newsfirstkannada.com

ಇವತ್ತಿನಿಂದ ಭಾರತ-ವೆಸ್ಟ್ ಇಂಡೀಸ್​ ಮೊದಲ ಟೆಸ್ಟ್.. ಈ ಸಲ ರೋಹಿತ್ ಜೊತೆ ಓಪನಿಂಗ್ ಬರೋದು IPL ಸ್ಟಾರ್ ಆಟಗಾರ..!

Share :

Published July 12, 2023 at 9:41am

Update July 12, 2023 at 9:45am

  ಡೊಮಿನಿಕಾದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ

  ರೋಹಿತ್ ಪಡೆಗೆ ಅನುಭವಿ, ಯುವ ಪಡೆಯ ಬಲ

  ಬೆಂಗಾಲ್ ವೇಗಿ ಮುಖೇಶ್ ಕುಮಾರ್​​​​​​ಗೆ ಸ್ಥಾನ ಡೌಟ್

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಸೋಲಿನ ಬಳಿಕ ಟೀಮ್ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. ವೆಸ್ಟ್ ಇಂಡೀಸ್​​ನ ಡೊಮಿನಿಕಾದಲ್ಲಿ ನಡೆಯಲಿರುವ ಮೊದಲ ಟೆಸ್ಟ್, ರೋಹಿತ್ ಪಡೆಗೆ ಪ್ರತಿಷ್ಟೆಯ ಪಂದ್ಯವಾಗಿದೆ. ಮತ್ತೊಂದೆಡೆ ಆತಿಥೇಯ ವಿಂಡೀಸ್, ಬಲಿಷ್ಟ ಟೀಮ್ ಇಂಡಿಯಾಕ್ಕೆ ಟಫ್ ಫೈಟ್ ನೀಡಿ, ಸರಣಿಯಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.
ಭಾರತ, ವೆಸ್ಟ್ ಇಂಡೀಸ್ ಮೊದಲ ಟೆಸ್ಟ್​ ಪಂದ್ಯಕ್ಕೆ, ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಬಾರ್ಬಡೋಸ್​​​​ನಲ್ಲಿ ಭರ್ಜರಿ ಸಮರಾಭ್ಯಾಸ ನಡೆಸಿರುವ ಟೀಮ್ ಇಂಡಿಯಾ, ಡೊಮಿನಿಕಾ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದೆ.

ಟೀಮ್ ಇಂಡಿಯಾದಲ್ಲಿ ಬಿಗ್​ಸ್ಟಾರ್​ಗಳಿಲ್ಲ. ಫುಲ್ ಸ್ಟ್ರೆಂಥ್​ ಇಲ್ಲದ ತಂಡದಲ್ಲಿ, ಯುವ ಪಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಟ್ರಾನ್ಸಿಷನ್​​​ ಪಿರಿಯಡ್​​​​​​ಗೆ ಈ ಸರಣಿ ಬೆಸ್ಟ್ ಇಕ್ಸಾಂಪಲ್ ಆದ್ದರೂ ಎಕ್ಸ್​ಪೀರಿಮೆಂಟ್​​ ಮಾಡೋಕೆ ಟೀಮ್ ಮ್ಯಾನೇಜ್​ಮೆಂಟ್ ಮುಂದಾಗಿದೆ. ಹಾಗಾಗಿ ಈ ಸರಣಿ, ಯುವ ಆಟಗಾರರಿಗೆ ಅತ್ಯಂತ ಮಹತ್ವದಾಗಿದೆ.

ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಆಯ್ಕೆ, ಕ್ಯಾಪ್ಟನ್ ಮತ್ತು ಕೋಚ್​​ಗೆ ಸ್ವಲ್ಪ ತಲೆನೋವಾಗಿತ್ತು. ಆದ್ರೂ ಕಂಡೀಷನ್ಸ್​ಗೆ ತಕ್ಕಂತೆ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಲು, ಟೀಮ್ ಮ್ಯಾನೇಜ್​ಮೆಂಟ್ ಮುಂದಾಗಿದೆ.

ಕ್ಯಾಪ್ಟನ್ ರೋಹಿತ್, ಜೈಸ್ವಾಲ್ ಆರಂಭಿಕರಾಗಿ ಫಿಕ್ಸ್

ಎಡಗೈ ಬ್ಯಾಟ್ಸ್​ಮನ್ ಯಶಸ್ವಿ ಜೈಸ್ವಾಲ್​ಗೆ, ಪ್ರಾಕ್ಟೀಸ್ ವೇಳೆ ಸಣ್ಣಪುಟ್ಟ ಗಾಯಗಳಾಗಿವೆ ಅನ್ನೋ ಮಾಹಿತಿ ಇದೆ. ಆದ್ರೆ ಜೈಸ್ವಾಲ್ ಮ್ಯಾಚ್​ಫಿಟ್ ಆಗಿದ್ದೇ ಆದ್ರೆ, ಕ್ಯಾಪ್ಟನ್ ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿಯೋದು ಬಹುತೇಕ ಖಚಿತ.

ಟಾಪ್ ಮತ್ತು ಮಿಡಲ್ ಆರ್ಡರ್​​​​​ಗೆ ಬಲ ತುಂಬೋಱರು?

ಟೀಮ್ ಇಂಡಿಯಾ ಟಾಪ್ ಮತ್ತು ಮಿಡಲ್ ಆರ್ಡರ್ ಬ್ಯಾಟಿಂಗ್ ಲೈನ್​ಅಪ್, ಬಲಿಷ್ಟವಾಗಿದೆ. ಶುಭ್​ಮನ್​ ಗಿಲ್ ನಂಬರ್ ತ್ರಿ ಸ್ಲಾಟ್​​ನ ಸಿಮೆಂಟ್ ಮಾಡಿಕೊಳ್ಳಲು, ಇದು ಬೆಸ್ಟ್ ಟೈಮ್. ಟೆಸ್ಟ್​ ಕ್ರಿಕೆಟ್​​ನಲ್ಲಿ ಫಾರ್ಮ್​ ಕಂಡುಕೊಳ್ಳಲು ಪರದಾಡ್ತಿರುವ ವಿರಾಟ್ ಕೊಹ್ಲಿ, ನಂಬರ್ ಫೋರ್​ ಸ್ಲಾಟ್​​​​​ನ ಉಳಿಸಿಕೊಳ್ಳಬೇಕಿದೆ. ಶ್ರೇಯಸ್ ಅಯ್ಯರ್ ಅಲಭ್ಯತೆಯಲ್ಲಿ ತಂಡಕ್ಕೆ ಕಮ್​ಬ್ಯಾಕ್ ಮಾಡಿರುವ ಉಪನಾಯಕ ಅಜಿಂಕ್ಯಾ ರಹಾನೆ, 5ನೇ ಕ್ರಮಾಂಕವನ್ನ ಭದ್ರಗೊಳಿಸಿಕೊಳ್ಳಬೇಕಿದೆ.

ಕೆಳ ಕ್ರಮಾಂಕಕ್ಕೆ ಆಲ್​ರೌಂಡರ್​ಗಳ ಬಲ

ವಿಕೆಟ್ ಕೀಪರ್ ಕೆ.ಎಸ್.ಭರತ್ ಬದಲು ಇಶಾನ್ ಕಿಶನ್, ಡೆಬ್ಯೂ ಮಾಡೋ ಸಾಧ್ಯತೆ ಇದೆ. ಇನ್ನುಳಿದಂತೆ ಆಲ್​ರೌಂಡರ್​ಗಳಾದ ಶಾರ್ದುಲ್ ಠಾಕೂರ್, ರವೀಂದ್ರ ಜಡೇಜಾ ಮತ್ತು ಆರ್.ಅಶ್ವಿನ್, ಕೆಳಕ್ರಮಾಂಕದ ಬ್ಯಾಟಿಂಗ್ ಲೈನ್​ಅಪ್​​​ಗೆ ಬಲ ತುಂಬಲಿದ್ದಾರೆ.

ಅಶ್ವಿನ್- ಜಡೇಜಾ ಸ್ಪಿನ್​​ ಟ್ವಿನ್ಸ್..!

ವಿಂಡೀಸ್ ಕಂಡೀಷನ್ಸ್​ ಆಫ್ ಸ್ಪಿನ್ನರ್ ಅಶ್ವಿನ್ ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾಗೆ ಸಖತ್ ಸೂಟ್ ಆಗುತ್ತೆ. ಹಾಗಾಗಿ ಈ ಇಬ್ಬರು ವರ್ಲ್ಡ್​ ಕ್ಲಾಸ್ ಸ್ಪಿನ್ನರ್ಸ್​, ಡೊಮಿನಿಕಾ ಟೆಸ್ಟ್​ನಲ್ಲಿ ವಿಂಡೀಸ್ ಉಡೀಸ್ ಮಾಡಲು ಜೊತೆಯಾಗಲಿದ್ದಾರೆ.

ಸಿರಾಜ್​ಗೆ ಸಾಥ್ ನೀಡ್ತಾರೆ, ಉನಾದ್ಕಟ್, ಶಾರ್ದುಲ್..!

ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ ಅಲಭ್ಯತೆಯಲ್ಲಿ, ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾ ಫಾಸ್ಟ್ ಬೌಲಿಂಗ್ ಅಟ್ಯಾಕ್, ಲೀಡ್ ಮಾಡಲಿದ್ದಾರೆ. ಸಿರಾಜ್​​ಗೆ ಎಡಗೈ ವೇಗಿ ಜಯದೇವ್ ಉನಾದ್ಕಟ್ ಮತ್ತು ಮೀಡಿಯಮ್ ಪೇಸರ್ ಶಾರ್ದುಲ್ ಠಾಕೂರ್, ಸಾಥ್ ನೀಡೋ ಸಾಧ್ಯತೆ ಹೆಚ್ಚಿದೆ. ಮತ್ತೊಂದೆಡೆ ಇದೇ ಮೊದಲ ಬಾರಿ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರೋ ಬೆಂಗಾಲ್ ಪೇಸರ್ ಮುಖೇಶ್ ಕುಮಾರ್, ಡೆಬ್ಯೂ ಮಾಡೋ ಕನಸಿನಲ್ಲಿದ್ದಾರೆ. ಆದ್ರೆ ಟೀಮ್ ಮ್ಯಾನೇಜ್​ಮೆಂಟ್​​ ನಿರ್ಧಾರ, ಕುತೂಹಲ ಕೆರಳಿಸಿದೆ.

ಒಟ್ಟಿನಲ್ಲಿ ವರ್ಲ್ಡ್ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಮೊದಲ ಟೆಸ್ಟ್ ಸರಣಿ ಆಡ್ತಿರುವ ಟೀಮ್ ಇಂಡಿಯಾ, ವಿಂಡೀಸ್​​ ತಂಡವನ್ನ ಲಘುವಾಗಿ ಪರಿಗಣಿಸದೇ ಇರಲಿ. ಎರಡೂ ಟೆಸ್ಟ್ ಪಂದ್ಯಗಳನ್ನು ಗೆದ್ದು ಜಯಭೇರಿ ಬಾರಿಸಲಿ ಅನ್ನೋದೇ ಅಭಿಮಾನಿಗಳ ಆಶಯ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಇವತ್ತಿನಿಂದ ಭಾರತ-ವೆಸ್ಟ್ ಇಂಡೀಸ್​ ಮೊದಲ ಟೆಸ್ಟ್.. ಈ ಸಲ ರೋಹಿತ್ ಜೊತೆ ಓಪನಿಂಗ್ ಬರೋದು IPL ಸ್ಟಾರ್ ಆಟಗಾರ..!

https://newsfirstlive.com/wp-content/uploads/2023/07/ROHIT_SHARMA-2.jpg

Load More