newsfirstkannada.com

ಅಭಿಮಾನಿಗಾಗಿ ಅಮೆರಿಕದ ಪೊಲೀಸರ ಬಳಿ ಬೇಡಿಕೊಂಡ ಕ್ಯಾಪ್ಟನ್ ರೋಹಿತ್.. ಅಸಲಿಗೆ ಆಗಿದ್ದೇನು?

Share :

Published June 2, 2024 at 6:43pm

Update June 2, 2024 at 6:46pm

    T20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ನಡೆದ ಘಟನೆ

    ಬಾಂಗ್ಲಾದೇಶದ ವಿರುದ್ಧ ಭಾರತ ತಂಡಕ್ಕೆ 60 ರನ್​ಗಳಿಂದ ಗೆಲುವು

    ಪೊಲೀಸರ ವರ್ತನೆಯಿಂದ ನಾಯಕ ರೋಹಿತ್ ಶರ್ಮಾಗೆ ಬೇಸರ

ಅಮೆರಿಕ ಹಾಗೂ ವೆಸ್ಟ್​​ ಇಂಡೀಸ್​ನಲ್ಲಿ ನಡೆಯುತ್ತಿರುವ T20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿದೆ. ಬಾಂಗ್ಲಾದೇಶದ ವಿರುದ್ಧ 60 ರನ್​ಗಳಿಂದ ಟೀಮ್ ಇಂಡಿಯಾ ಗೆಲುವು ತನ್ನದಾಗಿಸಿಕೊಂಡಿದೆ. ಆದರೆ ಪಂದ್ಯದ ವೇಳೆ ರೋಹಿತ್ ಶರ್ಮಾ ಅಭಿಮಾನಿಯೊಬ್ಬರನ್ನ ಅಮೆರಿಕ ಪೊಲೀಸರು ನೆಲಕ್ಕೆ ಕೆಡಿವಿ, ಗುದ್ದಿ, ಕೈಗೆ ಬೇಡಿ ಹಾಕಿ ಕರೆದುಕೊಂಡು ಹೋಗಿದ್ದಾರೆ. ಸದ್ಯ ಈ ವೇಳೆ ರೋಹಿತ್ ಮಾಡಿದ ಮನವಿ ಎಲ್ಲರ ಮನ ಗೆದ್ದಿದೆ.

ನಸ್ಸೌಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ತಂಡ ಫೀಲ್ಡಿಂಗ್ ಮಾಡುತ್ತಿತ್ತು. ಈ ವೇಳೆ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಮೈದಾನದಲ್ಲಿ ಫೀಲ್ಡ್​ ಮಾಡುವಾಗ ಅಭಿಮಾನಿ ಒಬ್ಬರು ಓಡಿ ಬಂದು ತಬ್ಬಿಕೊಂಡಿದ್ದಾರೆ. ತಕ್ಷಣ ಇದನ್ನು ಗಮನಿಸಿ ಮೈದಾನಕ್ಕೆ ಓಡೋಡಿ ಬಂದ ಅಮೆರಿಕದ ಪೊಲೀಸರು ಅಭಿಮಾನಿಯನ್ನ ನೆಲಕ್ಕೆ ಕೆಡವಿದ್ದಾರೆ. ಬಳಿಕ ಆತನ ಮೇಲೆ ಕುಳಿತು ಕೈಗೆ ಬೇಡಿ ಹಾಕಿ ಹಿಡಿದುಕೊಂಡು ಹೋಗಿದ್ದಾರೆ. ಈ ವೇಳೆ ಪೊಲೀಸರು ತೋರಿದ ವರ್ತನೆಯಿಂದ ರೋಹಿತ್ ಶರ್ಮಾಗೆ ಬೇಸರವಾಗಿದೆ ಎಂದು ಹೇಳಬಹುದು.

ಪ್ಲೀಸ್ ಆ ರೀತಿ ಮಾಡಬೇಡಿ. ಅವರಿಗೆ ಹೊಡೆಯಬೇಡಿ ಎಂದು ರೋಹಿತ್ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಇದನ್ನ ಗಣನೆಗೆ ತೆಗೆದುಕೊಳ್ಳದ ಅಧಿಕಾರಿಗಳು ಬೇಡಿ ಹಾಕಿದ ಬಳಿಕ ಅಭಿಮಾನಿಯನ್ನ ಕರೆದುಕೊಂಡು ಹೋಗಿದ್ದಾರೆ. ಆಗ ಪಂದ್ಯದ ಆಯೋಜಕರೊಬ್ಬರು ಕ್ಯಾಪ್ಟನ್​​ ರೋಹಿತ್ ಅವರ ಮನವಿಯನ್ನು ತಿಳಿದುಕೊಂಡು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಅಭಿಮಾನಿ ಕುರಿತು ರೋಹಿತ್ ಶರ್ಮಾ ಮಾಡಿರುವ ಮನವಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಭಿಮಾನಿಗಾಗಿ ಅಮೆರಿಕದ ಪೊಲೀಸರ ಬಳಿ ಬೇಡಿಕೊಂಡ ಕ್ಯಾಪ್ಟನ್ ರೋಹಿತ್.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/06/ROHIT_USA_FAN.jpg

Load More