ಭಾರತದ ಮೇಲೆ ಮತ್ತೆ ವಿಷ ಕಾರಿದ ಕೆನಡಾ; ವಿದೇಶಾಂಗ ಸಚಿವೆಯಿಂದ ದೊಡ್ಡ ಹೇಳಿಕೆ

author-image
Ganesh
Updated On
ಭಾರತದ ಮೇಲೆ ಮತ್ತೆ ವಿಷ ಕಾರಿದ ಕೆನಡಾ; ವಿದೇಶಾಂಗ ಸಚಿವೆಯಿಂದ ದೊಡ್ಡ ಹೇಳಿಕೆ
Advertisment
  • ಭಾರತದ ತಲೆಗೆ ನಿಜ್ಜಾರ್​ ಕೇಸ್​ ಕಟ್ಟಲು ಕೆನಡಾ ಹೊಂಚು
  • ಕೆನಡಾದ 6 ಅಧಿಕಾರಿಗಳಿಗೆ ಗೆಟ್​ಔಟ್ ಎಂದ ಮೋದಿ ಸರ್ಕಾರ
  • ಭಾರತ-ಕೆನಡಾ ನಡುವಿನ ಸಂಬಂಧ ಮತ್ತಷ್ಟು ಬಿಗಡಾಯಿಸಿದೆ

ಭಾರತ ಮತ್ತು ಕೆನಡಾ (Canada) ನಡುವಿನ ಸಂಬಂಧ ಮತ್ತಷ್ಟು ಬಿಗಡಾಯಿಸಿದೆ. ಕೆನಡಾ ನಿಲುವಿನ ವಿರುದ್ಧ ಖಡಕ್ ಉತ್ತರ ನೀಡಿದ್ದ ಭಾರತ ಅಲ್ಲಿ ರಾಜತಾಂತ್ರಿಕರನ್ನು ಹೊರಹಾಕಿದೆ. ಇದಲ್ಲದೆ, ಇತರೆ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ಟಾರ್ಗೆಟ್ ಮಾಡುವುದಾಗಿ ಭಾರತ ಘೋಷಿಸಿದೆ.

ಖಲಿಸ್ತಾನಿ ಉಗ್ರ ನಿಜ್ಜಾರ್‌ ಹತ್ಯೆಯಲ್ಲಿ ಭಾರತೀಯ ರಾಯಭಾರಿ ಸಂಜಯ್​ಕುಮಾರ್‌ ವರ್ಮಾ ಹೆಸರನ್ನು ಕೆನಡಾ ಉಲ್ಲೇಖಿಸಿದೆ. ಇದ್ರಿಂದ ಕೆರಳಿದ ಭಾರತ ತೀಕ್ಷ್ಣ ತಿರುಗೇಟು ನೀಡಿದೆ. ರಾಯಭಾರಿಗಳನ್ನ ಹಿಂದಕ್ಕೆ ಕರೆಸಿಕೊಂಡಿದೆ. ಬಿಕ್ಕಟ್ಟಿನಲ್ಲಿದ್ದ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಬಿಗಡಾಯಿಸಿದೆ. ಈ ನಡುವೆ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ (Melanie Joly) ದೊಡ್ಡ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:ಖ್ಯಾತ ಹಾಸ್ಯ ನಟ ನಿಧನ.. ಸಂತಾಪ ಸೂಚಿಸಿದ ಸಿಎಂ

ಎರಡೂ ದೇಶಗಳ ಅನುಕೂಲಕ್ಕಾಗಿ ಭಾರತ ಸರ್ಕಾರ ಖಲಿಸ್ತಾನಿ ಉಗ್ರ ನಿಜ್ಜಾರ್‌ ಹತ್ಯೆಯ ತನಿಖೆಯನ್ನು ಬೆಂಬಲಿಸಬೇಕು ಎಂದಿದ್ದಾರೆ. ಭಾರತ ಘೋಷಿಸಿದ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್‌ಸಿಎಂಪಿ) ಸಾಕ್ಷ್ಯವನ್ನು ಸಂಗ್ರಹಿಸಿದೆ. ಅದನ್ನು ಆಧರಿಸಿ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕುವ ನಿರ್ಧಾರವನ್ನು ಕೆನಡಾ ಮಾಡಿದೆ ಎಂದು ಮೆಲಾನಿ ಜೋಲಿ ಹೇಳಿದ್ದಾರೆ. ಅಲ್ಲದೇ ಈ ತನಿಖೆಯನ್ನು ಭಾರತ ಬೆಂಬಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಭಾರತದ ತಲೆಗೆ ನಿಜ್ಜಾರ್​ ಕೇಸ್​ ಕಟ್ಟಲು ಕೆನಡಾ ಹೊಂಚು; ಕೆನಡಾದ 6 ಅಧಿಕಾರಿಗಳಿಗೆ ಗೆಟ್​ಔಟ್ ಎಂದ ಮೋದಿ ಸರ್ಕಾರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment