newsfirstkannada.com

ವಿಶ್ವಕಪ್​ಗೆ ಅರ್ಹತೆ ಪಡೆಯದ ವಿಂಡೀಸ್​ ವಿರುದ್ಧ ಭಾರತಕ್ಕೆ ಮುಖಭಂಗ; ಸೋಲಿನ ಹೊಣೆ ಹೊತ್ತ ಪಾಂಡ್ಯ ಹೇಳಿದ್ದೇನು?

Share :

Published August 15, 2023 at 3:26pm

    ಟೀಂ ಇಂಡಿಯಾದಲ್ಲಿ ಗೆಲುವಿನ ಹಸಿವು, ಹೋರಾಟದ ಕಿಚ್ಚು ಮಾಯ

    ಕೋಚ್​, ಕ್ಯಾಪ್ಟನ್​ಗೆ ಛೀಮಾರಿ ಹಾಕಿದ ವೆಂಕಟೇಶ್ ಪ್ರಸಾದ್

    ನನ್ನಿಂದಲೇ ಉತ್ತಮ ಆಟ ಬರಲಿಲ್ಲ ಎಂದ ಹಾರ್ದಿಕ್​ ಪಾಂಡ್ಯ

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಮುಖಭಂಗ ಅನುಭವಿಸಿದ್ದಾಗಿದೆ. ಇದರಿಂದ ಟೀಮ್ ಮ್ಯಾನೇಜ್​ಮೆಂಟ್​ ಭಾರೀ ಟೀಕೆಗೆ ಗುರಿಯಾಗ್ತಿದೆ. ಆದರೀಗ ಇದೇ ಸೋಲು ಮಾಹಿ ಹೆಸರು ಉಲ್ಲೇಖಿಸಿ ಕೌಂಟರ್ ನೀಡುವಂತಾಗಿದೆ.

2022ರ ಟಿ20 ವಿಶ್ವಕಪ್​​​​​ ಅರ್ಹತೆ ಪಡೆಯುವಲ್ಲೇ ವಿಫಲವಾಗಿದ್ದ ವೆಸ್ಟ್​ ಇಂಡೀಸ್, ಏಕದಿನ ವಿಶ್ವಕಪ್​ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಜಿಂಬಾಬ್ವೆ, ನೆದರ್ಲೆಂಡ್ಸ್​, ಸ್ಕಾಟ್ಲೆಂಡ್​​​ನಂತಹ ಕ್ರಿಕೆಟ್ ಶಿಶುಗಳು ಎದುರು ಮುಖಭಂಗ ಅನುಭವಿಸಿ ಏಕದಿನ ವಿಶ್ವಕಪ್​​ನಿಂದ ಹೊರಗುಳಿದಿದೆ. ಹೀಗಾಗಿ ಸಹಜವಾಗೇ ಟೀಮ್ ಇಂಡಿಯಾ, ವಿಂಡೀಸ್ ತಂಡವನ್ನ ಕಡೆಗಣಿಸಿತ್ತು. ಇದಕ್ಕೀಗ ವಿಂಡೀಸ್ ಸರಿಯಾಗಿಯೆ ಟಕ್ಕರ್ ನೀಡಿದೆ. ಅಷ್ಟೇ ಅಲ್ಲ, 7 ವರ್ಷಗಳ ಬಳಿಕ ವೆಸ್ಟ್​ ವಿಂಡೀಸ್​ ವಿರುದ್ಧ ಸರಣಿ ಸೋಲುಂಡಂತಾಗಿದೆ. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಹಿಡಿಶಾಪ ಹಾಕ್ತಿದ್ದಾರೆ.

ಶುಭ್​ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್

ಕೋಚ್-ಕ್ಯಾಪ್ಟನ್​ ತಂತ್ರಗಳ ಬಗ್ಗೆ ಎದ್ದಿದೆ ಪ್ರಶ್ನೆ..!

ಯುವ ಆಟಗಾರರ ತಂಡವನ್ನ ಕಣಕ್ಕಿಳಿಸಿದ್ದ ಟೀಮ್ ಮ್ಯಾನೇಜ್​ಮೆಂಟ್, ಭಾರೀ ಪ್ರಯೋಗಗಳನ್ನೇ ನಡೆಸಿತ್ತು. ಬ್ಯಾಟಿಂಗ್, ಬೌಲಿಂಗ್​ ಸೇರಿದಂತೆ ನಾಯಕತ್ವದ ಪರಿಪಕ್ವತೆಯಲ್ಲಿ ಎಡವಿದ ಟೀಮ್ ಇಂಡಿಯಾ ಸೋಲಿನ ಮುಖಭಂಗವನ್ನೇ ಅನುಭವಿಸಿದೆ. ಪರಿಣಾಮ ಹೆಡ್​​ ಕೋಚ್ ರಾಹುಲ್ ದ್ರಾವಿಡ್ ತಂತ್ರದ ಬಗ್ಗೆ ಪ್ರಶ್ನೆಗಳು ಉದ್ಬವಿಸುವಂತೆ ಮಾಡಿದೆ. ನಾಯಕ ಹಾರ್ದಿಕ್ ಪಾಂಡ್ಯರ ಕಾರ್ಯ ತಂತ್ರಗಳನ್ನ ಟೀಕಿಸುವಂತೆ ಮಾಡಿದೆ. ಲೋಪಗಳ ಬಗ್ಗೆ ಕೆಂಡಕಾರುವಂತೆ ಮಾಡಿದೆ.

ಇಂಡಿಯಾಗೆ ಗೆಲುವಿನ ಹಸಿವೇ ಇಲ್ಲ ಎಂದ ವೆಂಕಿ

ಏಕದಿನ ಸರಣಿಯಲ್ಲಿ ಮಾಡಿದ್ದ ಪ್ರಯೋಗಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದ ಮಾಜಿ ವೇಗಿ ವೆಂಕಟೇಶ್​ ಪ್ರಸಾದ್​, ಈಗ ಮತ್ತೆ ಹಾರ್ದಿಕ್ ಪಾಂಡ್ಯ ಹಾಗೂ ಕೋಚ್​ ರಾಹುಲ್ ದ್ರಾವಿಡ್‌ಗೆ ಸರಣಿ ಟ್ವೀಟ್ ಮೂಲಕ ಛೀಮಾರಿ ಹಾಕಿದ್ದಾರೆ. ಇಡೀ ಪರಿಸ್ಥಿತಿಗೆ ಟೀಮ್ ಮ್ಯಾನೇಜ್​​ಮೆಂಟ್​ ನೇರ ಕಾರಣ ಎಂದು ಗುಡುಗಿದ್ದಾರೆ. ಸೋಲಿಗೆ ಟೀಮ್ ಮ್ಯಾನೇಜ್​​ಮೆಂಟ್​​ ನೇರ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಷ್ಟಕ್ಕೇ ನಿಲ್ಲದ ವೆಂಕಟೇಶ್ ಪ್ರಸಾದ್, ಏಕದಿನ ವಿಶ್ವಕಪ್​​​, ಕಳೆದ ಟಿ20 ವಿಶ್ವಕಪ್​​​ಗೆ ಅರ್ಹತೆ ಪಡೆಯುವಲ್ಲಿ ಎಡವಿದ್ದ ವೆಸ್ಟ್ ಇಂಡೀಸ್​ ವಿರುದ್ಧದ ಸೋಲು ನೋವಿನ ಸಂಗತಿ ಎಂದಿದ್ದಾರೆ. ಸದ್ಯದ ಟೀಮ್ ಇಂಡಿಯಾಗೆ ಗೆಲುವಿನ ಹಸಿವೇ ಇಲ್ಲ ಎಂದು ಟಾಂಗ್ ನೀಡಿದ್ದಾರೆ.

ಗೆಲುವಿನ ಹಸಿವು ಮಾಯವಾಗಿದೆ

ಟೀಮ್ ಇಂಡಿಯಾ ತನ್ನ ಕೌಶಲ್ಯವನ್ನ ಸುಧಾರಿಸಿಕೊಳ್ಳಬೇಕಿದೆ. ತಂಡದಲ್ಲಿನ ಗೆಲುವಿನ ಹಸಿವು ಮತ್ತು ಹೋರಾಟದ ಕಿಚ್ಚು ಮಾಯವಾಗಿದೆ. ಇದು ನಾಯಕನಿಗೆ ಮನವರಿಕೆಯಾಗುತ್ತಿಲ್ಲ. ಬೌಲರ್‌ಗಳು ಬ್ಯಾಟ್ ಮಾಡಲು ಸಾಧ್ಯವಿಲ್ಲ, ಬ್ಯಾಟ್ಸ್‌ಮನ್‌ಗಳು ಬೌಲಿಂಗ್ ಮಾಡಲು ಸಾಧ್ಯವಿಲ್ಲ. ಯಾರೋ ನಿಮ್ಮ ಮೆಚ್ಚಿನ ಆಟಗಾರ ಇದ್ದರೆ ನೋಡಿ, ಇಲ್ಲದಿದ್ದರೆ ನೋಡದೆ ಕುರುಡರಾಗಿರುವುದು ಒಳ್ಳೆಯದು.

ವೆಂಕಟೇಶ್ ಪ್ರಸಾದ್​, ಮಾಜಿ ಆಟಗಾರ

ವೆಂಕಟೇಶ್​ ಪ್ರಸಾದ್​ ಹೇಳಿದಂತೆ ಈ ಸರಣಿಯುದ್ದಕ್ಕೂ ಟೀಮ್ ಇಂಡಿಯಾದಲ್ಲಿ ಗೆಲುವಿನ ಹಸಿವೇ ಕಾಣಲಿಲ್ಲ. ಕೆಚ್ಚೆದೆಯ ಹೋರಾಟ ನಡೆಸೋ ಮನಸ್ಥಿತಿಯೇ ಯುವ ಆಟಗಾರರಲ್ಲಿ ಇರಲಿಲ್ಲ. ನಾಯಕ ಹಾರ್ದಿಕ್​ ಪಾಂಡ್ಯ ಬಗ್ಗೆ ಹೇಳುವ ಮಾತೇ ಇಲ್ಲ. ಇವೆಲ್ಲದರ ನಡುವೆ ಸೋಲಿನ ಬಳಿಕ ನಾಯಕ ಹಾರ್ದಿಕ್​ ಪಾಂಡ್ಯ, ಸರಣಿ ಸೋಲಿನ ಸಂಪೂರ್ಣ ಹೊರೆ ಹೊತ್ತಿಕೊಂಡ್ರು.

ಬ್ಯಾಟಿಂಗ್‌ ವೇಳೆ ಅಂತಿಮ 10 ಓವರ್‌ಗಳಲ್ಲಿ ನಮ್ಮಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ನಾನು ಕ್ರೀಸ್‌ಗೆ ಬಂದು ಸಮಯ ತೆಗೆದುಕೊಂಡೆ. ಆದರೆ ಅದರ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲನಾದೆ. ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ನನ್ನಿಂದಲೇ ಉತ್ತಮ ಆಟ ಬರಲಿಲ್ಲ. ಇದು ಸೋಲಿಗೆ ಪ್ರಮುಖ ಕಾರಣವಾಯ್ತು.

ಹಾರ್ದಿಕ್ ಪಾಂಡ್ಯ, ನಾಯಕ

ಧೋನಿ ಹೆಸರು ಉಲ್ಲೇಖಿಸಿ ಹಾರ್ದಿಕ್​​ಗೆ ಛೀಮಾರಿ

ಸರಣಿ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಸೋಲಿನ ಹೊಣೆ ಹೊತ್ತುಕೊಂಡ್ರೆ. ಇತ್ತ ಮಾಜಿ ಆಟಗಾರ ವೆಂಕಟೇಶ್​ ಪ್ರಸಾದ್, ಇದೆಲ್ಲ ಮಾತಿಗಷ್ಟೇ ಸೀಮೀತ ಎಂಬಂರ್ಥದಲ್ಲಿ ಕುಟುಕಿದ್ದಾರೆ.

ಮಾಜಿ ಕ್ರಿಕೆಟರ್​ ವೆಂಕಟೇಶ್ ಪ್ರಸಾದ್

ಇವರನ್ನೇ ಹೊಣೆ ಮಾಡಬೇಕು

ಹಾರ್ದಿಕ್ ಹಾಗೂ ರಾಹುಲ್ ಸೋಲಿಗೆ ಹೊಣೆಗಾರರಾಗಿದ್ದು, ಅವರನ್ನ ಹೊಣೆಗಾರರನ್ನಾಗಿ ಮಾಡಬೇಕಾಗಿದೆ. ಎಂಎಸ್ ಧೋನಿ ಸೋಲಿನ ಜವಾಬ್ದಾರಿಯನ್ನು ಹೊತ್ತುಕೊಂಡಾಗ ಅದನ್ನ ಅವರು ಅರ್ಥಮಾಡಿಕೊಂಡಿದ್ದರು. ಈಗ ಅದು ಬರೀ ಮಾತಾಗಿದೆ. ಆಯ್ಕೆಯಲ್ಲಿ ಯಾವುದೇ ಸ್ಥಿರತೆ ಇಲ್ಲ. ಅನಗತ್ಯ ನಿರ್ಧಾರಗಳನ್ನ ಪದೇ ಪದೇ ತೆಗೆದುಕೊಳ್ಳಲಾಗ್ತಿದೆ.

ವೆಂಕಟೇಶ್​ ಪ್ರಸಾದ್, ಮಾಜಿ ಆಟಗಾರ

ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಪರಿಪಕ್ವತೆಯಿಂದ ಕೂಡಿತ್ತು. ನಾಯಕನಾಗಿ ಸೋಲಿನ ಹೊಣೆ ತೆಗೆದುಕೊಳ್ಳುತ್ತಿದ್ದರು. ಆದರೀಗ ಹಾರ್ದಿಕ್ ಪಾಂಡ್ಯ ಸೋಲಿನ ಹೊಣೆ ತೆಗೆದುಕೊಂಡರು. ಅದು ಜಸ್ಟ್​ ಮಾತಿಗಷ್ಟೇ ಸಿಮೀತವಾಗ್ತಿದೆ. ಓವರ್​ ಕಾನ್ಫೆಡೆನ್ಸ್​ನ ಮುಖವಾಡದಲ್ಲಿ ಪದೇ ಪದೇ ಅದೇ ತಪ್ಪುಗಳನ್ನ ಮುಂದುವರಿಸುತ್ತಿದ್ದಾರೆ. ಸದ್ಯ ಸೋಲಿನ ಮುಖಭಂಗ ಅನುಭವಿಸಿರುವ ಟೀಮ್ ಇಂಡಿಯಾ, ಮುಂದಾದ್ರೂ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲ ಮತ್ತಷ್ಟು ಹೀನಾಯ ಮುಖಭಂಗಗಳು ಅನುಭವಿಸುವಲ್ಲಿ ಎರಡು ಮಾತಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​ಗೆ ಅರ್ಹತೆ ಪಡೆಯದ ವಿಂಡೀಸ್​ ವಿರುದ್ಧ ಭಾರತಕ್ಕೆ ಮುಖಭಂಗ; ಸೋಲಿನ ಹೊಣೆ ಹೊತ್ತ ಪಾಂಡ್ಯ ಹೇಳಿದ್ದೇನು?

https://newsfirstlive.com/wp-content/uploads/2023/08/HARDHIK_PANDYA-1.jpg

Load More