ಬೆಂಗಳೂರು ಮಾಲ್‌ನಲ್ಲಿ ಮಹಿಳೆ ಜೊತೆ ಅಸಭ್ಯ ವರ್ತನೆ.. ತಲೆಮರೆಸಿಕೊಂಡಿದ್ದ ಆರೋಪಿ ಕೋರ್ಟ್‌ಗೆ ಶರಣು

author-image
admin
ಒಬ್ಬರಲ್ಲ.. 8 ಮಹಿಳೆಯರಿಗೆ ಲೈಂಗಿಕ ಕಿರುಕುಳ; ಮಾಲ್‌ನಲ್ಲಿ ಅಸಭ್ಯ ವರ್ತನೆ ಕೇಸ್‌ಗೆ ಬಿಗ್‌ ಟ್ವಿಸ್ಟ್‌!
Advertisment
  • ಮಾಲ್‌ನಲ್ಲಿ ಅನುಚಿತವಾಗಿ ವರ್ತಿಸಿದ್ದ ಆರೋಪಿ ಕೋರ್ಟ್‌ಗೆ ಶರಣು
  • ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಪೊಲೀಸರಿಂದ ಹುಡುಕಾಟ
  • ನ್ಯಾಯಾಧೀಶರ ಮುಂದೆ ಶರಣಾದ ಆರೋಪಿ ಅಶ್ವಥ್ ನಾರಾಯಣ್

ಬೆಂಗಳೂರಿನ ಪ್ರತಿಷ್ಟಿತ ಮಾಲ್‌ನಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ತೀವ್ರ ಚರ್ಚೆಗೆ ಗುರಿಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಹಿಡಿಶಾಪವನ್ನೇ ಹಾಕಿದ್ದರು. ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನ ಬಂಧಿಸಿ ಶಿಕ್ಷೆ ವಿಧಿಸುವಂತೆ ಆಗ್ರಹಿಸಲಾಗಿತ್ತು.

ವೈರಲ್ ವಿಡಿಯೋಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬೆಂಗಳೂರು ಪೊಲೀಸರು ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿದ್ದರು. ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ IPC ಸೆಕ್ಷನ್ 354 ಎ, 294, 509 ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಅಶ್ಚಥ್ ನಾರಾಯಣ್‌ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದರು. ಇದೀಗ ಮಾಲ್‌ನಲ್ಲಿ ಅನುಚಿತವಾಗಿ ವರ್ತಿಸಿದ್ದ ಆರೋಪಿ ಕೋರ್ಟ್‌ಗೆ ಶರಣಾಗಿದ್ದಾರೆ.

publive-image

ಇದನ್ನೂ ಓದಿ: ಮಾಲ್​ನಲ್ಲಿ ಮಹಿಳೆಯರ ಜತೆ ಅಸಭ್ಯ ವರ್ತನೆ ಮಾಡಿದ್ದ ವೃದ್ಧ ಪತ್ತೆ.. ಬೆಂಗಳೂರಿನ ಯಾವ ಏರಿಯಾ?

ಮಾಲ್‌ನಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪಿ ಅಶ್ವಥ್ ನಾರಾಯಣ್ ಅವರು ಸರೆಂಡರ್ ಆಗಿದ್ದಾರೆ. ಎಸಿಎಂಎಂ 2ರ ನ್ಯಾಯಾಧೀಶರ ಮುಂದೆ ಶರಣಾದ ಅಶ್ವಥ್ ನಾರಾಯಣ್ ಅವರು ಬೇಲ್ ನೀಡಿವಂತೆ ಮನವಿ ಮಾಡಿದರು. ಆರೋಪಿ ಪರ ಹಿರಿಯ ವಕೀಲ ಕೆ.ಎನ್ ಶಶಿಧರ್ ಅವರು ವಾದ ಮಂಡಿಸಿದ್ರು. ವಾದ ಆಲಿಸಿದ ನ್ಯಾಯಾಧೀಶರು ಆರೋಪಿ ಅಶ್ವಥ್ ನಾರಾಯಣ್‌ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment