ಪಹಲ್ಗಾಮ್ ಉಗ್ರರ ದಾಳಿಗೆ ಭಾರತದ ಪ್ರತೀಕಾರ ಹೇಗೆ? 3 ಹಂತದಲ್ಲಿ ಪಾಕ್‌ ಸೊಕ್ಕು ಮುರಿಯಲು ನಿರ್ಧಾರ

author-image
admin
Updated On
ಪಹಲ್ಗಾಮ್ ಉಗ್ರರ ದಾಳಿಗೆ ಭಾರತದ ಪ್ರತೀಕಾರ ಹೇಗೆ? 3 ಹಂತದಲ್ಲಿ ಪಾಕ್‌ ಸೊಕ್ಕು ಮುರಿಯಲು ನಿರ್ಧಾರ
Advertisment
  • ಹಮಾಸ್ ಉಗ್ರರಿಗೆ ಇಸ್ರೇಲ್‌ ಹೇಗೆ ಬುದ್ಧಿ ಕಲಿಸಿತು ಆಗಿರಬೇಕು!
  • ಪಾಕ್ ಮೇಲೆ ಭಯಾನಕವಾದ ಪ್ರತೀಕಾರಕ್ಕೆ ಭಾರತೀಯರ ಆಗ್ರಹ
  • ನಿನ್ನೆಯಿಂದಲೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸರಣಿ ಸಭೆ

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿರುವ ಉಗ್ರರ ನರಮೇಧಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಉಗ್ರರು ಹಾಗೂ ಪಾಕಿಸ್ತಾನದ ವಿರುದ್ಧ ಭಾರತ ಮತ್ತಷ್ಟು ಕಠಿಣ ನಿರ್ಧಾರಗಳನ್ನೇ ತೆಗೆದುಕೊಳ್ಳಬೇಕು ಅನ್ನೋ ಕೂಗು ದೇಶಾದ್ಯಂತ ಜ್ವಾಲಾಮುಖಿಯಂತೆ ಪ್ರತಿಧ್ವನಿಸುತ್ತಿದೆ. ಹಮಾಸ್ ರಕ್ತಿಬಿಜಾಸುರರಿಗೆ ಇಸ್ರೇಲ್‌ ಹೇಗೆ ಬುದ್ಧಿ ಕಲಿಸಿತೋ ಅಷ್ಟೊಂದು ಭಯಾನಕವಾದ ಪ್ರತೀಕಾರವನ್ನು ಭಾರತ ಕೈಗೊಳ್ಳಬೇಕು ಎಂದು ಭಾರತೀಯರು ಒತ್ತಾಯಿಸುತ್ತಿದ್ದಾರೆ.

ಪಹಲ್ಗಾಮ್‌ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸರಣಿ ಸಭೆಗಳನ್ನು ನಡೆಸುತ್ತಿದೆ. ಇಂದು ಕೇಂದ್ರ ಸರ್ಕಾರ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಸರ್ವಪಕ್ಷ ನಾಯಕರ ಮಹತ್ವದ ಸಭೆಯನ್ನು ಕರೆಯಲಾಗಿದೆ. ಈ ಮಧ್ಯೆ ಪಾಕಿಸ್ತಾನಕ್ಕೆ ಪ್ರಮುಖವಾಗಿ 3 ಹಂತದಲ್ಲಿ ಪೆಹಲ್ಗಾಮ್ ದಾಳಿಗೆ ಪ್ರತ್ಯುತ್ತರ ನೀಡಲು ಭಾರತ ನಿರ್ಧಾರ ಮಾಡಿದೆ.

publive-image

3 ಹಂತದಲ್ಲಿ ಪಾಕ್‌ಗೆ ಪ್ರತ್ಯುತ್ತರ!
1. ಮೊದಲ ಹಂತದಲ್ಲಿ ಭಾರತ ಸರ್ಕಾರ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಕ್ರಮಗಳ ಮೂಲಕ ಪ್ರತ್ಯುತ್ತರ ನೀಡಲು ತೀರ್ಮಾನ ಮಾಡಿದೆ. ಅಂದ್ರೆ ಪಾಕ್ ರಾಯಭಾರ ಕಚೇರಿ ಬಂದ್ ಮಾಡುವುದು. ಪಾಕಿಸ್ತಾನಿಯರನ್ನು ದೇಶ ಬಿಟ್ಟು ಹೋಗುವ ಕಠಿಣ ನಿರ್ಧಾರವನ್ನು ನಿನ್ನೆಯೇ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಉಗ್ರರ ಪೈಶಾಚಿಕ ಕೃತ್ಯ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ.. ಗಾಬರಿಯಿಂದ ಠಾಣೆಗೆ ಬಂದ ಗಂಭೀರ್​..! 

2. 2ನೇ ಹಂತದಲ್ಲಿ ಭಾರತ, ಮಿಲಿಟರಿ ಕ್ರಮಗಳ ಮೂಲಕ ಪಾಕ್ ಹಾಗೂ ಉಗ್ರರಿಗೆ ಪಾಠ ಕಲಿಸಲು ತೀರ್ಮಾನ ಮಾಡಿದೆ. ಈಗಾಗಲೇ ಗಡಿಯಲ್ಲಿ ಯೋಧರು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದಾರೆ.

3. ಮೂರನೇ ಹಂತದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಾದ P5 ರಾಷ್ಟ್ರಗಳಿಗೆ ಪಾಕಿಸ್ತಾನದ ಉಗ್ರ ಪ್ರೇಮವನ್ನ ಮನವರಿಕೆ ಮಾಡಲು ಮುಂದಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ P5 ರಾಷ್ಟ್ರಗಳೆಂದರೆ ಅಮೆರಿಕಾ, ರಷ್ಯಾ, ಬ್ರಿಟನ್, ಚೀನಾ ಹಾಗೂ ಫ್ರಾನ್ಸ್‌. ಈ 5 ರಾಷ್ಟ್ರಗಳಿಗೆ ಭಾರತ, ಪಾಕಿಸ್ತಾನ ಉಗ್ರರಿಗೆ ಆಶ್ರಯ, ಪೋತ್ಸಾಹ, ಬೆಂಬಲ ನೀಡುವುದರ ಬಗ್ಗೆ ತಿಳಿಸಲಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಪಾಕ್‌ನ ಭಯೋತ್ಪಾದಕ ಪೋತ್ಸಾಹಕ ಬಣ್ಣ ಬಯಲು ಮಾಡಲು ಭಾರತ ತೀರ್ಮಾನ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment