/newsfirstlive-kannada/media/post_attachments/wp-content/uploads/2025/06/RISHABH_PANT_KL_RAHUL-1.jpg)
ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಭರ್ಜರಿ ಶತಕದಿಂದ ಟೀಮ್ ಇಂಡಿಯಾ 364 ರನ್ಗೆ ಆಲೌಟ್ ಆಗಿದೆ. 371 ರನ್ಗಳ ಟಾರ್ಗೆಟ್ ಅನ್ನು ಟೀಮ್ ಇಂಡಿಯಾ ಇಂಗ್ಲೆಂಡ್ಗೆ ನೀಡಿದೆ.
2ನೇ ಇನ್ನಿಂಗ್ಸ್ನ 4ನೇ ದಿನದಾಟದಲ್ಲಿ ಬ್ಯಾಟಿಂಗ್ ಆರಂಭಿಸಿದ್ದ ಕೆ.ಎಲ್ ರಾಹುಲ್ ಹಾಗೂ ರಿಷಭ್ ಪಂತ್ ಇಬ್ಬರು ಸೆಂಚುರಿ ಬಾರಿಸಿದ್ದರು. ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ವೇಗವಾಗಿ ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ ಕೇವಲ 130 ಬಾಲ್ಗಳಲ್ಲಿ 13 ಬೌಂಡರಿ ಹಾಗೂ 2 ಅದ್ಭುತವಾದ ಸಿಕ್ಸರ್ಗಳಿಂದ 100 ರನ್ ಬಾರಿಸಿದರು. ಈ ಟೆಸ್ಟ್ನಲ್ಲಿ ಪಂತ್ ಅವರ 2ನೇ ಶತಕ ಇದಾಗಿತ್ತು.
ಕೆ.ಎಲ್ ರಾಹುಲ್ ಅವರು 13 ಬೌಂಡರಿಗಳಿಂದ ಶತಕ ಗಳಿಸಿದರು. ಶತಕದ ಬಳಿಕವೂ ಬ್ಯಾಟಿಂಗ್ ಮುಂದುವರೆಸಿದ್ದ ರಾಹುಲ್ ಒಟ್ಟು 247 ಬಾಲ್ಗಳಲ್ಲಿ 18 ಬೌಂಡರಿಗಳನ್ನು ಬಾರಿಸಿ 137 ರನ್ ಗಳಿಸಿ ಆಡುತ್ತಿದ್ದರು. ಈ ವೇಳೆ ಬ್ರೈಡನ್ ಕಾರ್ಸೆ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆಗಿ ಬೇಸರದಲ್ಲೇ ಪೆವಿಲಿಯನ್ಗೆ ನಡೆದರು.
ಮೊದಲ ಇನ್ನಿಂಗ್ಸ್ನಲ್ಲಿ ವಿಫಲ ಬ್ಯಾಟಿಂಗ್ ಮಾಡಿದ್ದ ಕನ್ನಡಿಗ ಕರುಣ್ ನಾಯರ್ ಅವರು 2ನೇ ಇನ್ನಿಂಗ್ಸ್ನಲ್ಲೂ ಕೇವಲ 20 ರನ್ಗೆ ವಿಕೆಟ್ ಒಪ್ಪಿಸಿದರು. ಇವರನ್ನು ಬಿಟ್ಟರೇ ರವಿಂದ್ರ ಜಡೇಜಾ 25 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರನ್ನೇ ಬಿಟ್ಟರೇ ಉಳಿದವರು ಯಾರು ಉತ್ತಮ ಬ್ಯಾಟಿಂಗ್ ಮಾಡಲಿಲ್ಲ.
ಇದನ್ನೂ ಓದಿ:ಬ್ಯಾಕ್ ಟು ಬ್ಯಾಕ್ ಸೆಂಚುರಿ.. ಕನ್ನಡಿಗ ಕೆ.ಎಲ್ ರಾಹುಲ್ ಬೆನ್ನಲ್ಲೇ ರಿಷಭ್ ಪಂತ್ ಶತಕ
ಸಿರಾಜ್, ಬೂಮ್ರಾ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ಈ ಮೂವರು ಡಕೌಟ್ ಆಗಿ ಕೆಟ್ಟ ದಾಖಲೆ ಬರೆದರು. ಇದರಿಂದ ಟೀಮ್ ಇಂಡಿಯಾ ಕೇವಲ 364 ರನ್ಗಳಿಗೆ ಆಲೌಟ್ ಆಯಿತು. ಟೆಸ್ಟ್ ಮುಗಿಯಲು ಇನ್ನೊಂದು ದಿನ ಬಾಕಿ ಇದೆ. ಒಂದು ವೇಳೆ ಇಂಗ್ಲೆಂಡ್ 371 ರನ್ ಗಳಿಸಿದರೆ ಗೆಲುವು ಪಡೆಯಲಿದೆ. ಈ ರನ್ ಒಳಗೆ ಇಂಗ್ಲೆಂಡ್ ಆಲೌಟ್ ಆದ್ರೆ ಟೀಮ್ ಇಂಡಿಯಾ ಜಯ ಸಾಧಿಸಲಿದೆ. ಒಂದು ವೇಳೆ ನಾಳೆ ಇಡೀ ದಿನ ಇಂಗ್ಲೆಂಡ್ ಕ್ರೀಸ್ ಕಾಯ್ದುಕೊಂಡರೇ ಟೆಸ್ಟ್ ಡ್ರಾ ಆಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ