Advertisment

ಟೀಮ್​ ಇಂಡಿಯಾ ಮೇಲೆ ಆಫ್ರಿಕಾ ಕ್ರಿಕೆಟರ್ಸ್​​​​ಗೆ ದ್ವೇಷನಾ.. ಅಸಲಿ ಕಾರಣವೇನು?

author-image
Bheemappa
Updated On
ಟೀಮ್​ ಇಂಡಿಯಾ ಮೇಲೆ ಆಫ್ರಿಕಾ ಕ್ರಿಕೆಟರ್ಸ್​​​​ಗೆ ದ್ವೇಷನಾ.. ಅಸಲಿ ಕಾರಣವೇನು?
Advertisment
  • ಮೊದಲ ಚುಟುಕು ಪಂದ್ಯ ಗೆಲ್ಲುಲು 2 ತಂಡಗಳು ಭರ್ಜರಿ ತಯಾರಿ
  • ಟೀಮ್​ ಇಂಡಿಯಾಕ್ಕೆ ಸೋಲಿನ ಶಾಕ್​ ಕೊಡಲು ಆಫ್ರಿಕಾ ಪ್ಲಾನ್
  • ಇಂದಿನಿಂದ ಆರಂಭ ಆಗುತ್ತಿರುವ ಭಾರತ-ಆಫ್ರಿಕಾ ಬಿಗ್ ಫೈಟ್

ಭಾರತ-ಸೌತ್​ ಆಫ್ರಿಕಾ ನಡುವಿನ ಮೊದಲ ಟಿ20 ಕದನಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಡರ್ಬನ್​ನಲ್ಲಿ T20 ಕ್ರಿಕೆಟ್ ಲೋಕದ ಚಾಂಪಿಯನ್ ವರ್ಸಸ್​ ರನ್ನರ್ ಅಪ್ ತಂಡ ಮುಖಾಮುಖಿ ಆಗ್ತಿದೆ. ಆಫ್ರಿಕಾ ಆಟಗಾರರ ಎದೆಯಲ್ಲಿ ಸೇಡಿನ ಜ್ವಾಲೆ ಹೊತ್ತಿ ಉರಿಯುತ್ತಿದ್ದು, ಟೀಮ್​ ಇಂಡಿಯಾಗೆ ಸೋಲಿನ ಶಾಕ್​ ಕೊಡಲು ಪಣ ತೊಟ್ಟಿದ್ದಾರೆ. ಅಷ್ಟಕ್ಕೂ ಭಾರತದ ಮೇಲೆ​ ಆಫ್ರಿಕಾಗೆ ದ್ವೇಷ ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

Advertisment

ಇಂಡೋ-ಆಫ್ರಿಕಾ ಮೊದಲ ಟಿ20 ಫೈಟ್​ಗೆ ವೇದಿಕೆ ಸಜ್ಜಾಗಿದೆ. ಡರ್ಬನ್​ನಲ್ಲಿ ನಡೆಯೋ ಮೊದಲ ಚುಟುಕು ಫೈಟ್​ನಲ್ಲಿ ಗೆದ್ದು ಬೀಗಲು ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿವೆ. ತವರಿನಲ್ಲಿ ನ್ಯೂಜಿಲೆಂಡ್​ ಎದುರು ವೈಟ್​ವಾಷ್​ ಮುಖಭಂಗ ಎದುರಿಸಿರೋ ಟೀಮ್​ ಇಂಡಿಯಾ, ಸೌತ್​ ಆಫ್ರಿಕಾ ಸರಣಿಯಲ್ಲಿ ಗೆಲುವಿನ ಆರಂಭವನ್ನ ಎದುರು ನೋಡುತ್ತಿದೆ. ಅತ್ತ​ ಆಫ್ರಿಕಾ ಆಟಗಾರರ ಎದೆಯಲ್ಲಿ ಸೇಡಿನ ಜ್ವಾಲೆ ಹೊತ್ತಿದೆ.

ಇದನ್ನೂ ಓದಿ: CMಗೆ ತಂದಿದ್ದ ಸಮೋಸಾ, ಕೇಕ್​ಗಳು ಮಂಗಮಾಯ.. CID ತನಿಖೆ ಹೇಳಿದ್ದೇನು?

publive-image

ಡರ್ಬನ್​ನಲ್ಲಿ ಕ್ರಿಕೆಟ್​ ಲೋಕದ ಹೊಸ ದುಷ್ಮನ್​ಗಳ ಫೈಟ್​.!

ಭಾರತ-ಸೌತ್​ ಆಫ್ರಿಕಾ ನಡುವಿನ ಪಂದ್ಯ ಮೊದಲಿದ್ದಂತೆ ಕೇವಲ ಪಂದ್ಯವಾಗಿ ಉಳಿದಿಲ್ಲ. ಈ 2 ತಂಡಗಳ ನಡುವಿನ ಪಂದ್ಯ ಇದೀಗ ಯುದ್ಧದ ಸ್ವರೂಪ ಪಡೆದುಕೊಂಡಿದೆ. ಇವ್ರನ್ನ ಕ್ರಿಕೆಟ್​ ಲೋಕದ ಹೊಸ ವಿರೋಧಿಗಳು ಅಂದ್ರು ತಪ್ಪಿಲ್ಲ. ಸೌತ್​​ ಆಫ್ರಿಕಾ ಆಟಗಾರರಂತೂ ಇದನ್ನ ಸೇಡಿನ ಸಮರ ಎಂದೇ ಪರಿಗಣಿಸಿದ್ದಾರೆ. ಬಾರ್ಬಡೋಸ್​ನಲ್ಲಿ ಆದ ಅವಮಾನಕ್ಕೆ ತವರಿನಲ್ಲಿ ಪ್ರತಿಕಾರದ ಕತ್ತಿ ಮಸೆಯುತ್ತಿದ್ದಾರೆ.

ಜೂನ್​ 29, 2024 ಬಾರ್ಬಡೋಸ್​

ಈ ದಿನಾಂಕವನ್ನ ಇಂಡಿಯನ್​ ಕ್ರಿಕೆಟ್​ ಫ್ಯಾನ್ಸ್​ ಮರೆಯೋಕೆ ಸಾಧ್ಯವಿಲ್ಲ. ಅಸಂಖ್ಯ ಅಭಿಮಾನಿಗಳನ್ನ ಕಾಡಿದ್ದ ಐಸಿಸಿ ಟ್ರೋಫಿ ಬರಕ್ಕೆ ಬ್ರೇಕ್​ ಬಿದ್ದ ದಿನ ಅದು. ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​​ನಲ್ಲಿ ಭಾರತದ ಝಂಡಾವನ್ನ ಮುಗಿಲೆತ್ತರಕ್ಕೆ ಹಾರಿಸಿದ್ದ ರೋಹಿತ್​ ಶರ್ಮಾ ಪಡೆ ಟಿ20 ವಿಶ್ವಕಪ್​ ಗೆದ್ದು ಸಂಭ್ರಮಿಸಿತ್ತು.

Advertisment

ಬಾರ್ಬಡೋಸ್​ ಅಂಗಳದಲ್ಲಿ ಟೀಮ್​ ಇಂಡಿಯಾ ಆಟಗಾರರು ಕಪ್​ ಗೆದ್ದ ಖುಷಿಯಲ್ಲಿ ಸಂಭ್ರಮಾಚಣೆ ಮಾಡ್ತಿದ್ರೆ, ಸೋತ ಸೌತ್​ ಆಫ್ರಿಕಾ ಆಟಗಾರರು ತಲೆ ತಗ್ಗಿಸಿ ನಿಂತಿದ್ರು. ಕೈಗೆ ಬಂದ ತುತ್ತು ಬಾಯಿಗೆ ಬರಲಲಿಲ್ಲ ಎಂಬಂತೆ ಕೇವಲ 7 ರನ್​ಗಳ ಅಂತರದಲ್ಲಿ ಸೌತ್​ ಆಫ್ರಿಕಾ ಪಡೆ ಪಂದ್ಯ ಸೋತಿತ್ತು. ಚೊಚ್ಚಲ ವಿಶ್ವಕಪ್​ ಗೆಲುವಿನ ಕನಸು ನುಚ್ಚು ನೂರಾಗಿತ್ತು.

ತವರಿನಂಗಳದಲ್ಲಿ ವೈಟ್​ವಾಷ್ ಪ್ರತಿಕಾರಕ್ಕೆ ಪಣ.!

ವಿಶ್ವಕಪ್​ ಫೈನಲ್​ ಸೋಲಿನ ನೋವು, ಹತಾಶೆ, ಬೇಸರ ಸೌತ್​ ಆಫ್ರಿಕಾ ಆಟಗಾರರನ್ನ ಇಂದಿಗೂ ಕಾಡ್ತಿದೆ. ಎದೆಯಲ್ಲಿ ಸೇಡಿನ ಜ್ವಾಲೆ ಉರಿತಿದೆ. ಅಂದು ಪಂದ್ಯ ಸೋತಾಗ ಆಟಗಾರರು ಮಾತ್ರವಲ್ಲ. ಸೌತ್​ ಆಫ್ರಿಕಾ ಅಸಂಖ್ಯ ಫ್ಯಾನ್ಸ್​ ಕೂಡ ಬೇಸರಗೊಂಡಿದ್ರು. ಇದೀಗ ತವರಿನಲ್ಲಿ ಟೀಮ್​ ಇಂಡಿಯಾವನ್ನ ಸೋಲಿಸಿ ಅಭಿಮಾನಿಗಳು ಎದುರು ಆ ಪ್ರತಿಕಾರ ತೀರಿಸಿಕೊಳ್ಳಲು ಸೌತ್​ ಆಫ್ರಿಕಾ ತಂಡ ಪಣತೊಟ್ಟಿದೆ.

ಇದನ್ನೂ ಓದಿ: ಹಾರ್ದಿಕ್​ ಪಾಂಡ್ಯ ಮಾಜಿ ಪತ್ನಿ ನತಾಶ ಮಾಡಿದ್ದೇನು, ಫ್ಯಾನ್ಸ್​ ಆಕ್ರೋಶಕ್ಕೆ ಕಾರಣ?

Advertisment

publive-image

ಬ್ಯಾಟಿಂಗ್​, ಬೌಲಿಂಗ್​, ಫೀಲ್ಡಿಂಗ್​.. ಸೌತ್​ ಆಫ್ರಿಕಾ ಬಲಿಷ್ಠ!

ಸ್ಟಾರ್​ ಆಟಗಾರರ ದಂಡೇ ಇರೋ ಟೀಮ್​ ಇಂಡಿಯಾ ಸಖತ್​ ಸ್ಟ್ರಾಂಗ್​ ಆಗಿ ಕಾಣಿಸ್ತಿದೆ. ಹಾಗಂತ ಸೌತ್​ ಆಫ್ರಿಕಾ ತಂಡವನ್ನ ಸುಲಭಕ್ಕೆ ಪರಿಗಣಿಸುವಂತಿಲ್ಲ. ಬ್ಯಾಟಿಂಗ್​, ಬೌಲಿಂಗ್ ಜೊತೆಗೆ ಫೀಲ್ಡಿಂಗ್​ 3 ವಿಭಾಗದಲ್ಲಿ ಏಡೆನ್​ ಮಾರ್ಕರಮ್​ ಪಡೆ ಸಖತ್​ ಸ್ಟ್ರಾಂಗ್​ ಆಗಿದೆ. ಟಾಪ್​ ಆರ್ಡರ್​​, ಮಿಡಲ್​ ಆರ್ಡರ್​ ಹಾಗೂ ಲೋವರ್​ ಆರ್ಡರ್​​ ಬ್ಯಾಟ್ಸ್​​ಮನ್​ಗಳು ಯಂಗ್​​ ಇಂಡಿಯನ್​ ಬೌಲರ್ಸ್​​ಗೆ ಸವಾಲಾಗಲಿದ್ದಾರೆ. ಮಾರ್ಕೋ ಯಾನ್ಸನ್​, ಗೆರಾಲ್ಡ್​ ಕೋಟ್ಜಿ ಒಳಗೊಂಡ ಬೌಲಿಂಗ್​ ಅಟ್ಯಾಕ್​ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳಿಗೆ ಶಾಕ್​ ಕೊಟ್ರೂ ಅಚ್ಚರಿಪಡಬೇಕಿಲ್ಲ.

ಇಂದಿನಿಂದ ಆರಂಭವಾಗುತ್ತಿರೋ ಇಂಡೋ-ಆಫ್ರಿಕಾ ಫೈಟ್​ನಲ್ಲಿ​​, ಫ್ಯಾನ್ಸ್​ಗೆ ಭರ್ಜರಿ ಎಂಟರ್​​ಟೈನ್​ಮೆಂಟ್​ ಅಂತೂ ಕಾದಿದೆ. ಸೇಡಿನ ಸಮರಕ್ಕೆ ಸಜ್ಜಾಗಿರೋ ಸೌತ್​ ಆಫ್ರಿಕಾವನ್ನ, ಟೀಮ್​ ಇಂಡಿಯಾ ಹೇಗೆ ಎದುರಿಸುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment