newsfirstkannada.com

ಇಡಿ ವಶದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್; ಮಾರ್ಚ್​ 31ಕ್ಕೆ ಮಹಾ ಱಲಿ ಘೋಷಿಸಿದ AAP, ಕಾಂಗ್ರೆಸ್​

Share :

Published March 24, 2024 at 2:57pm

Update March 24, 2024 at 3:14pm

    ಸುಳ್ಳು ಕೇಸ್​ ದಾಖಲಿಸಿ ವಿರೋಧ ಪಕ್ಷದವರನ್ನ ಬಂಧಿಸ್ತಿದ್ದಾರೆ

    ಸದ್ಯ ಪ್ರಜಾಪ್ರಭುತ್ವ ಮತ್ತು ದೇಶ ಈ ಎರಡು ಅಪಾಯದಲ್ಲಿವೆ

    ಮೋದಿಯಿಂದ ಸರ್ಕಾರಿ ಇಲಾಖೆಗಳ ದುರುಪಯೋಗ ಆಗುತ್ತಿದೆ

ನವದೆಹಲಿ: ಅಬಕಾರಿ ನೀತಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಸಿಎಂ ಅರವಿಂದ್ ಕೇಜ್ರಿವಾಲ್​ರನ್ನ ಇಡಿ ವಶಕ್ಕೆ ಪಡೆದುಕೊಂಡಿದೆ. ಈ ಸಂಬಂಧ ಮಾರ್ಚ್​ 31ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಱಲಿ ಮಾಡಲಾಗುವುದು ಎಂದು ಎಎಪಿ ಹಾಗೂ ಕಾಂಗ್ರೆಸ್ ಘೋಷಣೆ ಮಾಡಿವೆ.

I.N.D.I.A ಒಕ್ಕೂಟದ ಎಎಪಿ ಹಾಗೂ ಕಾಂಗ್ರೆಸ್​ ಇಂದು ದೆಹಲಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದವು. ಈ ವೇಳೆ ಮಾತನಾಡಿದ ಎಎಪಿಯ ನಾಯಕ ಗೋಪಾಲ್​ ರೈ, ಸದ್ಯ ಪ್ರಜಾಪ್ರಭುತ್ವ ಮತ್ತು ದೇಶ ಎರಡು ಅಪಾಯದಲ್ಲಿವೆ. ಹೀಗಾಗಿ ದೇಶದ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಲು ಇಂಡಿಯಾ ಒಕ್ಕೂಟದ ಎಲ್ಲ ಪಕ್ಷಗಳು ಈ ಮಹಾ ಱಲಿಯನ್ನ ಹಮ್ಮಿಕೊಂಡಿವೆ. ದೇಶದಲ್ಲಿ ಸರ್ವಾಧಿಕಾರ ಸರ್ಕಾರವಿದ್ದು ಪ್ರಜಾಪ್ರಭುತ್ವವನ್ನು ಬದಿಗೊತ್ತಿ ಸಿಎಂ ಕೇಜ್ರಿವಾಲ್​ರನ್ನ ಬಂಧಿಸಲಾಗಿದೆ. ಸುಳ್ಳು ಕೇಸ್​ಗಳನ್ನ ದಾಖಲಿಸಿ ವಿರೋಧ ಪಕ್ಷದವರನ್ನ ಬಂಧಿಸಲಾಗುತ್ತಿದೆ. ಪ್ರಧಾನಿ ಮೋದಿ ಸರ್ಕಾರಿ ಇಲಾಖೆಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ದೆಹಲಿಯ ಕಾಂಗ್ರೆಸ್​ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ಮಾತನಾಡಿ, ಈ ಪ್ರತಿಭಟನೆ ರಾಜಕೀಯಕ್ಕಾಗಿ ಅಥವಾ ಯಾವುದೇ ಪಕ್ಷಕ್ಕಾಗಿ ಮಾಡುತ್ತಿಲ್ಲ. ದೇಶ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಾಗಿ ಮಾಡಲಾಗುತ್ತಿದೆ. ಈ ಮಹಾರ್ಯಾಲಿ ಕೇಂದ್ರ ಸರ್ಕಾರದ ವಿರುದ್ಧ ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಡಿ ವಶದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್; ಮಾರ್ಚ್​ 31ಕ್ಕೆ ಮಹಾ ಱಲಿ ಘೋಷಿಸಿದ AAP, ಕಾಂಗ್ರೆಸ್​

https://newsfirstlive.com/wp-content/uploads/2024/03/arvind-kejriwal.jpg

Load More