newsfirstkannada.com

ಇಂದು ಭಾರತ-ಪಾಕ್ ಮಧ್ಯೆ​ ಫೈನಲ್ ಪಂದ್ಯ.. ಯುವಿ ನೇತೃತ್ವದ ಇಂಡಿಯಾ ಚಾಂಪಿಯನ್ಸ್ ತಂಡದಲ್ಲಿ ಯಾರೆಲ್ಲ ಇದ್ದಾರೆ..?

Share :

Published July 13, 2024 at 11:45am

    ಇಂಡಿಯಾ ಚಾಂಪಿಯನ್ಸ್ ಟೀಮ್​ನಲ್ಲಿ ಆಡುತ್ತಿರೋ ಕನ್ನಡಿಗರು ಇವರು!

    ಟ್ರೋಫಿ ಗೆಲ್ಲುವ ಭರವಸೆಯಿಂದ ಕಣಕ್ಕೆ ಇಳಿಯಲಿರುವ ಭಾರತ ತಂಡ

    ಆಸ್ಟ್ರೇಲಿಯಾವನ್ನು ಮಣಿಸಿ ಫೈನಲ್​ಗೆ ಎಂಟ್ರಿ ಕೊಟ್ಟಿದ್ದ ಯುವಿ ಟೀಮ್

ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) ಟೂರ್ನಿಯ ಫೈನಲ್ ಪಂದ್ಯ ಇಂಡಿಯಾ ಚಾಂಪಿಯನ್ಸ್ ಮತ್ತು ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳ ನಡುವೆ ಇಂದು ನಡೆಯಲಿದೆ. 2ನೇ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು 86 ರನ್​ಗಳಿಂದ ಸೋಲಿಸುವ ಮೂಲಕ ಯುವರಾಜ್ ಸಿಂಗ್ ನೇತೃತ್ವದ ಇಂಡಿಯಾ ಚಾಂಪಿಯನ್ಸ್ ಫೈನಲ್​ಗೆ ಎಂಟ್ರಿ ಕೊಟ್ಟಿತ್ತು.

ಇದನ್ನೂ ಓದಿ: ಟೀಮ್ ಇಂಡಿಯಾ ಪಾಕ್ ಪ್ರವಾಸ ಮಾಡುತ್ತಾ.. ಇಲ್ಲ, ಚಾಂಪಿಯನ್ಸ್ ಟ್ರೋಫಿಯಿಂದಲೇ ಹಿಂದೆ ಸರಿಯುತ್ತಾ? 

ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ಇಂದು ರಾತ್ರಿ 9 ಗಂಟೆಗೆ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟ್ರೋಫಿಗಾಗಿ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕ್ ಕಾದಾಡಲಿವೆ. ಅಂತಿಮ ಹಣಾಹಣಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿ ಆಗುತ್ತಿರುವುದು ಕ್ರಿಕೆಟ್​ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಯುವರಾಜ್ ಸಿಂಗ್ ನೇತೃತ್ವದಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡ ಫೈನಲ್ ಪಂದ್ಯವಾಡುತ್ತಿದೆ. ರಾಬಿನ್ ಉತ್ತಪ್ಪ ವಿಕೆಟ್ ಕೀಪರ್ ಆಗಿದ್ದಾರೆ. ಅದರಂತೆ ಕರ್ನಾಟಕದ ದಾವಣಗೆರೆ ಎಕ್ಸ್​ಪ್ರೆಸ್​ ವಿನಯ್ ಕುಮಾರ್ ಕೂಡ ಪಂದ್ಯದಲ್ಲಿ ಬೌಲರ್ ಆಗಿದ್ದಾರೆ. ಹರ್ಭಜನ್ ಸಿಂಗ್ ತಂಡದಲ್ಲಿದ್ದಾರೆ.

ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ED ಕಸ್ಟಡಿಗೆ.. 13 ಮಂದಿ ಅರೆಸ್ಟ್​, ಎಲ್ಲಿದ್ದಾರೆ ಇನ್ನೂ 8 ಆರೋಪಿಗಳು..?

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವನ್ನು 20 ರನ್​ಗಳಿಂದ ಮಣಿಸಿ ಪಾಕ್ ಫೈನಲ್​ಗೆ ಬಂದಿತ್ತು. ಇನ್ನು ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಯೂನಿಸ್ ಖಾನ್ ನೇತೃತ್ವದಲ್ಲಿ ಕಣಕ್ಕೆ ಇಳಿಯಲಿದೆ. ಕಮ್ರಾನ್ ಅಕ್ಮಲ್ ವಿಕೆಟ್ ಕೀಪರ್ ಆಗಿದ್ದು ಶಾಹಿದ್ ಅಫ್ರಿದಿ, ಮಿಸ್ಬಾ-ಉಲ್-ಹಕ್, ಸೊಹೈಲ್ ತನ್ವೀರ್ ಸೇರಿ ಇತರೆ ಆಟಗಾರರಿದ್ದಾರೆ.

ಇದನ್ನೂ ಓದಿ: ಜುಲೈ 15 ರಿಂದ ಮಳೆಗಾಲದ ಅಧಿವೇಶನ.. ಸರ್ಕಾರದ ವಿರುದ್ಧ ದೋಸ್ತಿಗಳಿಗೆ ಸಿಕ್ಕಿದೆ ಡಬಲ್​ ಅಸ್ತ್ರ!

ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ ಚಾನೆಲ್​ಗಳಲ್ಲಿ ಈ ಪಂದ್ಯ ನೇರ ಪ್ರಸಾರವಾಗುತ್ತದೆ.

ಇಂಡಿಯಾ ಚಾಂಪಿಯನ್ಸ್ ತಂಡ: ಯುವರಾಜ್ ಸಿಂಗ್ (ನಾಯಕ), ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್), ಸುರೇಶ್ ರೈನಾ, ಅಂಬಾಟಿ ರಾಯುಡು, ಇರ್ಫಾನ್ ಪಠಾಣ್, ಯೂಸಫ್ ಪಠಾಣ್, ಗುರು  ಕೀರತ್ ಸಿಂಗ್, ವಿನಯ್ ಕುಮಾರ್, ಪವನ್ ನೇಗಿ, ಹರ್ಭಜನ್ ಸಿಂಗ್, ರಾಹುಲ್ ಶುಕ್ಲಾ, ಆರ್ ಪಿ ಸಿಂಗ್, ಸೌರಭ್ ತಿವಾರಿ, ಅನುರೀತ್ ಸಿಂಗ್, ನಮನ್ ಓಜಾ, ಧವಳ್ ಕುಲಕರ್ಣಿ, ರಾಹುಲ್ ಶರ್ಮಾ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಇಂದು ಭಾರತ-ಪಾಕ್ ಮಧ್ಯೆ​ ಫೈನಲ್ ಪಂದ್ಯ.. ಯುವಿ ನೇತೃತ್ವದ ಇಂಡಿಯಾ ಚಾಂಪಿಯನ್ಸ್ ತಂಡದಲ್ಲಿ ಯಾರೆಲ್ಲ ಇದ್ದಾರೆ..?

https://newsfirstlive.com/wp-content/uploads/2024/07/IND_VS_PAK_YUVI.jpg

Load More