newsfirstkannada.com

ಸೊನ್ನೆ ಸುತ್ತಿದ ದುಬೆ, ರಾಹುಲ್.. ಹೊಡಿಬಡಿ ಆಟಗಾರನ ಬೆಂಜ್​​ನಲ್ಲಿ ಕೂರಿಸಿ ತಪ್ಪು ಮಾಡಿದ ಗಂಭೀರ್..!

Share :

Published August 5, 2024 at 11:31am

    ಸಿಂಹಳೀಯರ ಬಲೆಗೆ ಬಿದ್ದ ಇಂಡಿಯನ್​ ಟೈಗರ್ಸ್​

    32 ರನ್​ಗಳಿಂದ ಟೀಮ್​ ಇಂಡಿಯಾಗೆ ಸೋಲು

    ದಿಟ್ಟ ಹೋರಾಟ ನಡೆಸಿದ ಆತಿಥೇಯ ಶ್ರೀಲಂಕಾ

ಸಿಂಹಳೀಯರ ನಾಡಲ್ಲಿ ಗೆಲುವಿನ ಕನಸು ಕಾಣ್ತಿದ್ದ ಟೀಮ್​ ಇಂಡಿಯಾಗೆ ಸೋಲಿನ ದರ್ಶನವಾಗಿದೆ. ತಿಣುಕಾಟ ನಡೆಸಿ ಮೊದಲ ಏಕದಿನದಲ್ಲಿ ಡ್ರಾ ಸಾಧಿಸಿದ್ದ, ಟೀಮ್​ ಇಂಡಿಯಾ 2ನೇ ಪಂದ್ಯದಲ್ಲಿ ಮಕಾಡೆ ಮಲಗಿದೆ.

ಶಾಕ್​.. ಶಾಕ್​.. ಶಾಕ್​..! ಟೀಮ್​ ಇಂಡಿಯಾದ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ದಿನದಿಂದ ಕನಿಷ್ಟ ಯಾರೂ ಊಹೆ ಕೂಡ ಮಾಡಿರಲಿಲ್ಲ. ಸಿಂಹಳೀಯರ ಎದುರು ಟೀಮ್​ ಇಂಡಿಯಾ ಸೋಲುತ್ತೆ ಎಂದು. ಕೆರಳಿದ ಲಂಕನ್​ ಲಯನ್ಸ್​ ಅಕ್ಷರಶಃ ಶಾಕ್​ ಕೊಟ್ಟಿದ್ದಾರೆ. 2ನೇ ಏಕದಿನದಲ್ಲಿ ಬಲಿಷ್ಟ ಇಂಡಿಯಾಗೆ ಸೋಲಿನ ರುಚಿ ತೋರಿಸಿದ್ದಾರೆ.

ಮೊದಲ ಎಸೆತದಲ್ಲೇ ಲಂಕಾಗೆ ಶಾಕ್​
ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡು ಕಣಕ್ಕಿಳಿದ ಶ್ರೀಲಂಕಾ ಮೊದಲ ಎಸೆತದಲ್ಲೇ ಶಾಕ್​ ಎದುರಿಸಿತು. ಮೊಹಮ್ಮದ್​ ಸಿರಾಜ್ ವೇಗಕ್ಕೆ ಫಾತುಮ್​ ನಿಸ್ಸಾಂಕ ಬಲಿಯಾದ್ರು. ಬಳಿಕ ಕ್ರಿಸ್​ನಲ್ಲಿ ಜೊತೆಯಾದ ಅವಿಷ್ಕಾ ಫರ್ನಾಂಡೋ-ಕುಸಾಲ್​ ಮೆಂಡಿಸ್ 74 ರನ್​ಗಳ ಜೊತೆಯಾಟವಾಡಿ​ ತಂಡಕ್ಕೆ ಚೇತರಿಕೆ ನೀಡಿದ್ರು.

ಲಂಕಾಗೆ ಡಬಲ್​ ಶಾಕ್​ ಕೊಟ್ಟ ವಾಷಿಂಗ್ಟನ್​ ಸುಂದರ್
ಈ ಜೊತೆಯಾಟ ಹೆಚ್ಚು ಹೊತ್ತು ಬೆಳೆಯಲು ವಾಷಿಂಗ್ಟನ್​ ಸುಂದರ್​ ಬಿಡಲಿಲ್ಲ. ಸುಂದರ್​ ಮೋಡಿಗೆ ಬಲಿಯಾದ ಅವಿಷ್ಕಾ, ಕುಸಾಲ್ ಬ್ಯಾಕ್​ ಟು ಬ್ಯಾಕ್​ ಪೆವಿಲಿಯನ್​ ಸೇರಿದ್ರು. ಸದೀರಾ ಸಮರವಿಕ್ರಮ ಬಂದಷ್ಟೇ ವೇಗವಾಗಿ ಔಟಾದ್ರು. ಜನಿತ್​ ಲಿಯನಗೆ 12 ರನ್​ಗಳಿಸುವಷ್ಟರಲ್ಲಿ ಸುಸ್ತಾದ್ರು. ನಾಯಕ ಚರಿತ್​ ಅಸಲಂಕ ಆಟ 25 ರನ್​ಗಳಿಗೆ ಅಂತ್ಯವಾಯ್ತು.

ಇದನ್ನೂ ಓದಿ:ಸೂರ್ಯ, ಬೂಮ್ರಾ ಗ್ಯಾರಂಟಿ.. ಈ ನಾಲ್ಕು ಆಟಗಾರರ ರಿಟೈನ್ ಮಾಡಿಕೊಳ್ಳಲು MI ನಿರ್ಧಾರ

ಕಮಿಂದು ಮೆಂಡಿಸ್​-ಧುನಿತ್​​ ವೆಲ್ಲಲಗೆ ದಿಟ್ಟ ಹೋರಾಟ
7ನೇ ವಿಕೆಟ್​ಗೆ ಜೊತೆಯಾದ ಕಮಿಂದು​ ಮೆಂಡೀಸ್​, ಧುನಿಲ್​ ವೆಲ್ಲಲಗೆ ಶ್ರೀಲಂಕಾಗೆ ಆಸರೆಯಾದ್ರು. ಇಂಡಿಯನ್​ ಬೌಲರ್ಸ್​ನ ದಿಟ್ಟವಾಗಿ ಎದುರಿಸಿದ ಈ ಜೋಡಿ 72 ರನ್​ಗಳ ಜೊತೆಯಾಟವಾಡಿತು. 39 ರನ್​ಗಳ ಉತ್ತಮ ಇನ್ನಿಂಗ್ಸ್​ ಕಟ್ಟಿದ ದುನಿಲ್​ ವೆಲ್ಲಲಗೆ, ಕುಲ್​ದೀಪ್​​ ಮೋಡಿಗೆ ಬಲಿಯಾದರು. ಕಮಿಂದು ಮೆಂಡೀಸ್​​, ಶ್ರೇಯಸ್​​ ಅಯ್ಯರ್​ ಎಸೆದ ಶರವೇಗದ ಥ್ರೋಗೆ ರನೌಟ್​ ಆದ್ರು. ಅಂತಿಮವಾಗಿ 50 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡ ಶ್ರೀಲಂಕಾ 240 ರನ್​ ಕಲೆಹಾಕಿತು.

ಬೌಂಡರಿ-ಸಿಕ್ಸರ್​ ಸಿಡಿಸಿದ ಹಿಟ್​ಮ್ಯಾನ್
241 ರನ್​​ಗಳ ಟಾರ್ಗೆಟ್​ ಬೆನ್ನತ್ತಿದ ಟೀಮ್​ ಇಂಡಿಯಾಗೆ ಒನ್ಸ್​ ಅಗೇನ್​ ಕ್ಯಾಪ್ಟನ್​ ರೋಹಿತ್​ ಶರ್ಮಾ ಅಬ್ಬರದ ಆರಂಭ ಒದಗಿಸಿದ್ರು. ಬೌಂಡರಿ, ಸಿಕ್ಸರ್​ಗಳಲ್ಲೇ ರನ್​ ಡೀಲ್​ ಮಾಡಿದ ಹಿಟ್​ಮ್ಯಾನ್,​ 5 ಬೌಂಡರಿ, 4 ಸಿಕ್ಸರ್​​ ಸಿಡಿಸಿ ಘರ್ಜಿಸಿದ್ರು. ಕೇವಲ 29 ಎಸೆತಗಳಲ್ಲೇ ಹಾಫ್​ ಸೆಂಚುರಿ ಚಚ್ಚಿದ್ರು.

ಇದನ್ನೂ ಓದಿ:ಮ್ಯಾಕ್ಸ್​ವೆಲ್​ಗೆ ಗೇಟ್​ಪಾಸ್.. ರಿಲೀಸ್​​ಗೆ ಇಲ್ಲಿದೆ ಪ್ರಮುಖ 3 ಕಾರಣ..!

64 ರನ್​ಗಳಿಸಿದ್ದ ರೋಹಿತ್​ ಶರ್ಮಾ ರಿವರ್ಸ್​ಸ್ವೀಪ್​ ಮಾಡೋ ಯತ್ನದಲ್ಲಿ ವಿಕೆಟ್​ ಕೈ ಚೆಲ್ಲಿದ್ರು. ಅಲ್ಲಿಂದ ಶುರುವಾಯ್ತು ಟೀಮ್​ ಇಂಡಿಯಾದ ಪತನ. ಉತ್ತಮ ಆಟವಾಡ್ತಿದ್ದ ಶುಭ್​ಮನ್​ ಗಿಲ್​ 35 ರನ್​ಗಳಿಸಿ ನಿರ್ಗಮಿಸಿದ್ರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿವಂ ದುಬೆ ಮತ್ತೊಂದು ಫ್ಲಾಪ್​ ಶೋ ನೀಡಿದ್ರು.

ಲಂಕನ್ನರಿಗೆ ಸುಲಭಕ್ಕೆ ಶರಣಾದ ಕಿಂಗ್​ ಕೊಹ್ಲಿ
ಶಿವಂ ದುಬೆ ಬೆನ್ನಲ್ಲೇ ವಿರಾಟ್​ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ರು. ಕೊಹ್ಲಿ 14 ರನ್​ಗಳಿಸಿ ಔಟಾದ್ರೆ, ಶ್ರೇಯಸ್​ ಅಯ್ಯರ್​ 7 ರನ್​ಗಳಿಸುವಷ್ಟರಲ್ಲಿ ಸುಸ್ತಾದ್ರು. ಕೆ.ಎಲ್.ರಾಹುಲ್​ ಡಕೌಟ್​ ಆಗಿ ನಿರ್ಗಮಿಸಿದರು.

ಬಳಿಕ ಕಣಕ್ಕಿಳಿದ ಅಕ್ಷರ್​ ಪಟೇಲ್​​ ಉತ್ತಮ ಆಟವಾಡಿದ್ರು. ವಾಷಿಂಗ್ಟನ್​ ಸುಂದರ್​ ಜೊತೆಗೂಡಿ ಕುಸಿದ ತಂಡಕ್ಕೆ ಆಸರೆಯಾದ್ರು. 44 ರನ್​ಗಳ ಉತ್ತಮ ಇನ್ನಿಂಗ್ಸ್​ ಕಟ್ಟಿ ಗೆಲುವಿನ ಭರವಸೆ ಹುಟ್ಟು ಹಾಕಿದ್ರು. 33.1ನೇ ಓವರ್​​ನಲ್ಲಿ ಲಂಕಾ ಕ್ಯಾಪ್ಟನ್​ ಅಸಲಂಕ ಅಕ್ಷರ್​​ ಆಟಕ್ಕೆ ಬ್ರೇಕ್​ ಹಾಕಿದರು. ಅಕ್ಷರ್​ ಬೆನ್ನಲ್ಲೇ ಸುಂದರ್​ ಆಟವೂ ಅಂತ್ಯವಾಯ್ತು. ಅಂತಿಮವಾಗಿ 208 ರನ್​​ಗಳಿಗೆ ಟೀಮ್​ ಇಂಡಿಯಾ ಆಲೌಟ್​ ಆಯ್ತು. ಹೋರಾಟ ನಡೆಸಿದ ಲಂಕಾ 32 ರನ್​ಗಳ ಗೆಲುವು ದಾಖಲಿಸಿತು. ಶಿವಂ ದುಬೆ, ಕೆ.ಎಲ್.ರಾಹುಲ್ ಝೀರೋ ಸುತ್ತಿ ಔಟ್ ಆಗಿದ್ದಕ್ಕೆ ಪಂತ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸುಖಾಸುಮ್ಮನೆ ಫಾರ್ಮ್​​ನಲ್ಲಿದ್ದ ಪಂತ್​​ರನ್ನು ಬೆಂಚ್​​ನಲ್ಲಿ ಕೂರಿಸಲಾಗಿದೆ. ರಾಹುಲ್ ಬದಲಿಗೆ ಪಂತ್ ಆಡಿಸಿದ್ದರೆ ಇಂಡಿಯಾ ಮೊದಲ ಪಂದ್ಯದಿಂದಲೇ ಗೆಲುವು ಸಾಧಿಸುತ್ತಿತ್ತು ಎಂಬ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ:ವಯನಾಡಿನ ಪ್ರಳಯದ ಭವಿಷ್ಯ ನುಡಿದಿದ್ದ ಗಿಳಿ.. ವರ್ಷದ ಹಿಂದೆ ಪುಟ್ಟ ಹುಡುಗಿ ಬರೆದಿದ್ದ ಕಥೆ ನಿಜವಾಗಿದ್ದೇಗೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸೊನ್ನೆ ಸುತ್ತಿದ ದುಬೆ, ರಾಹುಲ್.. ಹೊಡಿಬಡಿ ಆಟಗಾರನ ಬೆಂಜ್​​ನಲ್ಲಿ ಕೂರಿಸಿ ತಪ್ಪು ಮಾಡಿದ ಗಂಭೀರ್..!

https://newsfirstlive.com/wp-content/uploads/2024/08/GAMBHIR-1.jpg

Load More