newsfirstkannada.com

ಬರೀ 2, 5, 10 ರೂಪಾಯಿ ಕಾಯಿನ್ಸ್..! ನಾಣ್ಯಗಳಿಂದಲೇ 25 ಸಾವಿರ ಹೊಂದಿಸಿ ಠೇವಣಿ ಇಟ್ಟ ಸ್ವತಂತ್ರ ಅಭ್ಯರ್ಥಿ..!

Share :

Published March 21, 2024 at 7:56am

Update March 21, 2024 at 8:16am

    ಲೋಕಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ

    5, 10, 2 ರೂ ನಾಣ್ಯ ಸೇರಿ ಒಟ್ಟು 25 ಸಾವಿರ ರೂ ಹಣ ಠೇವಣಿ

    ತನ್ನ ಬಳಿ ಇರುವ ನಾಣ್ಯವನ್ನು ಸೇರಿಸಿ ಪಾವತಿಸಿದ್ದೇನೆ ಎಂದ ಅಭ್ಯರ್ಥಿ

ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಈಗಾಗಲೇ ಪಕ್ಷಗಳು ಪ್ರಚಾರ ಕಾರ್ಯ ಕೈಗೊಂಡಿದೆ. ಇಂತಹ ಸನ್ನಿವೇಶದಲ್ಲಿ ಜಬಲ್​ಪುರ ನಿವಾಸಿಯೊಬ್ಬರು ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದು, ನಾಮಪತ್ರ ನೀಡುವ ಸಮಯದಲ್ಲಿ ಭದ್ರತಾ ಠೇವಣಿಯಾಗಿ ನಾಣ್ಯರೂಪದಲ್ಲಿ 25 ಸಾವಿರ ರೂಪಾಯಿಯನ್ನು ಜಿಲ್ಲಾಧಿಕಾರಿಗೆ ನೀಡಿದ್ದಾರೆ.

ವಿನಯ್​ ಚಕ್ರವರ್ತಿ ಎಂಬ ವ್ಯಕ್ತಿ ಈ ಬಾರಿಯ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಹಾಗಾಗಿ ಜಬಲ್ಪುರದಿಂದ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ಹೀಗಾಗಿ ಚುನಾವಣಾ ಠೇವಣಿಯನ್ನು ಇಡಲು 5 ರೂಪಾಯಿ, 10 ರೂಪಾಯಿ, 2 ರೂಪಾಯಿಯ ನಾಣ್ಯ ಸೇರಿ ಒಟ್ಟು 25 ಸಾವಿರ ರೂಪಾಯಿಯನ್ನು ಠೇವಣಿಯಾಗಿ ಪಾವತಿಸಿದ್ದಾರೆ.

ವಿನಯ್​ ಚಕ್ರವರ್ತಿ ಚುನಾವಣೆ ಸ್ಪರ್ಧೆಯ ಬಗ್ಗೆ ಮಾತನಾಡಿದ್ದು, ‘ನಾನು 2 ರೂಪಾಯಿ, 5 ರೂಪಾಯಿ, 10 ರೂಪಾಯಿ ನಾಣ್ಯವನ್ನು ಸೇರಿಸಿಕೊಂಡು 25 ಸಾವಿರವನ್ನು ಪಾವತಿಸಿದ್ದೇನೆ. ಡಿಜಿಟಲ್​ ಅಥವಾ ಆನ್​ಲೈನ್​ ಮೂಲಕ ಪಾವತಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಯಾವುದೇ ಸೌಲಭ್ಯವಿಲ್ಲ. ಅದಕ್ಕಾಗಿ ತನ್ನ ಬಳಿ ಇರುವ ನಾಣ್ಯವನ್ನು ಪಾವತಿಸಿದ್ದೇನೆ’ ಎಂದು ಹೇಳಿದ್ದಾರೆ.

ಇನ್ನು ಮೊದಲ ಹಂತದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಬೂಧವಾರದಂದು ಆರಂಭವಾಗುತ್ತಿದೆ. ಏಪ್ರಿಲ್​ 19ರಂದು ಮೊದಲ ಹಂತದಲ್ಲಿ ಅರ್ಧ ಡಜನ್​ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೀ 2, 5, 10 ರೂಪಾಯಿ ಕಾಯಿನ್ಸ್..! ನಾಣ್ಯಗಳಿಂದಲೇ 25 ಸಾವಿರ ಹೊಂದಿಸಿ ಠೇವಣಿ ಇಟ್ಟ ಸ್ವತಂತ್ರ ಅಭ್ಯರ್ಥಿ..!

https://newsfirstlive.com/wp-content/uploads/2024/03/Coins.jpg

Load More