newsfirstkannada.com

2ನೇ ಇನ್ನಿಂಗ್ಸ್​ ಆರಂಭದಲ್ಲೇ ಆಂಗ್ಲರಿಗೆ ಅಶ್ವಿನ್​ ಗುನ್ನಾ; ಕುಲ್​​ದೀಪ್​ ಕಮಾಲ್​​.. ಇಂಗ್ಲೆಂಡ್ ಕಕ್ಕಾಬಿಕ್ಕಿ!

Share :

Published February 26, 2024 at 8:53am

    ಕ್ಲೈಮ್ಯಾಕ್ಸ್​ ಹಂತ ತಲುಪಿದ ರಾಂಚಿ ಟೆಸ್ಟ್​ ಪಂದ್ಯ

    3ನೇ ದಿನದಾಟದಲ್ಲಿ ಟೀಮ್​ ಇಂಡಿಯಾ ಕಮ್​​ಬ್ಯಾಕ್

    ಧ್ರುವ್​ ಜುರೇಲ್​ ಕೆಚ್ಚೆದೆಯ ಹೋರಾಟ, ಆಂಗ್ಲರು ಸುಸ್ತು

ಇಂಡೋ-ಇಂಗ್ಲೆಂಡ್​ ನಡುವಿನ ರಾಂಚಿ ಟೆಸ್ಟ್​ ಪಂದ್ಯ ಕ್ಲೈಮ್ಯಾಕ್ಸ್​ ಹಂತ ತಲುಪಿದೆ. 2ನೇ ದಿನದಾಟದ ಅಂತ್ಯದವರೆಗೂ ಇಂಗ್ಲೆಂಡ್​​​ ಮೇಲುಗೈ ಸಾಧಿಸಿತ್ತು ನಿಜ. 3ನೇ ದಿನದಾಟದಲ್ಲಿ ಟೀಮ್​ ಇಂಡಿಯಾ ಕಮ್​​ಬ್ಯಾಕ್​ ಮಾಡಿದ ರೀತಿಗೆ ಆಂಗ್ಲ ಪಡೆ ಬೆಚ್ಚಿ ಬಿದ್ದಿದೆ.

ರಾಂಚಿ ಟೆಸ್ಟ್​ ಫೈಟ್​ಗೆ​ ರೋಚಕ ಟ್ವಿಸ್ಟ್​ ಸಿಕ್ಕಿದೆ. 2ನೇ ದಿನದ ಅಂತ್ಯದಲ್ಲಿ ಸೋಲಿನ ಭೀತಿಗೆ ಸಿಲುಕಿದ್ದ ಟೀಮ್​ ಇಂಡಿಯಾ, 3ನೇ ದಿನದಾಟದ ಅಂತ್ಯದ ವೇಳೆಗೆ ಗೆಲುವಿಗೆ ಇನ್ನೊಂದೇ ಹೆಜ್ಜೆ ಅಂತಿದೆ. ನಿನ್ನೆಯ ದಿನದಾಟದಲ್ಲೂ ಎಲ್ಲರ ಲೆಕ್ಕಾಚಾರಗಳು ತಲೆ ಕೆಳಗಾಗಿವೆ.
7 ವಿಕೆಟ್​ ನಷ್ಟಕ್ಕೆ 219 ರನ್​ಗಳೊಂದಿಗೆ ದಿನದಾಟ ಆರಂಭಿಸಿದ ಟೀಮ್​ ಇಂಡಿಯಾ ಪರ ದೃವ್​ ಜುರೇಲ್​, ಕುಲ್​ದೀಪ್​ ಯಾದವ್​ ದಿಟ್ಟ ಹೋರಾಟ ನಡೆಸಿದ್ರು. 8ನೇ ವಿಕೆಟ್​ಗೆ 76 ರನ್​ಗಳ ಜೊತೆಯಾಟವಾಡಿದ್ರು. ಬರೋಬ್ಬರಿ 131 ಎಸೆತಗಳನ್ನ ತಾಳ್ಮೆಯಿಂದ ಎದುರಿಸಿದ ಕುಲ್​​ದೀಪ್​ ಯಾದವ್​ 28 ರನ್​ಗಳಿಸಿ ಔಟಾದ್ರು.

ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳನ್ನ ಈಸೀಯಾಗಿ ಖೆಡ್ಡಾಗೆ ಕೆಡವಿದ್ದ ಆಂಗ್ಲ ಪಡೆ ಜುರೇಲ್​ ಆಟದ ಮುಂದೆ ಸುಸ್ತು ಹೊಡೆಯಿತು. ಕ್ಲಾಸಿಕ್​ ಇನ್ನಿಂಗ್ಸ್​​ ಕಟ್ಟಿದ ಜುರೇಲ್​ ಚೊಚ್ಚಲ ಹಾಫ್​ ಸೆಂಚುರಿ ಸಿಡಿಸಿ ಆಂಗ್ಲರನ್ನ ಕಾಡಿದ್ರು. 6 ಬೌಂಡರಿ, 4 ಸಿಕ್ಸರ್​ ಸಿಡಿಸಿದ ಜುರೇಲ್​, ಶತಕದ ಅಂಚಿನಲ್ಲಿ ಎಡವಿದ್ರು. 90 ರನ್​ಗಳಿಗೆ ಜುರೇಲ್​ ಆಟ ಅಂತ್ಯವಾಯ್ತು. ಇದ್ರೊಂದಿಗೆ ಟೀಮ್​ ಇಂಡಿಯಾ 307 ರನ್​ಗಳಿಗೆ ಆಲೌಟ್​ ಆಯ್ತು.

2ನೇ ಇನ್ನಿಂಗ್ಸ್ ಆರಂಭದಲ್ಲೇ ಆಂಗ್ಲರಿಗೆ ಅಶ್ವಿನ್​ ಗುನ್ನಾ
46 ರನ್​​ಗಳ ಮುನ್ನಡೆಯೊಂದಿಗೆ ಕಣಕ್ಕಿಳಿದ ಆಂಗ್ಲರಿಗೆ ಆಫ್​ ಸ್ಪಿನ್ನರ್​​ ಅಶ್ವಿನ್​ ಆರಂಭದಲ್ಲೇ ಶಾಕ್​ ಕೊಟ್ರು. ಬೆನ್​ ಡಕೆಟ್​​, ಒಲಿ ಪೋಪ್​, ಜೋ ರೂಟ್ ಅಶ್ವಿನ್​ ಸ್ಪಿನ್​ ಮೋಡಿಗೆ ಬಲಿಯಾದರು. ​​

ಕುಲ್​​ದೀಪ್​ ಕಮಾಲ್​​.. ಇಂಗ್ಲೆಂಡ್ ಕಕ್ಕಾಬಿಕ್ಕಿ​
ಅಶ್ವಿನ್​ ಕೊಟ್ಟ ಆಘಾತದಿಂದ ಆಗಷ್ಟೇ ಇಂಗ್ಲೆಂಡ್​ ಸುಧಾರಿಸಿಕೊಳ್ತಿತ್ತು. ಅಷ್ಟರಲ್ಲೇ ಕುಲ್​ದೀಪ್​ ಯಾದವ್​ ಮತ್ತೆ ಡಬಲ್​​​ ಶಾಕ್​ ನೀಡಿದ್ರು. ಹಾಫ್​ ಸೆಂಚುರಿ ಸಿಡಿಸಿ ಬಿಗ್​ ಇನ್ನಿಂಗ್ಸ್​ ಕಟ್ಟೋ ಸೂಚನೆ ನೀಡಿದ್ದ ಜಾಕ್​ ಕ್ರಾವ್ಲಿಯನ್ನ ಕ್ಲೀನ್​ಬೋಲ್ಡ್​ ಮಾಡಿದ್ರು. ಆ ಬಳಿಕ ಕುಲ್​​ದೀಪ್​ ಎಸೆತವನ್ನ ಎದುರಿಸಲಾಗದೇ ಕಕ್ಕಾಬಿಕ್ಕಿಯಾದ ಕ್ಯಾಪ್ಟನ್​ ಬೆನ್​​ಸ್ಟೋಕ್ಸ್​ ಕೂಡ ಕ್ಲೀನ್​ಬೋಲ್ಡ್​ ಆದ್ರು. 2ನೇ ಸೆಷನ್​ ಅಂತ್ಯಕ್ಕೆ 120 ರನ್​ಗಳಿಸಿದ ಇಂಗ್ಲೆಂಡ್​ 5 ಪ್ರಮುಖ ವಿಕೆಟ್​ ಕಳೆದುಕೊಳ್ತು.

ಬೇರ್​​ ಸ್ಟೋ ಆಟಕ್ಕೆ ಜಡೇಜಾ ಫುಲ್​ ಸ್ಟಾಫ್​..!
ಟೀ ಬ್ರೇಕ್​ನ ಬಳಿಕ 3ನೇ ಸೆಷನ್​ ಆರಂಭದಲ್ಲೇ ಜಾನಿ ಬೇರ್​ಸ್ಟೋ ಆಟಕ್ಕೆ ಜಡೇಜಾ ಫುಲ್​ ಸ್ಟಾಫ್​ ಇಟ್ರು. ಇನ್ನು, ಟಾಮ್​ ಹಾರ್ಟ್ಲಿ, ಒಲಿ ರಾಬಿನ್ಸನ್​ ಕುಲ್​ದೀಪ್​ ಕೈಚಳಕಕ್ಕೆ ಬಲಿಯಾದ್ರು.

5 ವಿಕೆಟ್​ ಕಬಳಿಸಿ ಮಿಂಚಿದ ಆರ್​.ಅಶ್ವಿನ್​.!
ಆರಂಭದಲ್ಲಿ 3 ವಿಕೆಟ್​ ಕಬಳಿಸಿದ್ದ ಅಶ್ವಿನ್​, ಅಂತ್ಯದಲ್ಲಿ 2 ವಿಕೆಟ್​ ಕಬಳಿಸಿದ್ರು. ಕೀಪರ್ ಬೆನ್​ ಫೋಕ್ಸ್​​, ಜೇಮ್ಸ್​ ಆ್ಯಂಡರ್ಸನ್​ ವಿಕೆಟ್​ ಕಬಳಿಸಿ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಕಬಳಿಸಿದ​ ಸಾಧನೆ ಮಾಡಿದ್ರು. ಇದ್ರೊಂದಿಗೆ ಇಂಗ್ಲೆಂಡ್​​ 2ನೇ ಇನ್ನಿಂಗ್ಸ್​ನಲ್ಲಿ 145 ರನ್​ಗಳಿಗೆ ಆಲೌಟ್​ ಆಯ್ತು. ಸದ್ಯ 192 ರನ್​​ಗಳ ಟಾರ್ಗೆಟ್​ ಬೆನ್ನತ್ತಿರುವ ಟೀಮ್​ ಇಂಡಿಯಾ 3ನೇ ದಿನದ ಅಂತ್ಯಕ್ಕೆ ವಿಕೆಟ್​ ನಷ್ಟವಿಲ್ಲದೇ 40 ರನ್​ಗಳಿಸಿದೆ. 24 ರನ್​ಗಳೊಂದಿಗೆ ರೋಹಿತ್​ ಶರ್ಮಾ, 16 ರನ್​ಗಳೊಂದಿಗೆ ಯಶಸ್ವಿ ಜೈಸ್ವಾಲ್​ ಇಂದಿಗೆ ಕ್ರಿಸ್​ ಕಾಯ್ದುಕೊಂಡಿದ್ದಾರೆ. ಟೀಮ್​ ಇಂಡಿಯಾ ಗೆಲುವಿಗೆ 152 ರನ್​ಗಳ ಅಗತ್ಯತೆ ಇದ್ರೆ, ಇಂಗ್ಲೆಂಡ್​ ಗೆಲುವಿಗೆ 10 ವಿಕೆಟ್​ಗಳು ಬೇಕಿವೆ. ಹೀಗಾಗಿ ಇಂದಿನ ದಿನದಾಟ ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

2ನೇ ಇನ್ನಿಂಗ್ಸ್​ ಆರಂಭದಲ್ಲೇ ಆಂಗ್ಲರಿಗೆ ಅಶ್ವಿನ್​ ಗುನ್ನಾ; ಕುಲ್​​ದೀಪ್​ ಕಮಾಲ್​​.. ಇಂಗ್ಲೆಂಡ್ ಕಕ್ಕಾಬಿಕ್ಕಿ!

https://newsfirstlive.com/wp-content/uploads/2024/02/ASWIN-1.jpg

Load More