/newsfirstlive-kannada/media/post_attachments/wp-content/uploads/2025/06/CHINNASWAMY-1.jpg)
ಬೆಂಗಳೂರು: ಆರ್ಸಿಬಿ ಸೆಲೆಬ್ರೇಷನ್ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದ ಬೆನ್ನಲ್ಲೇ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಚಿನ್ನಸ್ವಾಮಿ ಮೈದಾನದಲ್ಲಿ ನಿಗದಿಯಾಗಿದ್ದ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿದೆ.
ದುರಂತದ ಬಳಿಕ ಬಿಸಿಸಿಐನಿಂದ ಪಂದ್ಯ ಸ್ಥಳಾಂತರಗೊಂಡಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಎ ಮತ್ತು ಸೌಥ್ ಆಫ್ರಿಕಾ ಎ ನಡುವೆ ಪಂದ್ಯಗಳು ನಡೆಯಬೇಕಿತ್ತು. ನವೆಂಬರ್ 13 ರಿಂದ 19ರವರೆಗೆ ಮೂರು ಏಕದಿನ ಪಂದ್ಯಗಳು ನಡೆಯಬೇಕಿದ್ದವು. ಇದೀಗ ಈ ಪಂದ್ಯಗಳು ಸ್ಥಳಾಂತರಗೊಂಡಿವೆ.
ಎಲ್ಲಿ ನಡೆಯುತ್ತದೆ..?
ಬೆಂಗಳೂರು ಬದಲಾಗಿ ರಾಜ್ಕೋಟ್ನಲ್ಲಿ ಪಂದ್ಯ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಗುಜರಾತ್ನ ರಾಜ್ಕೋಟ್ನಲ್ಲಿರುವ ನಿರಂಜನ್ ಶಾ ಅಂತಾರಾಷ್ಟ್ರಿಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಪಂದ್ಯ ಸ್ಥಳಾಂತರಕ್ಕೆ ಬಿಸಿಸಿಐ ಸರಿಯಾದ ಕಾರಣ ನೀಡಿಲ್ಲ. ಪಂದ್ಯ ಸ್ಥಳಾಂತರಗೊಂಡಿದೆ ಎಂದಷ್ಟೇ ತಿಳಿಸಿದೆ.
ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಟ್ರೋಫಿ ಗೆದ್ದಿತ್ತು. ಟ್ರೋಫಿ ಗೆದ್ದ ಖುಷಿಯಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಕ್ಟರಿ ಸೆಲೆಬ್ರೇಷನ್ ಇಟ್ಟುಕೊಂಡಿತ್ತು. ಇದನ್ನು ವೀಕ್ಷಿಸಲು ಲಕ್ಷಾಂತರ ಆರ್ಸಿಬಿ ಅಭಿಮಾನಿಗಳು ಚಿನ್ನಸ್ವಾಮಿಸ್ಟೇಡಿಯಂಗೆ ಜಮಾಯಿಸಿದ್ದರು. ಈ ವೇಳೆ ನೂಕು-ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 11 ಆರ್ಸಿಬಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ