/newsfirstlive-kannada/media/post_attachments/wp-content/uploads/2024/08/VIRAT_ROHIT.jpg)
ಗೆಲ್ಲೋ ಹಾಟ್ ಫೇವರಿಟ್​ ಅನಿಸಿಕೊಂಡಿದ್ದ ಟೀಮ್​ ಇಂಡಿಯಾಗೆ ಸಿಂಹಳೀಯರ ನಾಡಲ್ಲಿ ಸೋಲಿನ ದರ್ಶನವಾಗಿದೆ. ಮೊದಲ ಏಕದಿನದಲ್ಲಿ ತಿಣುಕಾಡಿ ಡ್ರಾ ಸಾಧಿಸಿದ್ದ ಟೀಮ್​ ಇಂಡಿಯಾ, 2ನೇ ಏಕದಿನದಲ್ಲಿ ಹೀನಾಯವಾಗಿ ಸೋತಿದೆ. ಇದರ ಜೊತೆಗೆ ಟೀಮ್​ ಇಂಡಿಯಾದ ವೀಕ್​ನೆಸ್ ಕೂಡ​ ವಿಶ್ವದ ಎದುರು ಬಟಾ ಬಯಲಾಗಿದೆ. ಸೋಲಿಗಿಂತ ಭಾರತದ ಬ್ಯಾಟರ್​ಗಳ ಈ ದೌರ್ಬಲ್ಯ ಟೆನ್ಶನ್​ ಹೆಚ್ಚಿಸಿದೆ.
ಟೀಮ್​ ಇಂಡಿಯಾಗೆ ಸ್ಪಿನ್​ ಬಲೆ ಹೆಣೆದ ಲಂಕಾ.!
ಕೊಲಂಬೋದ ಸ್ಲೋ & ಲೋ ಪಿಚ್​ನಲ್ಲಿ ಇಂಡಿಯನ್​ ಟೈಗರ್ಸ್, ಸಿಂಹಳೀಯರ​ ಸ್ಪಿನ್​ ಬಲೆಗೆ ಒಬ್ಬರ ಹಿಂದೊಬ್ಬರಂತೆ ಬಿದ್ದರು. ಚೇಸಿಂಗ್​ಗಿಳಿದಾಗ ಟೀಮ್​ ಇಂಡಿಯಾ ಅದ್ಧೂರಿ ಆರಂಭ ಪಡೆದುಕೊಳ್ಳಿತ್ತು. ಮೊದಲು 10 ಓವರ್​ ಎಲ್ಲಾ ಚೆನ್ನಾಗಿತ್ತು. ಆದ್ರೆ, ಆ ಬಳಿಕ ಟೀಮ್​ ಇಂಡಿಯಾ ಬ್ಯಾಟರ್​​ಗಳ ಪೆವಿಲಿಯನ್​ ಪರೇಡ್​ ನಡೀತು.
ಇದನ್ನೂ ಓದಿ: ವಯನಾಡು ದುರಂತದ ಬಗ್ಗೆ ಗಿಣಿ ಎಚ್ಚರಿಕೆ.. ಮಾಲೀಕನ ಕುಟುಂಬ, ಅವರ ಸ್ನೇಹಿತರ ಬಚಾವ್ ಮಾಡಿದ ಕಿಂಗಿಣಿ
ಕೊಲಂಬೋದಲ್ಲಿ ವಂಡರ್​ ಸೃಷ್ಟಿಸಿದ ವಂಡರ್ಸೆ.!
ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ಶ್ರೀಲಂಕಾದ ಯುವ ಸ್ಪಿನ್ನರ್​ ವಂಡರ್ಸೆ ವಂಡರ್​ ಸೃಷ್ಟಿಸಿದ್ದರು. ವಂಡರ್ಸೆಯ ಸ್ಪಿನ್​ ದಾಳಕ್ಕೆ ಟೀಮ್​ ಇಂಡಿಯಾದ ಸೂಪರ್​ ಸ್ಟಾರ್​ ಬ್ಯಾಟರ್ಸ್​ಗಳು ಸುಲಭಕ್ಕೆ ಉರುಳಿದ್ದರು. ನಾಯಕ ರೋಹಿತ್​ ವಿಕೆಟ್​ ಕಬಳಿಸಿ ಅಕೌಂಟ್​ ಓಪನ್​ ಮಾಡಿದ ಜೆಫ್ರಿ ವಂಡರ್ಸೆ, ಶಾಕ್​ ಮೇಲೆ ಶಾಕ್​ ಕೊಟ್ಟರು.
ಟೀಮ್​ ಇಂಡಿಯಾ ಟಾಪ್​ ಆರ್ಡರ್​ನ ಟಾಪ್​ 6 ಬ್ಯಾಟರ್​​ಗಳ ಕಥೆಯಿದು. ರೋಹಿತ್​ ಶರ್ಮಾ-ಶುಭ್​ಮನ್​ ಗಿಲ್​ ಉತ್ತಮ ಸ್ಟಾರ್ಟ್​ ನೀಡಿ ಔಟ್​ ಆದ್ರು. ಆದ್ರೆ, ಉಳಿದವರು ತಂಡವನ್ನ ಸಂಕಷ್ಟಕ್ಕೆ ದೂಡಿದ್ರು. ಶಿವಂ ದುಬೆ, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆ.ಎಲ್​ ರಾಹುಲ್​ ಅಷ್ಟು ಹೀನಾಯವಾದ ರೀತಿಯಲ್ಲಿ ವಿಕೆಟ್​ ಒಪ್ಪಿಸಿದ್ರು.
ಬಟಾಬಯಲಾಯ್ತು ಟೀಮ್​ ಇಂಡಿಯಾ ವೀಕ್ನೆಸ್​.!
2ನೇ ಏಕದಿನ ಪಂದ್ಯದ ಅಂತ್ಯದೊಂದಿಗೆ ಟೀಮ್​ ಇಂಡಿಯಾದ ಸ್ಪಿನ್​ ವೀಕ್​ನೆಸ್​ ಇಡೀ ವಿಶ್ವದ ಎದುರು ಬಟಾಬಯಲಾಗಿದ್ದು ಸುಳ್ಳಲ್ಲ. ಹತ್ತಕ್ಕೇ 10 ವಿಕೆಟ್​​ಗಳನ್ನ ಸ್ಪಿನ್ನರ್​ಗಳಿಗೆ ಒಪ್ಪಿಸಿರೋದೆ ಇದಕ್ಕೆ ಸಾಕ್ಷಿಯಾಗಿದೆ. ನಿನ್ನೆ ನಡೆದ ಪಂದ್ಯದಲ್ಲಿ ಸ್ಪಿನ್ನರ್​ಗಳ ಎದುರು ಟೀಮ್​​ ಇಂಡಿಯಾದ ಎಲ್ಲಾ ಬ್ಯಾಟರ್ಸ್​ ಅಕ್ಷರಶಃ ತಡಕಾಡಿದ್ರು.
ಮೊದಲ ಏಕದಿನದಲ್ಲೂ ಸ್ಪಿನ್​ಗೆ ಶರಣು.!​
ನಿನ್ನೆ ಅಂತ್ಯ ಕಂಡ 2ನೇ ಏಕದಿನ ಪಂದ್ಯ ಮಾತ್ರವಲ್ಲ, ಡ್ರಾನಲ್ಲಿ ಅಂತ್ಯವಾದ ಮೊದಲ ಏಕದಿನದಲ್ಲೂ ಸ್ಪಿನ್​ ಮುಂದೆ ಟೀಮ್​ ಇಂಡಿಯಾ ಮಂಡಿಯೂರಿತು. ಅವತ್ತೂ ಕೂಡ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳು ಸ್ಪಿನ್ನರ್​ಗಳಿಗೆ ಸುಲಭಕ್ಕೆ ಶರಣಾದ್ರು. ವಿರಾಟ್​ ಕೊಹ್ಲಿ, ಶುಭ್​ಮನ್​ ಗಿಲ್ ಸೇರಿದಂತೆ ಒಟ್ಟು 9 ಮಂದಿ ಬ್ಯಾಟರ್ಸ್​ ಸ್ಪಿನ್ನರ್​ಗಳಿಗೆ ತಲೆಬಾಗಿದ್ರು.
ಬಿಗ್​ಬಾಸ್​ಗಳ ಮುಂದೆ ಹೆಡ್​ ಕೋಚ್​​ ಸ್ಪೆಷಲ್​ ಬೇಡಿಕೆ.!
ಕೆಲ ದಿನಗಳ ಹಿಂದಷ್ಟೇ ಹೆಡ್ ​ಕೋಚ್​ ಗೌತಮ್​ ಗಂಭೀರ್​, ಬಿಸಿಸಿಐ ಬಿಗ್​ಬಾಸ್​ಗಳ ಮುಂದೆ ಒಂದು ಬೇಡಿಕೆ ಇಟ್ಟಿದ್ರು. ಬೌಲಿಂಗ್​ ಕೋಚ್​ ಜೊತೆಗೆ ಒಬ್ಬರು ಸ್ಪೆಷಲಿಸ್ಟ್​ ಸ್ಪಿನ್​ ಕೋಚ್ ಬೇಕು ಅನ್ನೋದು ಗಂಭೀರ್​ ಬೇಡಿಕೆಯಾಗಿತ್ತು. ಆಗ ಹಿಂದೆದೂ ಇರದಂತಹ ಹುದ್ದೆ ಸೃಷ್ಟಿ ಈಗ್ಯಾಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇದೀಗ ಮೊದಲ 2 ಏಕದಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಬ್ಯಾಟರ್ಸ್​ ತಡಬಡಾಯಿಸಿದ ಮೇಲೆ ಗಂಭೀರ್​, ಬೇಡಿಕೆಯ ಹಿಂದಿನ ಮರ್ಮ ಅರ್ಥವಾದಂತಿದೆ.
ಇದನ್ನೂ ಓದಿ: BJP ಅವಧಿಯ ಭ್ರಷ್ಟಾಚಾರ, ಹಗರಣಗಳ ಟಾರ್ಗೆಟ್ ಮಾಡಿದ ‘ಕೈ’ ಹೈಕಮಾಂಡ್; ಮಾಜಿ ಸಿಎಂಗೆ ಸಂಕಷ್ಟ?
ಈ ಹಿಂದೆ ಸ್ಪಿನ್​ ಎದುರು ಅದ್ಭುತವಾಗಿ ಆಡೋದು ಟೀಮ್​ ಇಂಡಿಯಾ ಬ್ಯಾಟರ್ಸ್​ ಸ್ಟ್ರೆಂಥ್​ ಎಂಬ ಮಾತಿತ್ತು. ಆದ್ರೀಗ, ಆ ಮಾತು ಬದಲಾಗ್ತಿದೆ. ಕಳೆದ ಕೆಲ ವರ್ಷಗಳಿಂದ ಭಾರತೀಯ ಬ್ಯಾಟರ್ಸ್​ಗಳನ್ನ ಸ್ಪಿನ್ನರ್​ಗಳು ಬಿಡದೇ ಕಾಡಿದ್ದಾರೆ. ಮುಂದಾದ್ರೂ ಈ ವೀಕ್​​ನೆಸ್​ನ ಇಂಡಿಯನ್​ ಬ್ಯಾಟರ್ಸ್​ ಮೆಟ್ಟಿ ನಿಲ್ತಾರಾ.?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ