/newsfirstlive-kannada/media/post_attachments/wp-content/uploads/2025/04/SINDHU-RIVER-2.jpg)
ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಭಾರತ, ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುತ್ತಲೇ ಇದೆ. ಸಿಂಧೂ ನದಿ ನೀರು ಹಂಚಿಕೆಯ ಒಪ್ಪಂದ ಅಮಾನತು, ಆಪರೇಷನ್ ಸಿಂಧೂರದ ಹೊಡೆತಕ್ಕೆ ಪಾಕ್ ಬೆಚ್ಚಿ ಬಿದ್ದಿದೆ.
ಭಾರತ- ಪಾಕಿಸ್ತಾನ ಉದ್ವಿಗ್ನತೆ ಬಳಿಕ ವಾಟರ್ ವಾರ್ ಜೋರಾಗಿದೆ. ನೀರಿಗಾಗಿ ಭಾರತದ ಬಳಿ ಪಾಕಿಸ್ತಾನ ಅಂಗಲಾಚುತ್ತಿದೆ. ಕಳೆದ ಏಪ್ರಿಲ್ 22ರಿಂದ ಇಲ್ಲಿಯವರೆಗೂ ಪಾಕಿಸ್ತಾನ, ಭಾರತದ ಜಲಶಕ್ತಿ ಸಚಿವಾಲಯಕ್ಕೆ 4 ಬಾರಿ ಪತ್ರ ಬರೆದು ಇಂಡಸ್ ನದಿ ನೀರಿಗಾಗಿ ಭಿಕ್ಷೆ ಬೇಡುತ್ತಿದೆ. ಪಾಕಿಸ್ತಾನದ 4 ಪತ್ರಗಳಿಗೂ ಭಾರತ ತಕ್ಕ ಉತ್ತರವನ್ನು ನೀಡಿದೆ.
/newsfirstlive-kannada/media/post_attachments/wp-content/uploads/2025/05/Operation-Sindoor2.jpg)
IMF, ವಿಶ್ವ ಬ್ಯಾಂಕ್ ಬಳಿ ಸಾಲದ ಹಣಕ್ಕಾಗಿ ಭಿಕ್ಷೆ ಬೇಡುವ ಪಾಕಿಸ್ತಾನ ಈಗ ನೀರಿಗಾಗಿ ಭೀಕ್ಷೆ ಬೇಡುತ್ತಿದೆ. ಏಪ್ರಿಲ್ 22ರಿಂದ 4 ಪತ್ರ ಬರೆದಿರುವ ಪಾಕಿಸ್ತಾನ ಇಂಡಸ್ ನದಿ ನೀರಿಗಾಗಿ ಅಂಗಲಾಚುತ್ತಿದೆ.
ಇದನ್ನೂ ಓದಿ: ಭಾರತದಲ್ಲಿ ಬಡತನದ ಪ್ರಮಾಣ ಭಾರೀ ಇಳಿಕೆ; ವಿಶ್ವ ಬ್ಯಾಂಕ್‌ನಿಂದ ಅಂಕಿ ಅಂಶಗಳ ಬಿಡುಗಡೆ
ಭಾರತದ ಜಲಶಕ್ತಿ ಸಚಿವಾಲಯ ಇಂಡಸ್ ನದಿ ನೀರು ಹಂಚಿಕೆ ಒಪ್ಪಂದವನ್ನು ಪರಸ್ಪರ ನಂಬಿಕೆಯ ಆಧಾರದ ಮೇಲೆ ಮಾಡಿಕೊಳ್ಳಲಾಗಿತ್ತು. ಆದರೆ ಪಾಕಿಸ್ತಾನ, ಭಾರತದ ವಿರುದ್ಧ ಭಯೋತ್ಪಾದನೆ ನಡೆಸುತ್ತಿದೆ. ಇದರಿಂದ ಪರಸ್ಪರ ನಂಬಿಕೆ, ಗೌರವ, ಶಾಂತಿಗೆ ಭಂಗ ಬಂದಿದೆ. ಹೀಗಾಗಿ ಇಂಡಸ್ ನದಿಯ ನೀರನ್ನು ಪಾಕ್‌ಗೆ ಹರಿಸಲ್ಲ ಎಂದು ಸ್ಪಷ್ಟಪಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us