newsfirstkannada.com

22 ಬಾಲ್​​ನಲ್ಲಿ 48 ರನ್​​..! ನಿನ್ನೆಯ ಪಂದ್ಯದಲ್ಲಿ ರಿಂಕು ಸಿಂಗ್​ ಆರ್ಭಟ ಯಾರೂ ಮರೆಯುವಂತಿಲ್ಲ..!

Share :

Published July 8, 2024 at 9:47am

  ಹೀನಾಯ ಸೋಲಿಗೆ ಭಾರತ ತಕ್ಕ ಪ್ರತೀಕಾರ..!

  100 ರನ್​ಗಳಿಂದ ಭಾರತ ಭರ್ಜರಿ ಜಯಭೇರಿ

  ಅಭಿಷೇಕ್ ಶರ್ಮಾ​​​​​​​​​​​ ಬ್ಯಾಟಿಂಗ್ ರೌದ್ರನರ್ತನ..!

ಮೊದಲ ಟಿ20ಯಲ್ಲಿ ಭಾರತ ತಂಡ ತಲೆತಗ್ಗಿಸಿತ್ತು. 2ನೇ ಪಂದ್ಯದಲ್ಲಿ ತಲೆ ಎತ್ತಿ ಮೆರೆದಾಡಿದೆ. ಸಿಡಿಗುಂಡಿನ ಬ್ಯಾಟಿಂಗ್ ಹಾಗೂ ಬೆಂಕಿ ಬೌಲಿಂಗ್​​​​​​​​ಗೆ ಜಿಂಬಾಬ್ವೆ ಥಂಡಾ ಹೊಡೆಯಿತು.

ಅಭಿಷೇಕ್​ ಶರ್ಮಾ. 17ನೇ ಐಪಿಎಲ್​​ನಲ್ಲಿ ಈ ಆ್ಯಂಗ್ರಿ ಯಂಗ್​​ಮ್ಯಾನ್​​ ಹೆಸರು ಕೇಳದವರಿಲ್ಲ. ಡಿಸ್ಟ್ರಕ್ಟಿವ್ ಆಟವಾಡಿ ಕ್ರಿಕೆಟ್ ಲೋಕವನ್ನ ಬೆರಗಾಗಿಸಿದ್ರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅಂತಹದೇ ಸಿಡಿಲಬ್ಬರದ ಆಟವಾಡಿ ಸೆನ್ಷೆಷನಲ್ ಸೃಷ್ಟಿಸಿದ್ದಾರೆ.

ಇದನ್ನೂ ಓದಿ:180 ಸಾಕ್ಷ್ಯಗಳ ಸಂಗ್ರಹಿಸಿದ ಪೊಲೀಸರಿಗೆ ಆ ಎರಡು ವಸ್ತುಗಳದ್ದೇ ಟೆನ್ಷನ್..!

ಅಭಿಷೇಕ್​ ಶರ್ಮಾ ಅನ್ನೋ ಯಂಗ್​ಬ್ಯಾಟರ್​​​​ ಹರಾರೆ ಸ್ಪೋರ್ಟ್ಸ್ ಕ್ಲಬ್​ ಮೈದಾನದಲ್ಲಿ ಬ್ಯಾಟಿಂಗ್​ ರೌದ್ರನರ್ತನ ನಡೆಸಿದರು. ಡೆಬ್ಯು ಪಂದ್ಯದಲ್ಲಿ ಡಕೌಟ್ ಆಗಿದ್ದ ಅಭಿಷೇಕ್​ ನಿನ್ನೆ ಜಿಂಬಾಬ್ವೆ ತಂಡಕ್ಕೆ ಮುಟ್ಟಿನೋಡಿಕೊಳ್ಳುವಂತ ಉತ್ತರ ಕೊಟ್ಟರು. ಟಾಸ್ ಗೆದ್ದ ಭಾರತ ಕ್ಯಾಪ್ಟನ್ ಗಿಲ್​​ರನ್ನ ಬೇಗನೆ ಕಳೆದುಕೊಳ್ತು. ಬಳಿಕ ನಡೆದಿದ್ದು ಅಭಿಷೇಕ್​ ದರ್ಬಾರ್​​.

ಜಿಂಬಾಬ್ವೆ ಬೌಲರ್​​ಗಳನ್ನ ಹಣ್ಣುಗಾಯಿ ನೀರುಗಾಯಿ ಮಾಡಿದ ಪಂಜಾಬ್​​ ಪುತ್ತರ್​ ಹರಾರೆಯಲ್ಲಿ ಸಿಕ್ಸರ್​​​-ಬೌಂಡ್ರಿಗಳ ಮಳೆಗರೆದ್ರು. ಎದುರಾಳಿ ಪಡೆಯ ಬೌಲಿಂಗ್​​​ ಕಂಪ್ಲೀಟ್​ ಪುಡಿಗಟ್ಟಿದ ಅಭಿಷೇಕ್ 212.76 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿ, 46 ಎಸೆತಗಳಲ್ಲಿ ಸಿಡಿಲಬ್ಬರದ ಪೂರೈಸಿದ್ರು. ಸಿಡಿದ 8 ಸಿಕ್ಸರ್​​ಗೆ ಫ್ಯಾನ್ಸ್ ಹುಚ್ಚೆದ್ದು ಕುಣಿದ್ರು.

ಇದನ್ನೂ ಓದಿ:ರೋಹಿತ್, ಪಾಂಡ್ಯ, ಪಂತ್..! ಚಾಂಪಿಯನ್ಸ್​ ಟ್ರೋಫಿ ಟೂರ್ನಿಗೆ ಕ್ಯಾಪ್ಟನ್ ಹೆಸರು ಕನ್ಫರ್ಮ್​ ಮಾಡಿದ ಜಯ್ ಶಾ

ಋತುರಾಜ್​ ಜೊತೆ ಸೆಂಚುರಿ ಜುಗಲ್​​ಬಂದಿ
ಸಿಕ್ಸರ್​ನಿಂದ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್​​​​ ಜಿಂಬಾಬ್ವೆ ಬೌಲರ್​ಗಳನ್ನು ನಿರ್ದಯವಾಗಿ ದಂಡಿಸಿದ್ರು. ಇವರ ಸ್ಫೋಟಕ ಆಟಕ್ಕೆ ಋತುರಾಜ್​​​​​​ ಕೂಡ ಸಾಥ್​​ ನೀಡಿದರು. 2ನೇ ವಿಕೆಟ್​ಗೆ ಈ ಜೋಡಿ ಸಿಡಿಲಬ್ಬರದ 137 ರನ್​ ಜೊತೆಯಾಟವಾಡಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು.

ಘರ್ಜಿಸಿದ ಗಾಯಕ್ವಾಡ್​​​..!
ಭಾರತ ಪರ 2ನೇ ವೇಗದ ಸೆಂಚುರಿ ​ಬಾರಿಸಿದ ಅಭಿಷೇಕ್ ಶರ್ಮಾ ಸೆಂಚುರಿ ಆಗ್ತಿದ್ದಂತೆ ಔಟಾದ್ರು. ಇವರ ನಿರ್ಗಮನದ ಬಳಿಕ ರುತುರಾಜ್​ ಅಸಲಿ ಆಟ ಶುರುವಿಟ್ಟುಕೊಂಡ್ರು. 47 ಎಸೆತಗಳಲ್ಲಿ ಅಜೇಯ 77 ರನ್ ಗಳಿಸಿ ಬ್ಯಾಕ್ ವಿತ್ ಬ್ಯಾಂಗ್ ಮಾಡಿದರು. ಸ್ಲಾಗ್ ಓವರ್​​ಗಳಲ್ಲಿ ರಿಂಕು ಸಿಂಗ್​​​​ ಸಾಲಿಡ್​ ಆಟವಾಡಿದ್ರು. ಎದುರಿಸಿದ 22 ಎಸೆತಗಳಲ್ಲಿ ಸ್ಫೋಟಕ 48 ರನ್​ ಚಚ್ಚಿದ್ರು. ಪರಿಣಾಮ ಭಾರತ ತಂಡ 20 ಓವರ್​ಗಳಲ್ಲಿ ಬೃಹತ್ 234 ರನ್​ ಕಲೆಹಾಕ್ತು.

ಭಾರತ ಬಿರುಗಾಳಿ ದಾಳಿಗೆ ಚದುರಿದ ಜಿಂಬಾಬ್ವೆ
ಬಿಗ್ ಟಾರ್ಗೆಟ್ ಬೆನ್ನಟ್ಟಿದ ಜಿಂಬಾಬ್ವೆ ತಂಡ ಭಾರತದ ಬೆಂಕಿ ಬೌಲಿಂಗ್​​​​​​​ಗೆ ತತ್ತರಿಸಿತು. ಯಾವೊಬ್ಬ ಬ್ಯಾಟರ್​ ಕೂಡ ಪ್ರತಿರೋಧ ತೋರಲಿಲ್ಲ. ಟಾಪ್​​​​​ ಆರ್ಡರ್​​ನಿಂದ ಹಿಡಿದು ಲೋವರ್ ಆರ್ಡರ್ ನೆಲಕಚ್ಚಿತ್ತು. ಮುಖೇಶ್​​​ ಕುಮಾರ್​ 3 ಹಾಗೂ ಆವೇಶ್ ಖಾನ್​​​ 3 ವಿಕೆಟ್​ ಬೇಟೆಯ ಪರಿಣಾಮ 134 ರನ್​​​​ಗೆ ಆಲೌಟಾಗಿ 100 ಗಳಿಂದ ಹೀನಾಯ ಸೋಲೊಪ್ಪಿಕೊಳ್ತು. ಈ ಗೆಲುವಿನೊಂದಿಗೆ ಪುಟಿದೆದ್ದ ಭಾರತ ಸರಣಿಯಲ್ಲಿ 1-1 ಸಮಬಲ ಸಾಧಿಸಿದ್ದು, ಮೊದಲ ಹೀನಾಯ ಸೋಲಿಗೆ ತಕ್ಕ ಪ್ರತ್ಯುತ್ತರ ನೀಡಿದೆ.

ಇದನ್ನೂ ಓದಿ:47 ಬಾಲ್​​ನಲ್ಲಿ 100 ರನ್; ಶತಕದ ಹಿಂದಿನ ಅಸಲಿ ಕತೆ ಬಿಚ್ಚಿಟ್ಟ ಅಭಿಶೇಕ್ ಶರ್ಮಾ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

22 ಬಾಲ್​​ನಲ್ಲಿ 48 ರನ್​​..! ನಿನ್ನೆಯ ಪಂದ್ಯದಲ್ಲಿ ರಿಂಕು ಸಿಂಗ್​ ಆರ್ಭಟ ಯಾರೂ ಮರೆಯುವಂತಿಲ್ಲ..!

https://newsfirstlive.com/wp-content/uploads/2024/07/RINKU-SING-1.jpg

Load More