿ20 ಸ್ಪೆಷಲಿಸ್ಟ್​ಗಳ ದಂಡನ್ನೇ ಹೊಂದಿರುವ ಸೌತ್ ಆಫ್ರಿಕಾ, ಮಿಸೈಲ್​​​​​​​​​​​​​​​​​​​​ ಬೌಲಿಂಗ್ ಪಡೆಯನ್ನ ಹೊಂದಿದೆ. ಹೀಗಾಗಿ ಸೌತ್ ಆಫ್ರಿಕಾದಂತ ಬೌನ್ಸಿ ಟ್ರ್ಯಾಕ್​​ಗಳಲ್ಲಿ ಆಡಿರುವ ಅನುಭವ ಇಲ್ಲದ, ಯುವ ಪಡೆ ಹರಿಣಗಳನ್ನು ಕಟ್ಟಿ ಹಾಕುವುದು ನಿಜಕ್ಕೂ ಬಿಗ್ ಚಾಲೆಂಜ್.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment