/newsfirstlive-kannada/media/post_attachments/wp-content/uploads/2025/05/INDVSPAK_3.jpg)
ಭಾರತ ಹಾಗೂ ಪಾಕಿಸ್ತಾನದ ನಡುವಿನ ಘರ್ಷಣೆ ತೀವ್ರಗೊಂಡು ಡ್ರೋಣ್, ಕ್ಷಿಪಣಿಗಳನ್ನು ಬಳಸಲಾಗಿತ್ತು. ದಾಳಿಯಿಂದ ಪಾಕಿಸ್ತಾನ ನಮಗೆ ಏನೂ ಹಾಗಿಲ್ಲವೆಂದು ಹೇಳಿತ್ತು. ಆದರೆ ಈ ಘರ್ಷಣೆಯಲ್ಲಿ ಭಾರತವೇ ಮೇಲುಗೈ ಸಾಧಿಸಿದೆ ಎಂದು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ವಿಸ್ತೃತವಾದ ವರದಿ ಪ್ರಕಟಿಸಿದೆ.
ಭಾರತದ ದಾಳಿಯಿಂದ ಪಾಕಿಸ್ತಾನದ ಧ್ವಂಸವಾಗಿದೆ ಎಂದು ಅಮೆರಿಕದ ಸ್ಪೇಸ್ ಟೆಕ್ನಾಲಜಿ ಸಂಸ್ಥೆ ಮ್ಯಾಕ್ಸಾರ್ನಿಂದ ಇಮೇಜ್ ಬಿಡುಗಡೆ ಮಾಡಲಾಗಿದೆ. ಈ ಫೋಟೋಗಳು (ಹೈ-ರೆಸಲ್ಯೂಷನ್) ದಾಳಿಗೆ ಮೊದಲು ಹಾಗೂ ದಾಳಿಯ ನಂತರ ಹೇಗಿದೆ ಎಂಬುದನ್ನು ಮನದಟ್ಟು ಮಾಡಿವೆ. ಇದರಿಂದ ಭಾರತದ ದಾಳಿಗೆ ಪಾಕಿಸ್ತಾನ ವಾಯು ನೆಲೆಗಳು ಅಕ್ಷರಶಃ ನಲುಗಿ ಹೋಗಿರುವುದು ಗೊತ್ತಾಗಿದೆ.
ಅಮೆರಿಕದ ಸ್ಪೇಸ್ ಟೆಕ್ನಾಲಜಿ ಸಂಸ್ಥೆ ಮ್ಯಾಕ್ಸಾರ್ನಿಂದ ಇಮೇಜ್ ರಿಲೀಸ್ ಮಾಡಲಾಗಿದೆ. ಇದನ್ನ ಆಧರಿಸಿ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ವಿಸ್ತೃತವಾದ ವರದಿ ಪ್ರಕಟಿಸಿದೆ. ಭಾರತ, ಪಾಕಿಸ್ತಾನದ ಎಷ್ಟು ಭೀಕರ ಪ್ರಹಾರ ನಡೆಸಿದೆ ಅನ್ನೋದು ಈ ವರದಿಯಿಂದ ತಿಳಿದು ಬರುತ್ತದೆ. ಈ ದಾಳಿಯಲ್ಲಿ ಭಾರತ ಮೇಲುಗೈ ಸಾಧಿಸಿದೆ ಅಂತ ವರದಿ ಹೇಳುತ್ತದೆ.
ಇದನ್ನೂ ಓದಿ:ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್.. 150ಕ್ಕೂ ಹೆಚ್ಚು ಲೋಕಾಯುಕ್ತ ಸಿಬ್ಬಂದಿಯಿಂದ 40 ಕಡೆ ರೇಡ್
ಪಾಕಿಸ್ತಾನದ ವಿರುದ್ಧ ಭಾರತದ ದಾಳಿ ನಿಖರ ಮತ್ತು ಸ್ಪಷ್ಟ ಗುರಿ ಮುಟ್ಟಿವೆ. ಕರಾಚಿ ಬಳಿ ಇರುವ ಭೊಲಾರಿ ಏರ್ಬೇಸ್, ಚಕ್ಲಾಲಾದ ನೂರ್ ಖಾನ್ ಏರ್ಬೇಸ್, ರಹೀಮ್ ಯಾರ್ ಖಾನ್ ಏರ್ಬೇಸ್, ಜಕೋಬಾಬಾದ್ ಏರ್ ಬೇಸ್ನ ದೃಶ್ಯಗಳು ಲಭ್ಯವಾಗಿವೆ. 4 ಏರ್ಬೇಸ್ಗಳ ಸ್ಯಾಟಲೈಟ್ ಇಮೇಜ್ಗಳನ್ನು ಮ್ಯಾಕ್ಸಾರ್ ಬಿಡುಗಡೆ ಮಾಡಿದ್ದು ಎಲ್ಲ ನಾಶವಾಗಿವೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ