newsfirstkannada.com

IND vs SA; ಹಿಟ್​​​ಮ್ಯಾನ್ ಇಂದಿನ ಬಿಗ್ ಮ್ಯಾಚ್​ ವಿನ್ನರ್.. ಇದಕ್ಕೆ ಅಸಲಿ ಕಾರಣ ಇಲ್ಲಿದೆ!

Share :

Published June 29, 2024 at 11:21am

Update June 29, 2024 at 12:26pm

    ರೋಹಿತ್​ ಸ್ಫೋಟಕ ಬ್ಯಾಟಿಂಗ್​ಗೆ ಬೆಚ್ಚಿ ಬಿದಿದ್ದ ಇಂಗ್ಲೆಂಡ್​ ತಂಡ

    ಎದುರಳಿಗಳನ್ನು ಲಾಕ್ ಮಾಡುವಾಗ ರೋಹಿತ್ ಏನೆಲ್ಲ ಮಾಡ್ತಾರೆ?

    ಆಸಿಸ್​, ಇಂಗ್ಲೆಂಡ್​ಗೆ ಬಾರಿಸಿದಂತೆ ಆಫ್ರಿಕಾಕ್ಕೂ ಕಾದಿದೆ ಆಪತ್ತು

ನಾಯಕ ಅಂದ್ರೆ ಹೀಗಿರಬೇಕು. ಜವಾಬ್ದಾರಿಯಿಂದ ಎಸ್ಕೇಪ್ ಆಗಲ್ಲ. ಏನಿದ್ರೂ ದಿಟ್ಟವಾಗಿ ಎದುರಿಸಿ ನಿಲ್ಲುವ ಅಭ್ಯಾಸ. ಅದೆಂಥ ಟಫ್​​ ಸಿಚುವೇಶನ್​ ಇರಲಿ. ತಾಳ್ಮೆ ಅಸ್ತ್ರದಿಂದ ಎದುರಾಳಿ ಕಟ್ಟಿಹಾಕುವ ಚಾಣಕ್ಷ. ಇದೀಗ ಇದೇ ರಿಯಲ್ ನಾಯಕ ಭಾರತ ತಂಡವನ್ನು ಟಿ20 ವಿಶ್ವಕಪ್​ನಲ್ಲಿ ಫೈನಲ್​ಗೇರಿಸಿದ್ದಾರೆ. ಟೀಮ್ ಇಂಡಿಯಾದ ಅನ್​ಸ್ಟಾಬಲ್​​ ಸಕ್ಸಸ್​ ಹಿಂದಿನ ಮಾಸ್ಟರ್​ಮೈಂಡ್​​​​​ ಹಿಟ್​ಮ್ಯಾನ್​ ಕಹಾನಿ ಹೇಗಿದೆ ಗೊತ್ತಾ?.

ಇನ್ನು ಒಂದೇ ಹೆಜ್ಜೆ. ಟೀಮ್ ಇಂಡಿಯಾ ಟಿ20 ವಿಶ್ವಕಪ್​ನಲ್ಲಿ ಹೊಸ ಭಾಷ್ಯ ಬರೆಯಲು ಉಳಿದಿರೋದು ಜಸ್ಟ್​ ಇನ್ನೊಂದೆ ಹೆಜ್ಜೆ. ಅನ್​ಸ್ಟಾಪಬಲ್​​​​​​​​ ಆಟವಾಡಿ ಗ್ರ್ಯಾಂಡ್​ ಆಗಿ ಫೈನಲ್​​ಗೆ ಎಂಟ್ರಿಕೊಟ್ಟಿದೆ. ಇಂದು ನಡೆಯುವ ಫೈನಲ್​​​​ ಫೈಟ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಡಲಿದ್ದು, ಇಡೀ ವಿಶ್ವದ ಚಿತ್ತ ಮದಗಜಗಳ ಕಾದಾಟದತ್ತ ನೆಟ್ಟಿದೆ.

ಇಲ್ಲಿವರೆಗಿನ ಭಾರತ ತಂಡದ ಅತ್ಯಾದ್ಭುತ ಪ್ರದರ್ಶನಕ್ಕೆ ಕ್ರಿಕೆಟ್ ಎಕ್ಸ್​ಫಟ್ಸ್ ಹಾಗೂ ಮಾಜಿ ಕ್ರಿಕೆಟರ್ಸ್​ನಿಂದ ಮೆಚ್ಚುಗೆಯ ಸುರಿಮಳೆ ವ್ಯಕ್ತವಾಗಿದೆ. ಈ ಅನ್​​​​ಸ್ಟಾಪಬಲ್​ ಸಕ್ಸಸ್​ ಹಿಂದಿನ ರಿಯಲ್ ಮಾಸ್ಟರ್​ ಮೈಂಡ್​​ ಕ್ಯಾಪ್ಟನ್ ರೋಹಿತ್ ಶರ್ಮಾ. ಆನ್​​​ ಆ್ಯಂಡ್ ಆಫ್ ದಿ ಫೀಲ್ಡ್​ನಲ್ಲಿ ಹಿಟ್​ಮ್ಯಾನ್ ಮಾಡ್ತಿರೋ ಮ್ಯಾಜಿಕ್​​​ ಭಾರತ ತಂಡಕ್ಕೆ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​​ ಟ್ರೋಫಿ ಗೆಲ್ಲುವ ಮಹಾದಾಸೆಯನ್ನ ಚಿಗುರಿಸಿದೆ.

ನಿರ್ಭೀತಿ ಆಟವಾಡಿ ಎದುರಾಳಿ ತಂಡದ ಮೇಲೆ ಒತ್ತಡ..!

ಈ ವಿಶ್ವಕಪ್​​ನಲ್ಲಿ ಕ್ಯಾಪ್ಟನ್ ರೋಹಿತ್​ ಶರ್ಮಾ ನೆಕ್ಸ್ಟ್​​ ಲೆವೆಲ್​​ನಲ್ಲಿ ಬ್ಯಾಟ್ ಬೀಸ್ತಿದ್ದಾರೆ. ನಿರ್ಭೀತಿ ಆಟದ ಜೊತೆ ಅಗ್ರೆಸ್ಸಿವ್​ ಹಾಗೂ ಅಟ್ಯಾಕಿಂಗ್ ಬ್ಯಾಟಿಂಗ್ ನಡೆಸ್ತಿದ್ದಾರೆ. ಆ ಮೂಲಕ ಆರಂಭದಲ್ಲೆ ಎದುರಾಳಿ ಬೌಲರ್​ಗಳ ಮೇಲೆ ಒತ್ತಡ ಹೇರಿ ತಂಡಕ್ಕೆ ಗೆಲುವು ತಂದುಕೊಡ್ತಿದ್ದಾರೆ.

155ರ ಸ್ಟ್ರೈಕ್​ರೇಟ್​​​..ಸಹ ಆಟಗಾರರಿಗೆ ಕಿಚ್ಚಿನ ಪಾಠ..!

ಪ್ರಸಕ್ತ ಟಿ20 ವಿಶ್ವಕಪ್​ನಲ್ಲಿ ದಂಡಂ ದಶಗುಣಂ ಆಟದ ಪಾಲಿಸಿಗೆ ಜೈ ಅಂತಿದ್ದಾರೆ. ಮೊದಲ ಎಸೆತದಿಂದಲೇ ಅಬ್ಬರಿಸುವ ರೋಹಿತ್​, ಈ ಟೂರ್ನಮೆಂಟ್​ನಲ್ಲಿ 155.97ರ ಸ್ಟ್ರೈಕ್​ರೇಟ್​​​ ಬ್ಯಾಟ್ ಬೀಸಿ ಎದುರಾಳಿ ಬೌಲರ್​ಗಳ ಜಂಘಾಬಲ ಅಡಗಿಸಿದ್ದಾರೆ. ರೋಹಿತ್​ರ ಇಂಪ್ರೆಸ್ಸಿವ್​​ ಸ್ಟ್ರೈಕ್​ರೇಟ್​ನಿಂದ ಸಹ ಆಟಗಾರರು ಸ್ಫೋಟಕ ಆಟವಾಡುವಂತೆ ಪ್ರೇರೆಪಿಸಿದೆ.

ಸ್ಮಾರ್ಟ್​ ಕ್ಯಾಪ್ಟನ್ಸಿ..ತಂಡಕ್ಕೆ ವರದಾನ..!

ಬರೀ ಸ್ಫೋಟಕ ಇನ್ನಿಂಗ್ಸ್ ಅಷ್ಟೇ ಅಲ್ಲ, ಸ್ಮಾರ್ಟ್​ ಕ್ಯಾಪ್ಟನ್ಸಿಯಿಂದಲೂ ಸೈ ಅನ್ನಿಸಿಕೊಂಡಿದ್ದಾರೆ. ಒತ್ತಡ ಹಾಗೂ ಭಾವೋದ್ವೇಗಕ್ಕೆ ಒಳಗಾಗದೇ ತಾಳ್ಮೆಯಿಂದಲೇ ತಂಡವನ್ನ ಮುನ್ನಡೆಸ್ತಿದ್ದಾರೆ. ಫೀಲ್ಡ್ ಪ್ಲೇಸ್​​ಮೆಂಟ್​​, ಬೌಲಿಂಗ್ ಚೇಂಜಸ್​​​ ಹಾಗೂ ತಂಡದ ಆಯ್ಕೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡು ಎದುರಾಳಿಯನ್ನ ಲಾಕ್​​ ಮಾಡ್ತಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲಿ ಫೈನಲ್​ ಪಂದ್ಯ​.. ಟೀಂ ಇಂಡಿಯಾಗೆ ಕಾಡ್ತಿದೆ ಏಕಮಾತ್ರ ಚಿಂತೆ.. ಏನದು..

ರೋಹಿತ್ ಗೇಮ್​ ಚೇಂಜಿಂಗ್ ಇನ್ನಿಂಗ್ಸ್​​ ಆಟ..!

ಬಿಗ್ ಪ್ಲೇಯರ್ ರೋಹಿತ್​ ಬಿಗ್ ಗೇಮ್ಸ್​ನಲ್ಲಿ ಆರ್ಭಟಿಸಿ ತಂಡಕ್ಕೆ ಬ್ಯಾಟಿಂಗ್​ ಬೆನ್ನೆಲುಬಾಗಿದ್ದಾರೆ. ಸೂಪರ್​​​-8ನಲ್ಲಿ ಆಸಿಸ್​ ವಿರುದ್ಧ ಸಿಡಿಲಬ್ಬರದ 92 ಹಾಗೂ ಇಂಗ್ಲೆಂಡ್​ ಎದುರಿನ ಸೆಮಿಫೈನಲ್​​​​​​​ ಪಂದ್ಯದಲ್ಲಿ ಸ್ಫೋಟಕ 66 ರನ್​​​ ಬಾರಿಸಿ ಗೇಮ್ ಅನ್ನಿಸಿಕೊಂಡಿದ್ರು. ಒಂದು ವೇಳೆ ರೋಹಿತ್​​​​​​ ಬ್ಯಾಟ್​​ ಘರ್ಜಿಸದಿದ್ದಲ್ಲಿ ಭಾರತದ ಫೈನಲ್ ಕನಸು ಭಗ್ನಗೊಳ್ತಿತ್ತು.

ನಾಯಕನಾಗಿ ಮುಂಚೂಣಿ.. ಇಡೀ ತಂಡಕ್ಕೆ ಸ್ಫೂರ್ತಿ..!

ಓರ್ವ ನಾಯಕನಾದವನಿಗೆ ಇರಬೇಕಾದ ಪ್ರಮುಖ ಗುಣವೇ ಇದು. ರೋಹಿತ್​ ಕ್ಯಾಪ್ಟನ್​ ಆಗಿ ತಂಡವನ್ನ ಮುಂಚೂಣಿಯಲ್ಲಿ ಮುನ್ನಡೆಸ್ತಿದ್ದಾರೆ. ಟೂರ್ನಮೆಂಟ್​ನಲ್ಲಿ 248 ರನ್​ ಗಳಿಸಿರೋ ಹಿಟ್​ಮ್ಯಾನ್​​​, ಭಾರತ ಪರ ಅತ್ಯಧಿಕ ರನ್ ಹೊಡೆದಿದ್ದಾರೆ. ಆ ಮೂಲಕ ಇಡೀ ತಂಡಕ್ಕೆ ಸ್ಪೂರ್ತಿ ಆಗಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs SA; ಹಿಟ್​​​ಮ್ಯಾನ್ ಇಂದಿನ ಬಿಗ್ ಮ್ಯಾಚ್​ ವಿನ್ನರ್.. ಇದಕ್ಕೆ ಅಸಲಿ ಕಾರಣ ಇಲ್ಲಿದೆ!

https://newsfirstlive.com/wp-content/uploads/2024/06/TEAM_INDAI.jpg

Load More