Advertisment

IND vs SA ಟಿ20ಯಲ್ಲಿ ಇವರೇ ಸೆಂಟರ್ ಆಫ್ ಅಟ್ರ್ಯಾಕ್ಷನ್; ಎದುರಾಳಿಗೆ ಶುರುವಾಗಿದೆ ನಡುಕ..!

author-image
Ganesh
Updated On
ಟೀಂ ಇಂಡಿಯಾ ಪ್ಲೇಯಿಂಗ್-11ರಲ್ಲಿ ಮೂವರು ಗೇಮ್​ ಚೇಂಜರ್​; ಅವರೇ ತಂಡಕ್ಕೆ ಬಿಗ್​​ ಸ್ಟ್ರೆಂಥ್..!
Advertisment
  • T20 ಕ್ರಿಕೆಟ್​ನಲ್ಲಿ ಇವರು ಡೇಂಜರಸ್ ಬ್ಯಾಟರ್..!
  • ಬ್ಯಾಟ್ ಹಿಡಿದ್ರೆ ಬೌಲರ್​ಗಳಿಗೆ ನಡುಕ ಶುರು ಆಗುತ್ತೆ
  • ಆಫ್ರಿಕಾದಲ್ಲಿ ಸಿಕ್ಸರ್​ಗಳ ಸುರಿಮಳೆ ಸುರಿಸಲು ರೆಡಿ

ಟೆಸ್ಟ್​ ಸರಣಿ ಮುಗೀತು. ಈಗ T20 ಕ್ರಿಕೆಟ್​​ನತ್ತ ಎಲ್ಲರ ಚಿತ್ತ. ಇಂಡೋ-ಆಫ್ರಿಕನ್ T20 ವಾರ್ ನೋಡಲು ಇಡೀ ವಿಶ್ವವೇ ಕಾದು ಕುಳಿತಿದೆ. ರನ್​ಭೂಮಿಯಲ್ಲಿ ಹಾಲಿ T20 ಚಾಂಪಿಯನ್ಸ್​ ವರ್ಸಸ್ ರನ್ನರ್​ ಅಪ್​​ ತಂಡದ ಕದನ, ಕ್ರಿಕೆಟ್ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದೆ. ಅದ್ರಲ್ಲೂ ಫ್ಯಾನ್ಸ್​ ಫೇವರಿಟ್ ಮಿಸ್ಟರ್ 360 ಡಿಗ್ರಿ ಸೂರ್ಯಕುಮಾರ್​​ ಯಾದವ್​​​​​​​​​​​, ಈ ಸರಣಿಯ ಸೆಂಟರ್ ಆಫ್ ಅಟ್ರ್ಯಾಕ್ಷನ್.

Advertisment

ದಕ್ಷಿಣ ಆಫ್ರಿಕಾ ವಿರುದ್ಧದ T20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಸೆಂಟರ್ ಆಫ್ ಅಟ್ರ್ಯಾಕ್ಷನ್. ಆ ದಿನ ಸೂರ್ಯಕುಮಾರ್ ಯಾದವ್ ಫುಲ್ ಪ್ಲೋನಲ್ಲಿದ್ರೆ ಮುಗೀತು. ಬೌಲರ್​ಗಳ ಖೇಲ್ ಖತಂ. 360 ಡಿಗ್ರಿ ಌಂಗಲ್​ನಲ್ಲಿ ಬೌಲರ್, ಬಾಲನ್ನ ಹುಡುಕಬೇಕಾಗುತ್ತದೆ. ಸೂರ್ಯ ಯಾವಾಗ, ಎಲ್ಲಿ, ಹೇಗೆ ಹೊಡಿತಾರೆ ಅಂತ. ಬೌಲರ್​ಗೂ ಕ್ಲೂ ಇರೋದಿಲ್ಲ. ಸೂರ್ಯ ಬ್ಯಾಟ್​ ಬೀಸ್ತಿದ್ರೆ, ಫೀಲ್ಡ್​ನಲ್ಲಿರೋ ಫೀಲ್ಡರ್​ಗಳೆಲ್ಲಾ, ಸ್ಪೆಕ್ಟೇಟರ್ಸ್ ಆಗಿಬಿಡ್ತಾರೆ.

ಇದನ್ನೂ ಓದಿ:‘RCB ಜೊತೆಗಿನ ನನ್ನ ಜರ್ನಿ ಮುಗಿದಿಲ್ಲ’- ಮತ್ತೆ ತಂಡ ಸೇರೋ ಸುಳಿವು ಕೊಟ್ಟ ಸ್ಟಾರ್​ ಪ್ಲೇಯರ್​

ಸೂರ್ಯ T20 ಕ್ರಿಕೆಟ್​ನ ಮೋಸ್ಟ್ ಡೇಂಜರಸ್ ಬ್ಯಾಟ್ಸ್​ಮನ್. ಕ್ಷಣಾರ್ಧದಲ್ಲಿ ಸೂರ್ಯ, ಪಂದ್ಯದ ಫಲಿತಾಂಶವನ್ನೇ ಬದಲಿಸಿಬಿಡ್ತಾರೆ. ಇದು ಸೂರ್ಯಕುಮಾರ್ ಯಾದವ್ ತಾಖತ್ತು. SKY ಸಾಲಿಡ್​​ ಫಾರ್ಮ್​ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ರೆಕಾರ್ಡ್ ಹೊಂದಿದ್ದಾರೆ. ಹಾಗಾಗಿ SKY, ಡರ್ಬನ್​ನಲ್ಲಿ ದರ್ಬಾರ್ ನಡೆಸೋ ವಿಶ್ವಾಸದಲ್ಲಿದ್ದಾರೆ.

Advertisment

ದಕ್ಷಿಣ ಆಫ್ರಿಕಾ ವಿರುದ್ಧ ಸೂರ್ಯ
ಆಫ್ರಿಕಾ ವಿರುದ್ಧ 7 ಪಂದ್ಯಗಳನ್ನಾಡಿರುವ ಸೂರ್ಯ, ಕೇವಲ 197 ಎಸೆತಗಳಲ್ಲಿ 346 ರನ್​​ ಚಚ್ಚಿದ್ದಾರೆ. ಒಂದು ಶತಕ ಮತ್ತು 4 ಅರ್ಧಶತಕಗಳನ್ನು ಸಿಡಿಸಿರೋ ಸೂರ್ಯಕುಮಾರ್​​ ಬ್ಯಾಟಿಂಗ್ ಸ್ಟ್ರೈಕ್​ರೇಟ್, ಬರೋಬ್ಬರಿ 176. ಈ ವರ್ಷ T20 ಕ್ರಿಕೆಟ್​ನಲ್ಲಿ ಸೂರ್ಯ ಡೀಸೆಂಟ್ ನಂಬರ್ಸ್ ಹೊಂದಿದ್ದಾರೆ. ಅತ್ಯುತ್ತಮ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿ, ಬೌಲರ್​ಗಳನ್ನ ದಂಡಿಸಿದ್ದಾರೆ.

2024ರಲ್ಲಿ ಸೂರ್ಯ ಸಾಧನೆ
14 ಪಂದ್ಯಗಳಲ್ಲಿ 253 ಎಸೆತಗಳನ್ನು ಎದುರಿಸಿರೋ ಸೂರ್ಯ 403 ರನ್​​ ಕಲೆ ಹಾಕಿದ್ದಾರೆ. 4 ಅರ್ಧಶತಕಗಳನ್ನು ಸಿಡಿಸಿರೋ ಮುಂಬೈಕರ್, 160ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಕೇವಲ ಬ್ಯಾಟ್ಸ್​ಮನ್​ ಆಗಿ ಅಷ್ಟೇ ಅಲ್ಲ. ಟೀಮ್ ಇಂಡಿಯಾ ನಾಯಕನಾಗಿ ಸೂರ್ಯ, ವಿಶೇಷ ದಾಖಲೆ ಹೊಂದಿದ್ದಾರೆ.

ನಾಯಕನಾಗಿ SKY ಸಾಧನೆ
ಸೂರ್ಯ ನಾಯಕತ್ವದಲ್ಲಿ ಮೆನ್​ ಇನ್ ಬ್ಲೂ ಪಡೆ 10ರಲ್ಲಿ ಗೆಲುವು, 2 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಮತ್ತು 1 ಪಂದ್ಯ ಟೈನಲ್ಲಿ ಅಂತ್ಯ ಕಂಡಿದೆ. ಇದು ನಾಯಕನಾಗಿ ಸೂರ್ಯಕುಮಾರ್ ಯಾದವ್​ರ ಅತ್ಯುತ್ತಮ ಪರ್ಫಾಮೆನ್ಸ್. ಒಟ್ನಲ್ಲಿ, ಟಿ20 ಕ್ರಿಕೆಟ್​​ನ ಗ್ರೇಟ್ ಎಂಟರ್​ಟೈನರ್ ​​​​ಎನಿಸಿಕೊಂಡಿರೋ ಸೂರ್ಯ, ರೇನ್ಬೋ ರಾಷ್ಟ್ರದಲ್ಲಿ ಅಭಿಮಾನಿಗಳನ್ನು ರಂಜಿಸಿಲು ತುದಿಗಾಲಲ್ಲಿ ನಿಂತಿದ್ದಾರೆ.

Advertisment

ಇದನ್ನೂ ಓದಿ:ಸೈಲೆಂಟ್ ಕಿಲ್ಲರ್​..! ಹೃದಯಾಘಾತ ಆಗುವ 2 ಗಂಟೆ ಮೊದಲು ದೇಹದಲ್ಲಿ ಏನೆಲ್ಲ ಆಗುತ್ತದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment