Advertisment

20 ವರ್ಷಗಳ ಬಳಿಕ ಇದೇ ಮೊದಲ ಬಾರಿ; ಮೆಲ್ಬರ್ನ್​ ಅಂಗಳದಲ್ಲಿ ಇತಿಹಾಸ ಬರೆದ ಭಾರತ-ಆಸ್ಟ್ರೇಲಿಯಾ

author-image
Gopal Kulkarni
Updated On
20 ವರ್ಷಗಳ ಬಳಿಕ ಇದೇ ಮೊದಲ ಬಾರಿ; ಮೆಲ್ಬರ್ನ್​ ಅಂಗಳದಲ್ಲಿ ಇತಿಹಾಸ ಬರೆದ ಭಾರತ-ಆಸ್ಟ್ರೇಲಿಯಾ
Advertisment
  • 20 ವರ್ಷಗಳ ಬಳಿಕ ಮೆಲ್ಬರ್ನ್​ ದಲ್ಲಿ ಇತಿಹಾಸ ಬರೆದ ಭಾರತ-ಆಸೀಸ್
  • 2003ರ ಬಳಿಕ ಇದೇ ಮೊದಲ ಬಾರಿ ಎರಡು ದಿನದಾಟದಲ್ಲಿ 300 ರನ್ ಕಲೆ
  • ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮೊದಲ ದಿನವೇ 311 ರನ್ ಗಳಿಕೆ

ಆಸ್ಟ್ರೇಲಿಯಾದ ಮೆಲ್ಬರ್ನ್​ ದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್​​ನ ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಭಾರತದ ಮೇಲೆ ಹಿಡಿತ ಸಾಧಿಸಿದೆ. ಸದ್ಯ ಈ ಎರಡು ಟೀಮ್​ಗಳು ಮೆಲ್ಬರ್ನ್​ದಲ್ಲಿ ಹೊಸ ಇತಿಹಾಸವನ್ನು ಬರೆದಿವೆ. ಇದೇ ಮೊದಲ ಬಾರಿಗೆ 2003-04ರ ನಂತರ ಟೆಸ್ಟ್​ನ ಮೊದಲೆರಡು ದಿನಗಳಲ್ಲಿ 300ಕ್ಕೂ ಹೆಚ್ಚು ರನ್ ಕಲೆ ಹಾಕಿ ದಾಖಲೆ ನಿರ್ಮಿಸಿವೆ

Advertisment

2003-04ರಿಂದಲೂ ಈ ಒಂದು ಬಾಕ್ಸಿಂಗ್ ಡೇ ಮ್ಯಾಚ್​ನ್ನ ಉಭಯ ತಂಡಗಳು ಆಡಲು ಶುರುಮಾಡಿವೆ. ಮೊದಲ ಬಾರಿಗೆ ಆತಿಥ್ಯವಹಿಸಿದ್ದ ಆಸ್ಟ್ರೇಲಿಯಾ 9 ವಿಕೆಟ್​ಗಳ ಅಂತರದಲ್ಲಿ ಗೆಲುವು ಸಾಧಿಸಿತ್ತು. ವಿರೇಂದ್ರ ಶೆಹ್ವಾಗ್ 195ರನ್​ ಗಳಿಸಿ 366 ರನ್ ಫಸ್ಟ್ ಇನ್ನಿಂಗ್ಸ್​ನಲ್ಲಿ ಕಲೆ ಹಾಕಲು ಬುನಾದಿ ಹಾಕಿಕೊಟ್ಟಿದ್ದರು. ಆಸ್ಟ್ರೇಲಿಯಾ ಪರವು ಮ್ಯಾಥೊ ಹೆಡನ್ ಹಾಗೂ ರಿಕ್ಕಿ ಪಾಂಟಿಂಗ್ ಜೊತೆಯಾಟದಿಂದ 300ರನ್ ಕಲೆ ಹಾಕಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಇಂತಹದೊಂದು ದಾಖಲೆ ಮತ್ತೊಮ್ಮೆ ಆಗಿದೆ.

ಇದನ್ನೂ ಓದಿ: ಯಶಸ್ವಿ ಜೈಸ್ವಾಲ್​ ಸೆಂಚುರಿ ಮಿಸ್​.. ಯುವ ಆಟಗಾರನ ರನೌಟ್​ ಮಾಡಿಸಿದ್ರಾ ವಿರಾಟ್ ಕೊಹ್ಲಿ..?

ಸದ್ಯ ಮೆಲ್ಬರ್ನ್​ದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್​​ ಮ್ಯಾಚ್​ನಲ್ಲಿ ಆಸ್ಟ್ರೆಲಿಯಾ ಮೊದಲ ದಿನದಾಟ ಮುಗಿದಾಗ 311 ರನ್​ಗಳ ಕಲೆ ಹಾಕಿ 6 ವಿಕೆಟ್ ಕಳೆದುಕೊಂಡಿತ್ತು. ಎರಡನೇ ದಿನದಾಟಕ್ಕೆ 163ರನ್​ಗಳನ್ನು ಸೇರಿಸಿ ಸರ್ವಪತನಗೊಂಡಿತ್ತು. ಬಳಿಕ ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ 164 ರನ್​ ಕಲೆ ಹಾಕುವ ಮೂಲಕ ಎರಡನೇ ದಿನದಾಟ ಮುಗಿಸಿತ್ತು. ಒಟ್ಟಾರೆ ಎರಡನೇ ದಿನದಾಟಕ್ಕೆ ಎರಡು ತಂಡಗಳು ಸೇರಿ 327 ರನ್​ ಕಲೆ ಹಾಕಿವೆ.

Advertisment

ಇದನ್ನೂ ಓದಿ:ವಿರಾಟ್​ ಕೊಹ್ಲಿ ವಿರುದ್ಧ ಚಿತ್ರ ವಿಚಿತ್ರವಾಗಿ ವರ್ತನೆ ಮಾಡಿದ ಆಸ್ಟ್ರೇಲಿಯಾದ ಜನ.. ಹೀಗೆ ಮಾಡೋದಾ?

ಮೆಲ್ಬರ್ನ್​ದ ಪಿಚ್​ ಬ್ಯಾಟರ್​ಗಳಿಗೆ ಶ್ಲೋವರ್ ಸೈಡ್ ಆಗಿ ಅನುಕೂಲವಾಗಲಿದೆ ಎಂದು ಹೇಳಲಾಗಿತ್ತು. ಹೀಗಾಗಿ ಟಾಸ್​ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟ್​ ಮಾಡಿ ಭರ್ಜರಿ ರನ್ ಕಲೆ ಹಾಕಿತ್ತು ಆರಂಭದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಟೀಂ ಇಂಡಿಯಾ 153 ರನ್​ಗಗೆ 2 ವಿಕೆಟ್ ಕಳೆದುಕೊಂಡಿತ್ತು. ಆದ್ರೆ ಕೇವಲ 21 ಬಾಲ್​ಗಳಲ್ಲಿ ಆರು ರನ್ ಗಳಿಸಿ ಮೂರು ವಿಕೆಟ್​ ಕಳೆದುಕೊಳ್ಳುವುದರ ಮೂಲಕ 164ರನ್​ಗೆ 5 ವಿಕೆಟ್ ಒಪ್ಪಿಸಿ ದಿನದಾಟ ಮುಗಿಸಿತ್ತು, ಸದ್ಯ ರಿಶಬ್ ಪಂತ್ ಹಾಗೂ ರವೀಂದ್ರ ಜಡೇಜಾ ಸ್ಕ್ರೀಜ್ ಕಾಯ್ದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment