/newsfirstlive-kannada/media/post_attachments/wp-content/uploads/2025/04/PAK-NUCLEAR-PLANT.jpg)
ಅದು 1998 ರ ಸಮಯ ಭಾರತಕ್ಕೆ ಸದಾ ಮಗ್ಗಲು ಮುಳ್ಳಾಗಿರುವ ಪಾಕಿಸ್ತಾನ ತನ್ನ ಪರಮಾಣು ಪರೀಕ್ಷೆಯನ್ನು ಹೊಂದಿರುವ 7ನೇ ರಾಷ್ಟ್ರವಾಗಿ ಹೊರಹೊಮ್ಮಿತ್ತು. ಪಕ್ಕದ ಎರಡು ರಾಷ್ಟ್ರಗಳು, ಚೀನಾ ಮತ್ತು ಪಾಕಿಸ್ತಾನ ಇಬ್ಬರ ಬಳಿಯೂ ಕೂಡ ಪರಮಾಣು ಬಾಂಬ್ಗಳು ಇದ್ದವು. ಇದು ಭಾರತವನ್ನು ಆತಂಕಕ್ಕೆ ತಳ್ಳಿತ್ತು. ಕಾರಣ ಪಾಕಿಸ್ತಾನದ ಬಳಿ ಇರುವ ಪರಮಾಣು ನೇರವಾಗಿ ಗುರಿಯಿಡುವುದೇ ನವದೆಹಲಿಗೆ ಎಂಬುದು ಗೊತ್ತಿತ್ತು. 1977ರಲ್ಲಿಯೇ ಪಾಕಿಸ್ತಾನದ ಅಂದಿನ ಪ್ರಧಾನಿ ಜುಲ್ಫಿಕರ್ ಅಲಿ ಬುಟ್ಟೊ ಬಾಂಗ್ಲಾ ವಿಮೋಚನೆಯ ಯುದ್ಧದಲ್ಲಿ ಹೀನಾಯವಾಗಿ ಸೋತ ಬಳಿಕ. ಪಾಕಿಸ್ತಾನ ಹುಲ್ಲು ತಿಂದಾದರು ಬದುಕುತ್ತದೆ, ಆದ್ರೆ ನ್ಯೂಕ್ಲಿಯರ್ ಪವರ್ ಹೊಂದಿಯೇ ತೀರುತ್ತದೆ ಎಂಬ ಹೇಳಿಕೆಯನ್ನು ಕೊಟ್ಟಿದ್ದರು.
ಭಾರತ ಇದೇ ಸಮಯದಲ್ಲಿ ಅಂದ್ರೆ ಇಂದಿರಾ ಗಾಂಧಿ ಪ್ರಧಾನಿಯಾದ ಕಾಲದಲ್ಲಿ ಅಂದ್ರೆ 1977ರಲ್ಲಿ ಮೊದಲ ಬಾರಿ ಪೋಖ್ರಾನ್ನಲ್ಲಿ ಪರಮಾಣು ಪರೀಕ್ಷೆ ಮಾಡಿತ್ತು. ಅದರ ಹೆಸರು ಆಪರೇಷನ್ ಸ್ಮೈಲಿಂಗ್ ಬುದ್ಧ. ಆದರೆ ಇದರಿಂದಾಗಿ ಜಾಗತಿಕವಾಗಿ ಆರ್ಥಿಕ ನಿರ್ಬಂಧಕ್ಕೆ ಭಾರತ ಒಳಗಾಯಿತು. ಆದ್ರೆ ಯಾವಾಗ ಪಾಕಿಸ್ತಾನ ಪರಮಾಣು ಶಕ್ತಿಯನ್ನು ಹೊಂದುವುದಾಗಿ ಘೋಷಿಸಿ ಆ ನಿಟ್ಟಿನಲ್ಲಿ ಕೆಲಸ ಶುರುವಾಯ್ತೊ ಆಗ ಭಾರತದ ಜೊತೆಗೆ ಮತ್ತೊಂದು ರಾಷ್ಟ್ರವೂ ಆತಂಕಕ್ಕೆ ಬಿದ್ದಿತು.
ಆ ದೇಶದ ಹೆಸರು ಇಸ್ರೇಲ್. ಪಾಕ್ ಪರಮಾಣು ಬಾಂಬ್ ಸೃಷ್ಟಿಗೆ ಸಿದ್ಧತೆ ಆರಂಭಿಸಿದ ಸಮಯದಲ್ಲಿಯೇ ಇಸ್ರೇಲ್ ಇರಾಕ್ಗೆ ನುಗ್ಗಿ ಒಸಿರಾಕ್ನಲ್ಲಿ ಪರಮಾಣು ಬಾಂಬ್ ಸಿದ್ಧಗೊಳ್ಳುತ್ತಿದ್ದ ಕೇಂದ್ರವನ್ನು ಧ್ವಂಸಗೊಳಿಸ ಬಂದಿತ್ತು. ಯಾವಾಗ ಪಾಕಿಸ್ತಾನ ಪರಮಾಣು ಶಕ್ತಿ ಹೊಂದಿಯೇ ತೀರುತ್ತೇನೆ ಎಂದು ನಿರ್ಧಾರ ಮಾಡಿ ಅದರ ಸಿದ್ಧತೆ ಶುರು ಮಾಡಿತೊ, ಇಸ್ರೇಲ್ನಲ್ಲಿ ಸಣ್ಣದೊಂದು ನಡುಕ ಸೃಷ್ಟಿಯಾಯ್ತು. ಈ ಪರಮಾಣು ಶಕ್ತಿ ಪಾಕಿಸ್ತಾನದಿಂದ ತನ್ನ ನೆರೆಯ ಇಸ್ಲಾಂ ರಾಷ್ಟ್ರಗಳಿಗೂ ರವಾನೆಯಾಗುವ ಭೀತಿ ಅದಕ್ಕೆ ಕಾಡತೊಡಗಿತು. ಆಗ ಇಸ್ರೇಲ್ನ ಮೋಸ್ಸಾದ್ ಮತ್ತು ಭಾರತದ ರಾ ಗುಪ್ತಚರ ಇಲಾಖೆಗಳು ಸೇರಿ ಪಾಕಿಸ್ತಾನದ ನ್ಯೂಕ್ಲಿಯರ್ ಪ್ಲಾಂಟ್ನ್ನು ಇರಾಕ್ನ ಒಸಿರಾಕ್ನಲ್ಲಿ ಧ್ವಂಸಗೊಳಿಸಿದ ಮಾದರಿಯಲ್ಲಿಯೇ ಪಾಕ್ ಪರಮಾಣು ಕೇಂದ್ರವನ್ನು ಧ್ವಂಸಗೊಳಿಸಲು ಯೋಜನೆ ರೂಪಿಸಿದ್ದವು.
ಇದನ್ನೂ ಓದಿ:ಬಂದ ಲಾಭಕ್ಕೆ ಬಾಸ್ ಫುಲ್ ಖುಷ್.. ಬೆಸ್ಟ್ ಎಂಪ್ಲಾಯೀಸ್‌ಗೆ ಬಂಪರ್ ಗಿಫ್ಟ್; ಈ ಕಂಪನಿ ಯಶಸ್ಸಿನ ಗುಟ್ಟು ಇಲ್ಲಿದೆ!
ಇದು ಕೊನೆಗೆ ಪಾಕಿಸ್ತಾನದ ಗುಪ್ತಚರ ಇಲಾಖೆಗೆ ಭಾರತ ಮತ್ತು ಇಸ್ರೇಲ್ ಮಾಡಿಕೊಂಡಿರುವ ಪ್ಲ್ಯಾನ್ ಗೊತ್ತಾಯಿತು. ಜಾಮ್ ನಗರ ಏರ್ಬೇಸ್ನಿಂದ ಹೊರಡಲಿರುವ ಇಸ್ರೇಲ್ನ ಎಫ್16 ಮತ್ತು ಎಫ್-15 ಯುದ್ಧ ವಿಮಾನಗಳು ಪಾಕಿಸ್ತಾನದ ಪರಮಾಣು ಕೇಂದ್ರದ ಮೇಲೆ ದಾಳಿ ಮಾಡಲಿವೆ ಅಲರ್ಟ್ ಆಗಿರುವಂತೆ ತನ್ನ ಸೇನೆಗೆ ಸೂಚಿಸಿತು. ಪಾಕಿಸ್ತಾನಕ್ಕೆ ತನ್ನ ಪ್ಲ್ಯಾನ್ ಗೊತ್ತಾಗಿದೆ ಎನ್ನುವ ಕಾರಣದಿಂದ ಇಸ್ರೇಲ್ ಮತ್ತು ಭಾರತ ಈ ಆಪರೇಷನ್ನ್ನು ಕೈಬಿಟ್ಟಿತು ಎಂದು ಹೇಳಲಾಗುತ್ತದೆ. ಇರಾಕ್ನ ಓಸಿರಾಕ್ದ ಪರಮಾಣು ಕೇಂದ್ರವನ್ನು ಉಡಾಯಿಸಿದಂತೆ ಪಾಕಿಸ್ತಾನದ ಕಹುತಾದ ಮೇಲೆ ದಾಳಿಗೆ ಸಜ್ಜಾಗಿತ್ತಂತೆ.
ಈ ಬಗ್ಗೆ ಎಲ್ಲಿಯೂ ಕೂಡ ಅಧಿಕೃತ ಮಾಹಿತಿಗಳು ಅಥವಾ ಹೇಳಿಕೆಗಳು ಇಂದಿಗೂ ಕೂಡ ಬಂದಿಲ್ಲ. ಆದ್ರೆ ಪತ್ರಕರ್ತ ಆಡ್ರಿಯನ್ ಲೆವಿ ಇಸ್ರೇಲ್ ಒಸಿರಾಕ್ನ ಮೇಲೆ ದಾಳಿ ಮಾಡಿದ ಕೂಡಲೇ ಭಾರತದ ರಾ ಎಜೆಂಟರು ಇಸ್ರೇಲ್ನ ಮೋಸ್ಸಾದ ಕಚೇರಿಗೆ ಭೇಟಿ ನೀಡಿ ಒಂದು ಚರ್ಚೆಯನ್ನು ನಡೆಸಿದ್ದವು. ಅದು ಮಾತ್ರವಲ್ಲ ಉಭಯ ರಾಷ್ಟ್ರಗಳ ಸೇನಾಧಿಕಾರಿಗಳ ನಡುವೆಯೂ ಕೂಡ ಭೇಟಿ ಮತ್ತು ಚರ್ಚೆ ನಡೆದಿದ್ದವು ಎಂದು ಲೇಖವನ್ನು ಬರೆದಿದ್ದರು.
ಇದನ್ನೂ ಓದಿ: BREAKING; ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ K ಅಣ್ಣಮಲೈ ರಾಜೀನಾಮೆ
ಇನ್ನು 1982ರಲ್ಲಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿರುವ ಪ್ರಕಾರ ಮತ್ತು 1984ರಲ್ಲಿ ಅಮೆರಿಕಾ ಎಬಿಸಿ ನ್ಯೂಸ್ ವರದಿಯ ಪ್ರಕಾರ. ಭಾರತ ಮತ್ತು ಇಸ್ರೇಲ್ ಎರಡು ಸೇರಿ ಪಾಕಿಸ್ತಾನದ ನ್ಯೂಕ್ಲಿಯರ್ ಪ್ಲಾಂಟ್ ಫೆಸಿಲಿಟಿಸ್ ಮೇಲೆ ದಾಳಿ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದವು ಎಂದು ವರದಿಯನ್ನು ಮಾಡಿವೆ. ಈ ವರದಿಗಳು ಹಾಗೂ ಪಾಕಿಸ್ತಾನದ ಗುಪ್ತಚರ ಇಲಾಖೆಗೆ ತಿಳಿದ ಇಂಡಿಯಾ ಇಸ್ರೇಲ್ ಪ್ಲ್ಯಾನ್ ಇವೆಲ್ಲವುದರಿಂದಾಗಿ ಉಭಯ ರಾಷ್ಟ್ರಗಳು ಮಾಡಿಕೊಂಡಿದ್ದ ಆಪರೇಷನ್ ಅರ್ಧಕ್ಕೆ ಕೈಬಿಡಲಾಯಿತು ಎಂದು ಹೇಳಲಾಗುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ