/newsfirstlive-kannada/media/post_attachments/wp-content/uploads/2024/09/Akash-deep.jpg)
ದುಲೀಪ್ ಟ್ರೋಫಿಯಲ್ಲಿ ಆರ್​​ಸಿಬಿಯ ಬೌಲರ್​​ ಆಕಾಶ್ ದೀಪ್ ಸಂಚಲ ಸೃಷ್ಟಿಸಿದ್ದಾರೆ. ಇಂಡಿಯಾ ಎ ಪರ ಮಾರಕ ಬೌಲಿಂಗ್ ದಾಳಿ ಮಾಡ್ತಿದ್ದು, ಬಿ ತಂಡಕ್ಕೆ ದೊಡ್ಡ ಸವಾಲ್ ಆಗಿದ್ದಾರೆ.
ಮೊದಲ ಇನ್ನಿಂಗ್ಸ್​ನಲ್ಲಿ 27 ಓವರ್​ ಮಾಡಿರುವ ಆಕಾಶ್ ದೀಪ್, ನಾಲ್ಕು ವಿಕೆಟ್ ಕಿತ್ತು ಕೇವಲ 60 ರನ್​​ ನೀಡಿದ್ದಾರೆ. ಜೊತೆಗೆ 7 ಓವರ್​​ಗಳು ಮೇಡಿನ್ ಆಗಿವೆ. ಇನ್ನು ಎರಡನೇ ಇನ್ನಿಂಗ್ಸ್​ನಲ್ಲಿ ಬೌಲಿಂಗ್ ಮಾಡ್ತಿದ್ದು, 9 ಓವರ್​ ಮಾಡಿ ಈಗಾಗಲೇ ಎರಡು ವಿಕೆಟ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಈ ಐದು ಆಟಗಾರರ ಮೇಲೆ RCB ಕಣ್ಣು; ಮೆಗಾ ಹರಾಜಿನಲ್ಲಿ 4 ವಿದೇಶಿ ಆಟಗಾರರ ಖರೀದಿಗೆ ಟಾರ್ಗೆಟ್..!
ಇನ್ನು ಟಾಸ್ ಸೋತು ಬ್ಯಾಟ್ ಮಾಡಿದ ಇಂಡಿಯಾ ಬಿ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ 310 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಎ ತಂಡವು 231 ರನ್​​ಗೆ ಆಲೌಟ್ ಆಗಿತ್ತು. ಮತ್ತೆ ಎರಡನೇ ಇನ್ನಿಂಗ್ಸ್ ಆಂಭಿಸಿದ್ದ ಬಿ ತಂಡ 6 ವಿಕೆಟ್ ಕಳೆದುಕೊಂಡು 150 ರನ್​ಗಳಿಸಿದೆ. ಈ ಮೂಲಕ ಬಿ ತಂಡವು 240 ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ.
ಎ ತಂಡವನ್ನು ಶುಬ್ಮನ್ ಗಿಲ್ ಮುನ್ನಡೆಸುತ್ತಿದ್ದರೆ, ಬಿ ತಂಡಕ್ಕೆ ಅಭಿಮನ್ಯು ಈಶ್ವರನ್ ನಾಯಕರಾಗಿದ್ದಾರೆ. ಆಕಾಶ್​ ದೀಪ್ ಅವರ ಅದ್ಭುತ ಪ್ರದರ್ಶನ ಕಣ್ತುಂಬಿಕೊಂಡ ಅಭಿಮಾನಿಗಳು, ಆಕಾಶ್ ದೀಪ್ ಆರ್​ಸಿಬಿಗೆ ಬೇಕೇಬೇಕು. ಡಿಸೆಂಬರ್​ನಲ್ಲಿ ನಡೆಯುವ ಹರಾಜಿನಲ್ಲಿ ಮತ್ತೆ ಖರೀದಿ ಮಾಡಬೇಕು. ಇಲ್ಲ ಅಂದರೆ ರಿಟೈನ್​​ ಲಿಸ್ಟ್​ನಲ್ಲಿ ಸಿರಾಜ್​​ ಅವರನ್ನು ಕೈಬಿಟ್ಟು ಇವರನ್ನೇ ಸೇರಿಸಿಕೊಳ್ಳಿ ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ದ್ರಾವಿಡ್-ಗಂಭೀರ್ ಬೇರೆ ಬೇರೆ, ವ್ಯತ್ಯಾಸ ಇದೆ -ದೊಡ್ಡ ವಿಚಾರ ಬಹಿರಂಗ ಮಾಡಿದ ಪಂತ್
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್