/newsfirstlive-kannada/media/post_attachments/wp-content/uploads/2024/08/KL-Rahul_Gambhir_Rohit.jpg)
ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವು ಇವತ್ತು ನಡೆಯಲಿದೆ. ಸರಣಿಯನ್ನು ಸಮಬಲ ಮಾಡಿಕೊಳ್ಳಬೇಕು ಎಂದರೆ ಇವತ್ತು ಭಾರತ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಕೊಲೊಂಬೊದ ಆರ್​.ಪ್ರೇಮದಾಸ್​ ಸ್ಟೇಡಿಯಂನಲ್ಲಿ ಇಂದು ಮಧ್ಯಾಹ್ನ 2.30ರಿಂದ ಪಂದ್ಯ ಆರಂಭ ಆಗಲಿದೆ. ಇವತ್ತಿನ ಪಂದ್ಯದಲ್ಲಿ ಎರಡೂ ತಂಡಗಳಿಗೂ ಗೆಲುವು ಅನಿವಾರ್ಯ. ಅದರಲ್ಲೂ ಭಾರೀ ಮುಖಭಂಗ ಅನುಭವಿಸುತ್ತಿರುವ ಟೀಂ ಇಂಡಿಯಾ, ಗೆದ್ದು ತನ್ನ ಸಾಮರ್ಥ್ಯವನ್ನು ತೋರಿಸಬೇಕಿದೆ. ಅದಕ್ಕಾಗಿ ಭಾರತ ತಂಡ ಪ್ಲೇಯಿಂಗ್ ಇಲೆವೆನ್ ಹಾಗೂ ಬ್ಯಾಟಿಂಗ್ ಆರ್ಡರ್​​ನಲ್ಲಿ ಬದಲಾವಣೆ ಮಾಡಿಕೊಳ್ಳಲಿದೆ.
ಬೆಂಚ್​​ನಲ್ಲಿ ಕೂತಿರುವ ಸ್ಫೋಟಕ ಬ್ಯಾಟ್ಸ್​​ಮನ್ ರಿಷಬ್ ಪಂತ್​​ರನ್ನು ಗಂಭೀರ್ ಕಣಕ್ಕೆ ಇಳಿಸುವ ಸಾಧ್ಯತೆ. ಪಂತ್ ಪ್ಲೇಯಿಂಗ್-11ನಲ್ಲಿ ಸ್ಥಾನ ಪಡೆದುಕೊಂಡರೆ ಯಾರು ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಅಥವಾ ಶಿವಂ ದುಬೆ, ಈ ಮೂವರಲ್ಲಿ ಒಬ್ಬರಿಗೆ ಕೊಕ್ ನೀಡಲಾಗುತ್ತದೆ. ಅದೇ ರೀತಿ ರಿಯಾನ್ ಪರಾಗ್ ಅವರನ್ನೂ ಆಡಿಸಬೇಕು ಎಂಬ ಚರ್ಚೆ ಶುರುವಾಗಿದೆ. ಹೀಗಾಗಿ ಇವತ್ತಿನ ಪ್ಲೇಯಿಂಗ್-11 ಬಗ್ಗೆ ಭಾರೀ ಕುತೂಹಲ ಮೂಡಿಸಿದೆ.
ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯವು ಟೈ ಆಗಿದೆ. ಎರಡನೇ ಪಂದ್ಯದಲ್ಲಿ ಭಾರತ ತಂಡವು 32 ರನ್​​ಗಳ ಹೀನಾಯ ಸೋಲನ್ನು ಕಂಡಿದೆ. ಭಾರತ ತಂಡದ ಈ ಸೋಲಿಗೆ ಗೌತಮ್ ಗಂಭೀರ್ ಅವರು ಮಾಡಿರುವ ಕೆಲವು ತಂತ್ರಗಳು. ಅವರು ತಂಡಕ್ಕಾಗಿ ಮಾಡಿದ ಬ್ಯಾಟಿಂಗ್ ಸ್ಟ್ರ್ಯಾಟರ್ಜಿ ಹಾಗೂ ಪ್ಲೇಯಿಂಗ್-11 ಸರಿ ಇರಲಿಲ್ಲ. ಹೀಗಾಗಿ ಟೀಂ ಇಂಡಿಯಾ ಸೋತಿದೆ ಎಂಬ ಮಾತುಗಳು ಕೇಳಿಬಂದಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ