/newsfirstlive-kannada/media/post_attachments/wp-content/uploads/2025/01/INDVSPAK_PD.jpg)
2025ರ ದೈಹಿಕ ಅಂಗವಿಕಲರ (Physically Disabled) ಚಾಂಪಿಯನ್ಸ್ ಟ್ರೋಫಿಯ 8ನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಪಡೆದು ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಪಾಕ್ ತಂಡ ಟ್ರೋಫಿಯಿಂದ ಹೊರ ನಡೆಯಿತು.
ಶ್ರೀಲಂಕಾದ ಕೊಲಂಬೊದಲ್ಲಿ ನಡೆಯುತ್ತಿರುವ ದೈಹಿಕ ಅಂಗವಿಕಲರ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ವಿಕ್ರಾಂತ್ ಕೇನಿ ನೇತೃತ್ವದ ಟೀಮ್ ಇಂಡಿಯಾ ಅಮೋಘವಾದ ಗೆಲುವು ಪಡೆದಿದೆ. ಅಬ್ದುಲ್ಲಾ ಇಜಾಜ್ ನಾಯಕತ್ವದ ಪಾಕಿಸ್ತಾನ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ಫೈನಲ್​ಗೆ ಪ್ರವೇಶ ಪಡೆದಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನದ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ಅಂದುಕೊಂಡಂತೆ ಬ್ಯಾಟಿಂಗ್ ಮಾಡಲು ಆಗಲಿಲ್ಲ. ಸೈಫ್ ಉಲ್ಲಾ 51 ಎಸೆತಗಳಲ್ಲಿ 58 ರನ್ ಗಳಿಸಿ ಔಟಾದರು. ಮುಹಮ್ಮದ್ ನೋಮನ್ 42 ಎಸೆತಗಳಲ್ಲಿ 45 ರನ್ ಬಿಟ್ಟರೇ ಉಳಿದವರು ಚೆನ್ನಾಗಿ ಆಡಲಿಲ್ಲ. ಹೀಗಾಗಿ ಪಾಕ್ 5 ವಿಕೆಟ್​ಗೆ ಕೇವಲ 138 ರನ್ ಗಳಿಸಲು ಸೀಮಿತವಾಯಿತು.
/newsfirstlive-kannada/media/post_attachments/wp-content/uploads/2025/01/INDVSPAK_PD1.jpg)
ಈ ಸಾಧಾರಣ ಗುರಿ ಬೆನ್ನಟ್ಟಿದ ಭಾರತ ಆಟಗಾರರು ಇನ್ನು ರಾಜೇಶ್ ಕಣ್ಣೂರು ಕೇವಲ 52 ಎಸೆತಗಳಲ್ಲಿ ಅಜೇಯ 74 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಭಾರತ 5.2 ಓವರ್‌ಗಳಲ್ಲಿ 50 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತ್ತು. ಇದರಿಂದ 5 ವಿಕೆಟ್ ಹಾಗೂ 2 ಓವರ್‌ಗಳು ಇನ್ನು ಬಾಕಿ ಇರುವಾಗಲೇ ಭಾರತವು ಅಮೋಘವಾದ ಗೆಲುವು ಸಾಧಿಸಿ ಅಧಿಕೃತವಾಗಿ ಫೈನಲ್‌ಗೆ ಅರ್ಹತೆ ಪಡೆಯಿತು.
ಈ ಟೂರ್ನಿಯಲ್ಲಿ ಉಭಯ ತಂಡಗಳ ನಡುವಿನ 2ನೇ ಹಣಾಹಣಿ ಇದಾಗಿತ್ತು. ಆದರೆ ಎರಡೂ ಬಾರಿಯು ಪಾಕ್ ವಿರುದ್ಧ ಪರಾಕ್ರಮ ಮೆರೆದ ಭಾರತ ಸತತ ಗೆಲುವು ಪಡೆದಿದೆ. ಸದ್ಯ ಟೀಮ್ ಇಂಡಿಯಾ ನಾಲ್ಕು ಪಂದ್ಯಗಳಲ್ಲೂ ಗೆಲುವನ್ನು ದಾಖಲಿಸಿ ಫೈನಲ್‌ಗೆ ಪ್ರವೇಶ ಪಕ್ಕಾ ಮಾಡಿಕೊಂಡಿದೆ. ಆದರೆ ಪಾಕಿಸ್ತಾನ ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದೇ ಒಂದು ಪಂದ್ಯ ಮಾತ್ರ ಗೆದ್ದಿದೆ. ಉಳಿದ ಮೂರರಲ್ಲಿ ಹೀನಾಯವಾಗಿ ಸೋತಿದೆ. ಇದರಿಂದ ಫೈನಲ್​ಗೆ ಪ್ರವೇಶ ಪಡಿಯಲು ವಿಫಲವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us