/newsfirstlive-kannada/media/post_attachments/wp-content/uploads/2025/04/Pakistan-Dry-Fruits.jpg)
ಇಂಡಿಯಾ ಮತ್ತು ಪಾಕ್ ಮಧ್ಯೆ ಗಡಿ ಬಂದ್ ಆಗಿದೆ. ಎರಡು ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಇತ್ತ ಭಾರತದಿಂದ ಪಾಕಿಸ್ತಾನಕ್ಕೆ ತರಕಾರಿಗಳ ರಫ್ತು ಬಂದ್ ಆಗಿದ್ರೆ, ಅತ್ತ ಪಾಕಿಸ್ತಾನದಿಂದ ಭಾರತಕ್ಕೆ ಡ್ರೈಫ್ರೂಟ್ಸ್ ಎಕ್ಸ್ಪೋರ್ಟ್ ಸ್ಥಗಿತವಾಗಿದೆ. ಇದರ ಎಫೆಕ್ಟ್ ಎರಡು ದೇಶದ ಗ್ರಾಹಕರಿಗೆ ತಟ್ಟಿದೆ. ಈ ಮಧ್ಯೆ ಎರಡು ದೇಶಗಳ ನಡುವೆ ತರಕಾರಿ ಡ್ರೈಫ್ರೂಟ್ಸ್ ಸರಬರಾಜು ಸ್ಥಗಿತದ ಯುದ್ಧ ಶುರುವಾಗಿದೆ.
ಇದನ್ನೂ ಓದಿ:ಪಾಕಿಸ್ತಾನದಲ್ಲಿ ಸುದ್ದಿಯಾದ ಸಿಎಂ ಸಿದ್ದರಾಮಯ್ಯ; ವಿಡಿಯೋ ವೈರಲ್ ಆದ ಮೇಲೆ ಏನಂದ್ರು?
ಪ್ರವಾಸಿಗರ ನರಮೇಧದ ಬೆನ್ನಲ್ಲೇ ಭಾರತ ಪಾಕ್ ಗಡಿ ಬಂದ್ ಮಾಡಿದೆ. ಈ ಹಿನ್ನೆಲೆ, ಭಾರತದಿಂದ ಪಾಕ್ಗೆ ರಫ್ತು ಮಾಡಲಾಗ್ತಿದ್ದ ತರಕಾರಿಗಳನ್ನು ಸ್ಥಗಿತ ಮಾಡಲಾಗಿದೆ. ಭಾರತದಿಂದ ಶೇಖಡ 55 ರಷ್ಟು ತರಕಾರಿಯನ್ನ ಪಾಕಿಸ್ತಾನ ರಫ್ತು ಮಾಡಿಕೊಳ್ತಿತ್ತು. ದೇಶದ ವಿವಿಧ ರಾಜ್ಯಗಳಿಂದ ವಿವಿಧ ತರಕಾರಿಯನ್ನ ಪಾಕಿಸ್ತಾನಕ್ಕೆ ರಫ್ತು ಮಾಡಲಾಗ್ತಿತ್ತು. ಕರ್ನಾಟಕ ರಾಜ್ಯದಿಂದಲೂ ಪಾಕಿಸ್ತಾನಕ್ಕೆ ತರಕಾರಿ ಸರಬರಾಜು ಮಾಡಲಾಗ್ತಿತ್ತು. ಸದ್ಯ ರಾಜ್ಯದ ಎಲ್ಲಾ APMCಗಳಿಂದಲೂ ತರಕಾರಿ ರಫ್ತು ಬಂದ್ ಮಾಡಲಾಗಿದೆ. ಪ್ರತಿ ತಿಂಗಳು ಪಾಕ್ ಜೊತೆ ಅಂದಾಜು 600 ಕೋಟಿ ವ್ಯವಹಾರ ನಡೆಸಲಾಗ್ತಿತ್ತು. ಇದ್ರಿಂದಾಗಿ ಪಾಕಿಸ್ತಾನದಲ್ಲಿ ತರಕಾರಿಗೂ ಹಾಹಾಕಾರ ಶುರುವಾಗೋ ಲಕ್ಷಣ ಕಾಣ್ತಿದೆ.
ಮತ್ತೊಂದೆಡೆ ಪಾಕ್ನಿಂದ ಭಾರತಕ್ಕೆ ಬರ್ತಿದ್ದ ಫ್ರೂಟ್ಸ್ ಸರಬರಾಜು ಸ್ಥಗಿತವಾಗಿದೆ. ಬೆಂಗಳೂರಿನ ಶಿವಾಜಿನಗರ ರಸೆಲ್ ಮಾರ್ಕೆಟ್ಗೆ ಡ್ರೈ ಫ್ರೂಟ್ಸ್ ಆಮದಾಗ್ತಿತ್ತು. ಆದ್ರೀಗ ಸರಬರಾಜು ಸ್ಥಗಿತವಾಗಿದೆ. ಇದ್ರಿಂದಾಗಿ ಬೆಲೆಯೂ ಗಗನಕ್ಕೇರಿದ್ದು, ವ್ಯಾಪಾರ ಡಲ್ ಆಗಿದೆ. ಪಾಕಿಸ್ತಾನದಿಂದ ವಾರಕ್ಕೊಮ್ಮೆ ಮಾರ್ಕೆಟ್ಗೆ ಡ್ರೈ ಫ್ರೂಟ್ಸ್ ಬರ್ತಿತ್ತು. ಅಂಜೂರ, ರೋಜಾ ಗುಲ್ಕನ್, ಮಾಮ್ರಾ ಬಾದಾಮ್, ವಾಲ್ನಟ್, ಕೇಸರಿ, ಆಪ್ರಿಕಾಟ್, ಆಪ್ರಿಕಾಟ್, ಶುಗರ್ ಆಲ್ಮಂಡ್, ಬೆಳ್ಳುಳ್ಳಿ, ಜೇನು ತುಪ್ಪ ರಾಜ್ಯಕ್ಕೆ ಸರಬರಾಜಾಗ್ತಿತ್ತು.
ಉಗ್ರರ ದಾಳಿ ಬೆನ್ನಲ್ಲೆ ರಾಜ್ಯಕ್ಕೆ ಬರ್ತಿದ್ದ ಡ್ರೈ ಫ್ರೂಟ್ಸ್ ಸ್ಥಗಿತವಾಗಿದ್ದು, ಅಂಗಡಿ ಮಾಲೀಕರು ಡ್ರೈ ಫ್ರೂಟ್ಸ್ ಬಾರದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೆಜಿಗೆ 1200 ರೂಪಾಯಿ ಇದ್ದ ಬಾದಾಮಿ, ವಾಲ್ನಟ್ 2200 ರೂಪಾಯಿಗೆ ಏರಿಕೆಯಾಗಿದೆ. ಡ್ರೈ ಫ್ರೂಟ್ಸ್ ಬಾರದ ಪರಿಣಾಮ ದರ ಮತ್ತಷ್ಟು ಏರಿಕೆಯಾಗೋ ಸಾಧ್ಯತೆಯೂ ಇದೆ. ಒಂದ್ಕಡೆ ಪಾಕಿಸ್ತಾನಕ್ಕೆ ತರಕಾರಿ ಹೋಗ್ತಿಲ್ಲ, ಮತ್ತೊಂದ್ಕಡೆ ದೇಶಕ್ಕೆ ಪಾಕ್ನಿಂದ ಡ್ರೈಫ್ರೂಟ್ಸ್ ಬರ್ತಿಲ್ಲ. ಇದು ವ್ಯಾಪಾರಸ್ಥರ, ಗ್ರಾಹಕರ ಮೇಲೆ ಪರಿಣಾಮ ಬೀರುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ