newsfirstkannada.com

IND vs WI: ವಿಂಡೀಸ್ ಪ್ರವಾಸದಲ್ಲಿ ಯಾರಿಗೆ ಜಾಕ್​ಪಾಟ್​..? ಯಾರಿಗೆಲ್ಲ ಕೊಕ್..?

Share :

Published June 24, 2023 at 8:14am

    ವಿಂಡೀಸ್ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ

    2 ಪಂದ್ಯಗಳ ಟೆಸ್ಟ್​ ಸರಣಿಗೆ 16 ಸದಸ್ಯರ ತಂಡ ಆಯ್ಕೆ

    ಏಕದಿನ ಸರಣಿಗೆ 17 ಸದಸ್ಯರ ತಂಡ ಪ್ರಕಟ

WTC ಫೈನಲ್​ ಬಳಿಕ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್ ಪರ್ಯಟನೆಗೆ ಸನ್ನದ್ಧವಾಗಿದೆ. ಇದಕ್ಕಾಗಿ ಟೆಸ್ಟ್ ಹಾಗೂ ಏಕದಿನ ತಂಡವನ್ನು ಸೆಲೆಕ್ಷನ್ ಕಮಿಟಿ ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ಹಾಗಾದ್ರೆ ವಿಂಡೀಸ್ ಟಿಕೆಟ್ ಪಡೆದಿರೋ ಆ ಕಲಿಗಳು ಯಾರು?

ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್​ ಫೈನಲ್​ ಮುಗೀದ ಬೆನ್ನಲ್ಲೇ ಟೀಮ್ ಇಂಡಿಯಾ, ಕೆರಿಬಿಯನ್ ಪ್ರವಾಸಕ್ಕೆ ಸಜ್ಜಾಗ್ತಿದೆ. ಸರಿ ಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ವಿಂಡೀಸ್ ಪ್ರವಾಸದಲ್ಲಿ ಟೀಮ್ ಇಂಡಿಯಾ 2 ಟೆಸ್ಟ್​, 3 ಏಕದಿನ, 5 ಟಿ20 ಪಂದ್ಯಗಳನ್ನಾಡಲಿದ್ದು, ಇದಕ್ಕಾಗಿ ಸೆಲೆಕ್ಷನ್ ಕಮಿಟಿ ಅಳೆದು ತೂಗಿ ಟೀಮ್ ಇಂಡಿಯಾವನ್ನ ಪ್ರಕಟಿಸಿದ್ದಾರೆ. ಸದ್ಯ ಟೆಸ್ಟ್ ಹಾಗೂ ಏಕದಿನ ಸರಣಿಗೆ ಮಾತ್ರವೇ ರೋಹಿತ್ ಸಾರಥ್ಯದ ತಂಡವನ್ನ ಪ್ರಕಟಿಸಿರುವ ಸೆಲೆಕ್ಷನ್ ಕಮಿಟಿ ಅಚ್ಚರಿ ಆಯ್ಕೆಗಳು ಮೂಲಕ ಅಭಿಮಾನಿಗಳಿಗೆ ಸರ್​​ಪ್ರೈಸ್ ನೀಡಿದ್ದಾರೆ.

ಜುಲೈ 12ರಿಂದ ಆರಂಭಗೊಳ್ಳಲಿರುವ ವಿಂಡೀಸ್ ಪ್ರವಾಸದಲ್ಲಿ 2 ಟೆಸ್ಟ್​ ಪಂದ್ಯಗಳನ್ನಾಡಲಿರುವ ಟೀಮ್ ಇಂಡಿಯಾ, ಇದೇ ಸರಣಿಯಿಂದಲೇ 3ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್​​​​​​​ ಅಭಿಯಾನ ಆರಂಭಿಸಲಿದೆ. ಈ ನಿಟ್ಟಿನಲ್ಲಿ 16 ಸದಸ್ಯರ ತಂಡವನ್ನ ಪ್ರಕಟಿಸಿರೋ ಬಿಸಿಸಿಐ, ಕೆಲ ಆಟಗಾರರಿಗೆ ಕೊಕ್ ನೀಡಿ ಶಾಕ್ ನೀಡಿದ್ರೆ. ಕೆಲ ಯುವ ಆಟಗಾರರಿಗೆ ಅವಕಾಶ ನೀಡಿರೋ ಸೆಲೆಕ್ಷನ್ ಕಮಿಟಿ, ಭವಿಷ್ಯ ತಂಡ ಕಟ್ಟುವ ಸಂದೇಶ ರವಾನಿಸಿದೆ.

ಟೆಸ್ಟ್​ ಸರಣಿಗೆ ಟೀಮ್ ಇಂಡಿಯಾ

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಯಾಱರಿಗೆ ಸ್ಥಾನ ಸಿಕ್ಕಿದೆ ಅನ್ನೋದನ್ನ ನೋಡೋದ್ರಾದ್ರೆ, ಮುಂಬೈಕರ್​ಗಳಾದ ರೋಹಿತ್ ಶರ್ಮಾ ನಾಯಕರಾಗಿದ್ರೆ. ಅಜಿಂಕ್ಯಾ ರಹಾನೆ ಉಪನಾಯಕರಾಗಿ ಪ್ರಮೋಷನ್​​​​​​​​ ಪಡೆದಿದ್ದಾರೆ. ಉಳಿದಂತೆ ಶುಭಮನ್ ಗಿಲ್​ ತಂಡದಲ್ಲಿದ್ದಾರೆ. ಋತುರಾಜ್ ಗಾಯಕ್ವಾಡ್​​​​​​​​​​​​​ ಟೆಸ್ಟ್​ಗೆ ಚೊಚ್ಚಲ ಕರೆ ಪಡೆದರೆ, ವಿರಾಟ್​, ಯಶಸ್ವಿ ಜೈಸ್ವಾಲ್ ತಂಡದಲ್ಲಿದ್ದಾರೆ. ಇನ್ನು ವಿಕೆಟ್ ಕೀಪರ್​ಗಳಾಗಿ ಕೆ.ಎಸ್.ಭರತ್, ಇಶಾನ್ ಕಿಶನ್ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ರೆ. ಆಲ್​ರೌಂಡರ್ ಕೋಟಾದಲ್ಲಿ ಶಾರ್ದುಲ್ ಠಾಕೂರ್, ರವೀಂದ್ರ ಜಡೇಜಾ, ಆಕ್ಷರ್ ಪಟೇಲ್ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಆಪ್ ಸ್ಪಿನ್ನರ್ ಅಶ್ವಿನ್ ಸ್ಪಿನ್ ಕೋಟಾದಲ್ಲಿ ಆಯ್ಕೆಯಾಗಿರೋ ಏಕೈಕ ಸ್ಪಿನ್ನರ್ ಆಗಿದ್ದಾರೆ. ವೇಗಿಗಳಾಗಿ ಮೊಹಮ್ಮದ್ ಸಿರಾಜ್, ಜೈದೇವ್ ಉನಾದ್ಕಟ್ ಎಂದಿನಂತೆ ಸ್ಥಾನ ಪಡೆದ್ರೆ, 2 ವರ್ಷಗಳ ಬಳಿಕ ಟೆಸ್ಟ್​ ತಂಡದಲ್ಲಿ ನವದೀಪ್ ಸೈನಿ ಸ್ಥಾನ ಪಡೆದಿದ್ದಾರೆ. ಅಲ್ಲದೆ ಬೆಂಗಾಲ್ ವೇಗಿ ಮುಖೇಶ್ ಕುಮಾರ್ ಮೊದಲ ಬಾರಿಗೆ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇದಿಷ್ಟೇ ಅಲ್ಲ.! ಜುಲೈ 27ರಿಂದ ಆರಂಭವಾಗಲಿರೋ 3 ಪಂದ್ಯಗಳ ಏಕದಿನ ಸರಣಿಗೆ 17 ಸದಸ್ಯರ ಟೀಮ್ ಇಂಡಿಯಾವನ್ನ ಪ್ರಕಟಿಸಿರೋ ಆಯ್ಕೆ ಸಮಿತಿ, ಮುಂದಿನ ಏಷ್ಯಾಕಪ್ ಹಾಗೂ ವಿಶ್ವಕಪ್​ ಅನ್ನ ದೃಷ್ಟಿಯಲ್ಲಿ ಇಟ್ಟುಕೊಂಡೇ ತಂಡವನ್ನ ಪ್ರಕಟಿಸಿದಂತೆ ಕಾಣ್ತಿದೆ.

ಏಕದಿನ ಸರಣಿಗೆ ಟೀಮ್ ಇಂಡಿಯಾ

ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ್ರೆ, ಹಾರ್ದಿಕ್ ಪಾಂಡ್ಯ ಉಪ ನಾಯಕರಾಗಿದ್ದಾರೆ. ಇನ್ನುಳಿದಂತೆ ಶುಭ್​ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್​ ಕೊಹ್ಲಿ, ಸೂರ್ಯಕುಮಾರ್ ಯಾದವ್ ಬ್ಯಾಟ್ಸ್​ಮನ್​ಗಳಾಗಿ ಏಕದಿನ ತಂಡದಲ್ಲಿ ಸ್ಥಾನ ಪಡೆದರೆ, ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿ ಏಕದಿನ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ಧಾರೆ. ಇನ್ನು ಇಶಾನ್ ವಿಕೆಟ್ ಕೀಪರ್ ಆಗಿ ಸ್ಥಾನ ಉಳಿಸಿಕೊಂಡಿದ್ರೆ. ಆಲ್​ರೌಂಡರ್​ಗಳಾಗಿ ಶಾರ್ದುಲ್ ಠಾಕೂರ್, ಆರ್​.ಜಡೇಜಾ, ಅಕ್ಷರ್​ ಪಟೇಲ್ ಕಾಣಿಸಿಕೊಂಡಿದ್ದಾರೆ. ಸ್ಪಿನ್ ಕೋಟಾದಲ್ಲಿ ಯುಜುವೇಂದ್ರ ಚಹಲ್, ಕುಲ್​ದೀಪ್ ಯಾದವ್ ಸ್ಥಾನ ಉಳಿಸಿಕೊಂಡರೆ, ವೇಗಿಗಳಾಗಿ ಜೈದೇವ್ ಉನಾದ್ಕಟ್, ಮೊಹಮ್ಮದ್ ಸಿರಾಜ್​​​​​​​​, ಉಮ್ರಾನ್ ಮಲಿಕ್​​​, ಮುಖೇಶ್​ ಕುಮಾರ್​ ಆಯ್ಕೆಯಾಗಿದ್ದಾರೆ.

ಆ ಮೂಲಕ ಟೆಸ್ಟ್​ ಹಾಗೂ ಏಕದಿನ ಸರಣಿಗೆ ಬಲಿಷ್ಠ ತಂಡವನ್ನ ಪ್ರಕಟಿಸಿರೋ ಸೆಲೆಕ್ಷನ್ ಕಮಿಟಿ, ವಿಂಡೀಸ್ ನಾಡಿಗೆ ಯುವ ಹಾಗೂ ಹಿರಿಯರ ಸಮ್ಮಿಶ್ರಣದ ತಂಡವನ್ನ ಕಳುಹಿಸುತ್ತಿದೆ.

ಒಟ್ನಲ್ಲಿ, ಭಾರೀ ಲೆಕ್ಕಚಾರದೊಂದಿಗೆ ಟೆಸ್ಟ್ ಹಾಗೂ ಏಕದಿನ ತಂಡವನ್ನ ಆಯ್ಕೆ ಮಾಡಿರೋ ಸೆಲೆಕ್ಷನ್ ಕಮಿಟಿ, ಭವಿಷ್ಯದ ರೂಟ್​ ಮ್ಯಾಪ್​ಗೆ ಅನುಗುಣವಾಗಿಯೇ ತಂಡವನ್ನ ಪ್ರಕಟಿಸಿದೆ. ಅಷ್ಟೇ ಅಲ್ಲ.! ಕೆಲ ಆಟಗಾರರಿಗೆ ಪರೋಕ್ಷ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿರೋದು ಸುಳ್ಳಲ್ಲ. ಆದ್ರೆ, ಈ ಯಂಗ್ ಪ್ಲೇಯರ್ಸ್ ಪೈಕಿ ವಿಂಡೀಸ್ ಪ್ರವಾಸದಲ್ಲಿ ಯಾರಿಗೆಲ್ಲಾ ಚಾನ್ಸ್​ ಸಿಕ್ಕಿ ಸಕ್ಸಸ್ ಕಾಣುತ್ತಾರೆ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IND vs WI: ವಿಂಡೀಸ್ ಪ್ರವಾಸದಲ್ಲಿ ಯಾರಿಗೆ ಜಾಕ್​ಪಾಟ್​..? ಯಾರಿಗೆಲ್ಲ ಕೊಕ್..?

https://newsfirstlive.com/wp-content/uploads/2023/06/TEAM_INDIA-4.jpg

Load More