ಗೆಲುವಿಗಾಗಿ ಕೀಳು ಮಟ್ಟಕ್ಕೆ ಇಳಿದ ಆಸ್ಟ್ರೇಲಿಯಾ.. ಅಡ್ಡದಾರಿ ಹಿಡಿದು ಬೆತ್ತಲಾದ ಕಾಂಗರೂ..!

author-image
Ganesh
Updated On
ಗೆಲುವಿಗಾಗಿ ಕೀಳು ಮಟ್ಟಕ್ಕೆ ಇಳಿದ ಆಸ್ಟ್ರೇಲಿಯಾ.. ಅಡ್ಡದಾರಿ ಹಿಡಿದು ಬೆತ್ತಲಾದ ಕಾಂಗರೂ..!
Advertisment
  • ಮೆಲ್ಬರ್ನ್ ಟೆಸ್ಟ್​ ಗೆಲ್ಲಲು ಆಸ್ಟ್ರೇಲಿಯಾ ಅಡ್ಡದಾರಿ..?
  • ಪ್ರಾಕ್ಟೀಸ್ ಪಿಚ್ ವಿಚಾರದಲ್ಲಿ ಆಸ್ಟ್ರೇಲಿಯಾ ಕಳ್ಳಾಟ
  • ಟೀಮ್ ಇಂಡಿಯಾ ಅಭ್ಯಾಸಕ್ಕೆ ‘ನಾಲಯಕ್’ ಪಿಚ್..!

ಗೆಲುವು! ಆಸ್ಟ್ರೇಲಿಯನ್ಸ್​ನ ಒನ್​ ಅಂಡ್ ಒನ್ಲಿ ಅಜೆಂಡಾ. ಇದಕ್ಕಾಗಿ ಆಸ್ಟ್ರೇಲಿಯನ್ಸ್​ ಏನಾನ್ನಾದರೂ ಮಾಡ್ತಾರೆ ಅನ್ನೋದು ಹಲವು ಬಾರಿ ಫ್ರೂವ್ ಆಗಿದೆ. ಇದೀಗ ಮೆಲ್ಬರ್ನ್​ನಲ್ಲಿ ಭಾರತದ ವಿರುದ್ಧ ವಿಕ್ಟರಿ ಸಾಧಿಸುವ ಕನಸು ಕಾಣ್ತಿರುವ ಕಾಂಗರೂ ಪಡೆ ಮತ್ತೆ ಅಡ್ಡದಾರಿ ಹಿಡಿದಿದೆ. ಅಡ್ಡದಾರಿ ಹಿಡಿದು ಬೆತ್ತಲಾಗಿದೆ.

ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಮೆಲ್ಬರ್ನ್​ನಲ್ಲಿ ಬೀಡು ಬಿಟ್ಟಿರುವ ಉಭಯ ತಂಡಗಳು, ಅಭ್ಯಾಸದ ಅಖಾಡದಲ್ಲಿ ಬೆವರಿಳಿಸುತ್ತಿದ್ದಾರೆ. ಗೆಲುವೊಂದೇ ಗುರಿ ಎಂಬ ಮಂತ್ರದೊಂದಿಗೆ ತೆರೆ ಹಿಂದೆ ನಾನಾ ತಂತ್ರಗಳನ್ನೇ ಅನುಸರಿಸ್ತಿವೆ. ಆಸ್ಟ್ರೇಲಿಯಾ ಮಾತ್ರ ಗೆಲುವಿಗಾಗಿ ಬೇರೆಯದ್ದೇ ದಾರಿಯ ಮೊರೆ ಹೋಗಿದೆ.

ಇದನ್ನೂ ಓದಿ:ಬಿಗ್​ಬಾಸ್​ ಮನೆಯಲ್ಲಿ ಚೈತ್ರಾ ಹೊಸ ವರಸೆ.. ನ್ಯಾಯಕ್ಕಾಗಿ ಕೂತಾಗ ಪ್ರಸಾದ ಕೊಟ್ಟ ದೇವರು..!

ಮೆಲ್ಬರ್ನ್ ಟೆಸ್ಟ್​ ಗೆಲ್ಲಲು ಆಸ್ಟ್ರೇಲಿಯಾ ಅಡ್ಡದಾರಿ
ಹೌದು! ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಶತಯ ಗತಾಯ ಗೆಲ್ಲಬೇಕೆಂಬ ಹಠದಲ್ಲಿರುವ ಆಸ್ಟ್ರೇಲಿಯಾ, ಸಕಲ ಸಿದ್ದತೆ ನಡೆಸ್ತಿದೆ. ಏನಾದರೂ ಮಾಡಿ ಟೀಮ್ ಇಂಡಿಯಾವನ್ನು ಸೋಲಿಸಬೇಕೆಂಬ ಹಠದಲ್ಲಿದೆ. ಮ್ಯಾಚ್ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾವನ್ನು ಖೆಡ್ಡಾಗೆ ಕೆಡವಲು ಕುತಂತ್ರಿ ಬುದ್ಧಿ ತೋರಿಸಿದೆ. ಎಲ್ಲಾ ಟೀಮ್​​ಗಳು ಗೇಮ್​ನಲ್ಲಿ ಆಟವಾಡಿ ಗೆಲ್ಲೋಕೆ ನೋಡಿದ್ರೆ, ಈ ಕಾಂಗರೂಗಳು ಪ್ರ್ಯಾಕ್ಟೀಸ್ ಪಿಚ್​ನಲ್ಲೇ ಆಟವಲ್ಲ. ಕಳ್ಳಾಟ ಶುರು ಮಾಡಿದ್ದಾರೆ.

‘ನಾಲಾಯಕ್’ ಪಿಚ್..!
ಬಳಸಿದ ಬೀಸಾಕಿರುವ ಕಳಪೆ ಪಿಚ್​ನಲ್ಲೇ ಟೀಮ್ ಇಂಡಿಯಾಗೆ ಅಭ್ಯಾಸ ಮಾಡಲು ಆಸ್ಟ್ರೇಲಿಯಾ ನೀಡಿದೆ. ಟೀಮ್ ಇಂಡಿಯಾ ಅಭ್ಯಾಸಕ್ಕೆ ನೀಡಿರೋ ಈ ಪಿಚ್​ನಲ್ಲಿ ಪೇಸ್​, ಬೌನ್ಸ್ ಅನ್ನೋ ಅಂಶವೇ ಇಲ್ಲ. ಅಕ್ಷರಶಃ ಡೆಡ್​ ಪಿಚ್​ ಇದು. ಅಸಲಿ ಮ್ಯಾಚ್​​ನಲ್ಲಿ ಬಿರುಗಾಳಿಯಂತೆ ಬಂದ್ರೆ, ಭಾರತದ ಅಭ್ಯಾಸಕ್ಕೆ ನೀಡಿರೋ ಪಿಚ್​ನಲ್ಲಿ ಬಾಲ್ ಲೋ ಲೆವೆಲ್​​ನಲ್ಲೇ ಬ್ಯಾಟ್​ಗೆ ಬರ್ತಿತ್ತು. ಶಾರ್ಟ್ ಬಾಲ್​​​​ ಸಹ ಸೊಂಟಕ್ಕಿಂತ ಮೇಲೆ ಪುಟಿಯುತ್ತಿರಲಿಲ್ಲ. ಪಿಚ್​ನಲ್ಲಿನ ಬೌನ್ಸ್ ಅರ್ಥ ಮಾಡಿಕೊಳ್ಳಲು ಪರದಾಡಿದ ರೋಹಿತ್, ಕೆ.ಎಲ್.ರಾಹುಲ್​ ಇಂಜುರಿಗೆ ತುತ್ತಾಗಿದ್ದಾರೆ.

ಇದನ್ನೂ ಓದಿ:ಪುಷ್ಪ2 ರಿಲೀಸ್​ ಆದ್ಮೇಲೆ ಅಲ್ಲು ಅರ್ಜುನ್​ಗೆ ಸಂಕಷ್ಟ.. ಪೊಲೀಸರ ಮುಂದಿನ ತಯಾರಿ ಏನ್ ಗೊತ್ತಾ?

ಆಸ್ಟ್ರೇಲಿಯಾ ತಂಡ ಮಾತ್ರ ಲಕಲಕ ಹೊಳೆಯೋ ಪಿಚ್​ನಲ್ಲಿ ಅಭ್ಯಾಸ ನಡೆಸ್ತಿದ್ದಾರೆ. ಗ್ರೀನ್​ ಗ್ರಾಸ್​, ಪೇಸ್​ ಮತ್ತು ಬೌನ್ಸ್​ ಎಲ್ಲವೂ ಇತ್ತು. ಪಂದ್ಯವೊಂದಕ್ಕೆ ಸಿದ್ಧಪಡಿಸಿದ ಪಿಚ್​ಗಿಂತ ಏನು ಕಮ್ಮಿಯಿಲ್ಲ. ಇದ್ರ ನಡುವೆ ಆಗಾಗ ಎಂಸಿಜಿ ಕ್ಯುರೇಟರ್​ಗಳು ರೋಲರ್ ಓಡಿಸಿ ಕೂಡ ಆಸ್ಟ್ರೇಲಿಯಾ ಬ್ಯಾಟರ್​ಗಳ ಅಭ್ಯಾಸಕ್ಕೆ ಅನುಕೂಲ ಮಾಡಿದ್ರು.

ಕ್ರಿಕೆಟ್ ಆಸ್ಟ್ರೇಲಿಯಾದ ಈ ತಾರತಮ್ಯ ನೀತಿಗೆ ಭಾರೀ ಆಕ್ರೋಶವೇ ವ್ಯಕ್ತವಾಗಿದೆ. ಅಷ್ಟೇ ಅಲ್ಲ. ವಿವಾದಕ್ಕೂ ಎಡೆ ಮಾಡಿಕೊಟ್ಟಿದೆ. ಪ್ರವಾಸಿ ತಂಡಕ್ಕೊಂದು ನ್ಯಾಯ? ಹೋಮ್​ ಟೀಮ್​ಗೊಂದು ನ್ಯಾಯ? ಅಂದ್ರೆ ಹೇಗೆ ಹೇಳಿ? ಇದಕ್ಕೂ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್​ನ ಪಿಚ್ ಕ್ಯುರೇಟರ್ ಮ್ಯಾಟ್ ಪೇಜ್, ತಮ್ಮದೇ ಆದ ಸ್ಪಷ್ಟನೆ ನೀಡಿದ್ದಾರೆ.

ನಮ್ಮ ನಿಯಮದ ಪ್ರಕಾರ ಪಂದ್ಯ ಶುರುವಾಗುವ 3 ದಿನ ಮುಂಚಿತವಾಗಿ ಹೊಸ ಪಿಚ್ ನೀಡುವ ಕ್ರಮವಿದೆ. ನಮಗೆ ಟೀಮ್ ಇಂಡಿಯಾ ಅಭ್ಯಾಸದ ವೇಳಾಪಟ್ಟಿ ಕೈಗೆ ಬಂದಿದ್ದು, ಪಂದ್ಯ ಆರಂಭಕ್ಕೂ 3 ದಿನ ಮುನ್ನ ಹೊಸ ಪಿಚ್ ನೀಡುತ್ತೇವೆ. ಈ ನಿಯಮ ಎಲ್ಲಾ ತಂಡಗಳಿಗೂ ಅನ್ವಯವಾಗುತ್ತದೆ. ಟೀಮ್ ಇಂಡಿಯಾ ಇನ್ನು ಯಾವಾಗ ನೆಟ್ಸ್​ನಲ್ಲಿ ಅಭ್ಯಾಸ ನಡೆಸಿದರೂ, ಹೊಸ ಪಿಚ್ ನೀಡಲಾಗುತ್ತದೆ-ಮ್ಯಾಟ್ ಪೇಜ್, ಪಿಚ್ ಕ್ಯುರೇಟರ್

ಭಯ ಬಿತ್ತಾ ಕಾಂಗರೂ ಪಡೆ..?

MCG ಪಿಚ್ ಕ್ಯುರೇಟರ್ ಮ್ಯಾಟ್ ಪೇಜ್, ವಿವಾದಕ್ಕೆ ತಣ್ಣೀರು ಹಾಕುವ ಕೆಲಸ ಮಾಡಿದ್ದಾರೆ. ಕಳಪೆ ಪಿಚ್​ ನೀಡಿರೋದ್ರ ಹಿಂದಿನ ಕರಾಮತ್ತು ಬೇರೆಯೇ ಇದೆ. ಮೆಲ್ಬರ್ನ್​ನಲ್ಲಿ ಟೀಮ್ ಇಂಡಿಯಾ ಉತ್ತಮ ಟ್ರ್ಯಾಕ್ ರೆಕಾರ್ಡ್​ ಹೊಂದಿದೆ. ಈ ಹಿಂದೆ ಆಡಿರುವ 3 ಟೆಸ್ಟ್​ ಪಂದ್ಯಗಳ ಪೈಕಿ ಒಂದನ್ನು ಡ್ರಾ ಮಾಡಿಕೊಂಡಿರುವ ಟೀಮ್ ಇಂಡಿಯಾ, ಮತ್ತೆರೆಡು ಪಂದ್ಯಗಳನ್ನ ಗೆದ್ದಿದೆ. ಮೆಲ್ಬರ್ನ್ ಪಿಚ್​ನಲ್ಲಿ ವಿರಾಟ್ ಕೊಹ್ಲಿ, ಜಸ್​ಪ್ರಿತ್ ಬೂಮ್ರಾರ ಟ್ರ್ಯಾಕ್ ರೆಕಾರ್ಡ್​ಗಳು ಅದ್ಭುತವಾಗಿವೆ. ಈ ಕಾರಣಕ್ಕೆ ಅಭ್ಯಾಸಕ್ಕೆ ತೊಂದರೆ ಉಂಟು ಮಾಡಿ, ಟೀಮ್​ ಇಂಡಿಯಾದ ಲಯ ತಪ್ಪಿಸೋ ಕೆಲ್ಸ ಮಾಡೋ ನೌಟಂಕಿ ಆಟವನ್ನ ಕ್ರಿಕೆಟ್​ ಆಸ್ಟ್ರೇಲಿಯಾ ಶುರುವಿಟ್ಟುಕೊಂಡಿದೆ ಅನ್ನೋದು ಹಲವರ ಅಭಿಪ್ರಾಯ.

ಇದನ್ನೂ ಓದಿ:ಆರ್​​ಸಿಬಿ ಸೇರಿದ ಬೆನ್ನಲ್ಲೇ ಫಿಲ್​ ಸಾಲ್ಟ್​ಗೆ ಸುವರ್ಣಾವಕಾಶ; ಸ್ಟಾರ್​ ಆಟಗಾರನಿಗೆ ದೊಡ್ಡ ಲಾಟರಿ!

ಗೆಲುವಿಗಾಗಿ ಎಂಥಹ ಕೀಳು ಮಟ್ಟಕ್ಕಾದ್ರೂ ಆಸ್ಟ್ರೇಲಿಯಾ ಇಳಿಯುತ್ತೆ ಅನ್ನೋ ಮಾತು ಹಲ ವರ್ಷಗಳಿಂದ ಕ್ರಿಕೆಟ್​ ಲೋಕದಲ್ಲಿದೆ. ಅದಕ್ಕೆ ಈ ಪ್ರಕರಣ ಒಂದು ಎಕ್ಸಾಂಪಲ್ ಅಂದ್ರೆ ತಪ್ಪಾಗಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment