/newsfirstlive-kannada/media/post_attachments/wp-content/uploads/2024/04/VIRAT_ROHIT.jpg)
ಟಿ20 ವಿಶ್ವಕಪ್ ತಂಡ ಪ್ರಕಟಣೆಗೆ ಕ್ಷಣಗಣನೆ ಶುರುವಾಗಿದೆ. ಬಿಗ್​​ಬಾಸ್​ಗಳು ಫುಲ್ ಆಕ್ಟೀವ್ ಆಗಿದ್ದಾರೆ. ಕ್ಯಾಪ್ಟನ್ ರೋಹಿತ್​ ಶರ್ಮಾ ಹಾಗೂ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಒಂದು ಟಾಸ್ಕ್​ ಕೊಟ್ಟಿದ್ದಾರೆ. ಅಷ್ಟಕ್ಕೂ ಬಿಸಿಸಿಐ ಇಬ್ಬರು ದಿಗ್ಗಜರಿಗೆ ಕೊಟ್ಟ ಟಾಸ್ಕ್​​​​ ಆದರೂ ಏನು?.
2024ರ ಟಿ20 ವಿಶ್ವಕಪ್​ ಮಹಾಸಂಗ್ರಾಮಕ್ಕೆ ಹೆಚ್ಚೇನು ದಿನ ಬಾಕಿ ಉಳಿದಿಲ್ಲ. ಐಪಿಎಲ್​​​​​​​ ಮುಗಿದ ಬೆನ್ನಲ್ಲೆ ವಿಶ್ವಕಪ್ ಮಹಾತ್ರೆ ಆರಂಭಗೊಳ್ಳಲಿದೆ. ಐಸಿಸಿ ತಂಡ ಪ್ರಕಟಣೆಗೆ ಈಗಾಗ್ಲೇ ಡೆಡ್​​​ಲೈನ್ ನೀಡಿದೆ. ಮೇ 1 ರ ಒಳಗೆ ಎಲ್ಲ ದೇಶಗಳು ಟೀಮ್ ಫೈನಲ್​ ಮಾಡಬೇಕಿದೆ. ಈ ವಾರಾಂತ್ಯದಲ್ಲಿ ಬಿಸಿಸಿಐ, ಟೀಮ್ ಇಂಡಿಯಾವನ್ನ ಪ್ರಕಟಿಸಲಿದ್ದು ಯಾರೆಲ್ಲ ಆಟಗಾರರು ವೆಸ್ಟ್​ ಇಂಡೀಸ್ ಹಾಗೂ ಅಮೆರಿಕಗೆ ಫ್ಲೈಟ್ ಏರಲಿದ್ದಾರೆ ಅನ್ನೋ ಕುತೂಹಲ ಮನೆಮಾಡಿದೆ.
ಇದನ್ನೂ ಓದಿ: ಜನಪ್ರಿಯ ಬಿರಿಯಾನಿ ಹೌಸ್ ಹೋಟೆಲ್​​ಗೆ ಬೆಂಕಿ.. ಮಾಲೀಕನಿಗೆ ಲಕ್ಷ, ಲಕ್ಷ ರೂಪಾಯಿ ನಷ್ಟ
/newsfirstlive-kannada/media/post_attachments/wp-content/uploads/2024/03/ROHIT_KOHLI_TEAM.jpg)
ಹಾಲಿ-ಮಾಜಿ ಕ್ಯಾಪ್ಟನ್ಸ್​ಗೆ ಕೊಟ್ಟ ಸಂದೇಶ ಏನು..?
ದೇಶದಲ್ಲಿ ಸದ್ಯಕ್ಕಂತೂ ಟಿ20 ವಿಶ್ವಕಪ್​​ಗೆ ಭಾರತ ತಂಡದ ಆಯ್ಕೆಯ ವಿಚಾರ ಹಾಟ್​​ ಟಾಪಿಕ್​ ಆಗಿದೆ. ಕ್ರಿಕೆಟ್ ವಲಯದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರೋವಾಗ್ಲೆ ಬಿಸಿಸಿಐ ಹಾಲಿ ಕ್ಯಾಪ್ಟನ್ ರೋಹಿತ್​ ಶರ್ಮಾ ಹಾಗೂ ಮಾಜಿ ಕ್ಯಾಪ್ಟನ್​ ಕಿಂಗ್ ಕೊಹ್ಲಿಗೆ ಸ್ಟ್ರಾಂಗ್ ಮೆಸೇಜ್ ರವಾನಿಸಿದೆ. ತಂಡ ಪ್ರಕಟಣೆಗೂ ಮುನ್ನ ಕ್ಯಾಪ್ಟನ್ ರೋಹಿತ್​ ಶರ್ಮಾ, ಹೆಡ್​ಕೋಚ್​ ರಾಹುಲ್​​​​ ದ್ರಾವಿಡ್ ಹಾಗೂ ಚೀಫ್​ ಸೆಲೆಕ್ಟರ್ ಅಜಿತ್ ಅಗರ್ಕರ್​​​ ಸಭೆ ನಡೆಸಿದ್ದು, ಕೊಹ್ಲಿ ಹಾಗೂ ರೋಹಿತ್​​​​ಗೆ ಜವಾಬ್ದಾರಿಯುತ ಟಾಸ್ಕ್​ ನೀಡಿದ್ದಾರೆ. ಆ ಟಾಸ್ಕ್​ ಏನು?.
ರೋಹಿತ್​​-ಕೊಹ್ಲಿಗೆ ಕೊಟ್ಟ ಸಂದೇಶ ಏನು..?
- ಇಬ್ಬರು ಅಹಂ ದೂರವಿರಿಸಿ ತಂಡದ ಒಳಗೆ ಚಿಂತಿಸಿ
- ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಒತ್ತು ನೀಡಬೇಡಿ
- ಭಿನ್ನಾಭಿಪ್ರಾಯಕ್ಕೆ ಮರೆತು ಒಗ್ಗಟ್ಟಾಗಿ ಆಡಿ
- ಸ್ಟಾರ್​​ಗಿರಿ ತಲೆಗೆ ಹಚ್ಚಿಸಿಕೊಳ್ಳುವುದು ಬೇಡ
- ನಿಮ್ಮ ಗುರಿ ಏನಿದ್ರೂ ವಿಶ್ವಕಪ್ ಗೆಲ್ಲಿಸುವುದು
- ಚೆನ್ನಾಗಿ ಆಡಿ ಯುವ ಆಟಗಾರರಿಗೆ ಮಾದರಿ ಆಗಿ
- ನಿಮ್ಮ ಅನುಭವ ಎಲ್ಲರ ಜೊತೆ ಹಂಚಿಕೊಳ್ಳಿ
- ಉತ್ತಮ ಡ್ರೆಸ್ಸಿಂಗ್​ರೂಮ್ ವಾತಾವರಣಕ್ಕೆ ಸಹಕರಿಸಿ
- ತಾಳ್ಮೆಯಿಂದ ವರ್ತಿಸಿ ಎಲ್ಲರನ್ನ ಹುರಿದುಂಬಿಸಿ
ಬಿಸಿಸಿಐ ಜೋಡೆತ್ತಿಗೆ ಟಾಸ್ಕ್​ ನೀಡಿದ್ದೇಕೆ..?
ಮುಂಬರೋ ಟಿ20 ವಿಶ್ವಕಪ್​​ ಅನ್ನ ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿನೇ ಕಿಂಗ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ವಿಶ್ವಕಪ್​ ಗೆಲ್ಲಿಸಿಸುವ ದೊಡ್ಡ ಟಾಸ್ಕ್​ ನೀಡಿದೆ. ಉಳಿದ ಎಲ್ಲ ಆಟಗಾರನ್ನ ಬಿಟ್ಟು, ಇವರಿಬ್ಬರಿಗೆ ಸಂದೇಶ ನೀಡಲು ಪ್ರಮುಖ ಕಾರಣವಿದೆ. ಅದೇನಂದ್ರೆ ವಿರಾಟ್​​ ಹಾಗೂ ರೋಹಿತ್​ ಇಬ್ಬರೂ ದಿಗ್ಗಜ ಆಟಗಾರರು. ಅನೇಕ ಐಸಿಸಿ ಟೂರ್ನಿಗಳಲ್ಲಿ ಆಡಿದ ಅನುಭವವಿದೆ. ಜೊತೆಗೆ ಇಬ್ಬರು ತಂಡವನ್ನ ಮುನ್ನಡೆಸಿದ್ದಾರೆ ಕೂಡ. ಇವರಿಬ್ಬರು ಮನಸ್ಸು ಮಾಡಿದ್ರೆ ತಂಡ ವಿಶ್ವಕಪ್ ಗೆಲ್ಲಿಸಿ ಕೊಡುವುದು ದೊಡ್ಡ ವಿಷ್ಯವಲ್ಲ.
/newsfirstlive-kannada/media/post_attachments/wp-content/uploads/2024/03/ROHIT_KOHLI.jpg)
ಒನ್ಡೆ &T20 ವಿಶ್ವಕಪ್​ನಲ್ಲಿ ವೈಮನಸ್ಸು ದೂರ
ಕ್ಯಾಪ್ಟನ್ಸಿ ಹಾಗೂ ವೈಯಕ್ತಿಕ ವಿಚಾರವಾಗಿ ಅನೇಕ ವರ್ಷಗಳಿಂದ ರೋಹಿತ್​​-ಕೊಹ್ಲಿ ನಡುವೆ ಭಿನ್ನಾಭಿಪ್ರಾಯ ತಲೆದೂರಿತ್ತು. ಇದರಿಂದ ತಂಡದ ವಾತಾವರಣವು ಕೆಟ್ಟಿತ್ತು. ಆದರೆ 2022ರ ಟಿ20 ಹಾಗೂ 2023ರ ಒನ್ಡೆ ವಿಶ್ವಕಪ್​ನಲ್ಲಿ ಇಬ್ಬರು ವೈಮನಸ್ಸು ಮರೆತು ಆಡಿದ್ರು. ರೋಹಿತ್ ಕೊಹ್ಲಿಯನ್ನ ಹೆಗಲ ಮೇಲೆ ಹೊತ್ತುಕೊಂಡು ಭಿನ್ನಾಭಿಪ್ರಾಯಕ್ಕೆ ತಿಲಾಂಜಲಿ ಆಡಿದ್ರು. ಪರಿಣಾಮ ಟಿ20 ವಿಶ್ವಕಪ್​​​​​ನಲ್ಲಿ ಸೆಮಿಫೈನಲ್ ಹಾಗೂ ಏಕದಿನ ವಿಶ್ವಕಪ್ ಸಂಗ್ರಾಮದಲ್ಲಿ ಫೈನಲ್​​ಗೇರಿದ ಸಾಧನೆ ಮಾಡಿತ್ತು.
ಇದನ್ನೂ ಓದಿ: ಸಿಗರೇಟ್ ಕೊಟ್ಟಿಲ್ಲವೆಂದು ಹಲ್ಲೆ.. ಚಾಕು ಇರಿದು ಇಬ್ಬರು ಯುವಕರ ಕೊಂದ ಪಾಪಿಗಳು
ಇದನ್ನ ಮನಗಂಡಿರೋ ಬಿಸಿಸಿಐ ಟಿ20 ವಿಶ್ವಕಪ್​​ಗೆ ತಂಡ ಪ್ರಕಟಣೆಗೂ ಮುನ್ನವೇ ರೋಹಿತ್​​ ಹಾಗೂ ಕೊಹ್ಲಿಗೆ ಟ್ರೋಫಿ ಗೆಲ್ಲಿಸುವ ಬಿಗ್ ಟಾಸ್ಕ್ ನೀಡಿದೆ. ಬಿಗ್​​ ಬಾಸ್​ಗಳ ಈ ಪ್ಲಾನ್ ವಿಶ್ವಕಪ್ ರಣರಂಗದಲ್ಲಿ ​​​​​ ವರ್ಕ್​ ಆಗುತ್ತಾ ? ಇಲ್ವಾ ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us