Advertisment

ಭಾರತ V/s ಇಂಗ್ಲೆಂಡ್ ಎರಡನೇ ಟಿ20 ಪಂದ್ಯ; ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಡಿಯಾ

author-image
Gopal Kulkarni
Updated On
3ನೇ ಟಿ20 ಪಂದ್ಯ; ಅಭಿಮಾನಿಗಳಿಗೆ ಗುಡ್​ನ್ಯೂಸ್.. ಉಚಿತವಾಗಿ ನೋಡಬಹುದು..!
Advertisment
  • ಚೆನ್ನೈನಲ್ಲಿ ಭಾರತ ಮತ್ತು ಇಂಗ್ಲೆಂಡ್​ ನಡುವಿನ 2ನೇ ಟಿ20 ಪಂದ್ಯ
  • ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಸೂರ್ಯಕುಮಾರ್
  • ಟೀಂ ಇಂಡಿಯಾದಲ್ಲಿ ಆಗಿವೆ ಪ್ರಮುಖ ಎರಡು ಬದಲಾವಣೆಗಳು

ಚೆನ್ನೈನಲ್ಲಿ ಇಂದು ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಆಗಿದ್ದು. ಟಾಸ್ ಗೆದ್ದ ಭಾರತೀಯ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್​ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟಾಸ್ ಸೋತ ಇಂಗ್ಲೆಂಡ್ ಬ್ಯಾಟಿಂಗ್​ ಕಣಕ್ಕೆ ಇಳಿಯಲಿದೆ

Advertisment

ಇನ್ನು ಭಾರತ ತಂಡದಲ್ಲಿ ಪ್ರಮುಖವಾಗಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ನಿತೀಶ್ ಕುಮಾರ್ ರೆಡ್ಡಿ ಹಾಗೂ ರಿಂಕು ಸಿಂಗ್ ಬದಲು ವಾಷಿಂಗ್ಟನ್​ ಸುಂದರ್ ಹಾಗೂ ದ್ರುವ ಜುರೇಲ್​ಗೆ ಅವಕಾಶ ನೀಡಲಾಗಿದೆ. ಇಬ್ಬರು ಆಟಗಾರರು ಗಾಯಾಳುಗಳಾದ ಕಾರಣ ಅವರನ್ನು ಪ್ಲೇಯಿಂಗ್ 11 ನಿಂದ ಕೈಬಿಡಲಾಗಿದೆ. ಈ ಪಂದ್ಯದಲ್ಲಿಯೂ ಕೂಡ ಮಾರಕ ಬೌಲರ್ ಮೊಹಮ್ಮದ ಶಮಿ ಬೆಂಚ್​ ಕಾಯುವ ಪ್ರಸಂಗ ಬಂದಿದೆ.

ಇದನ್ನೂ ಓದಿ:ರೋಹಿತ್ ಶರ್ಮಾಗೆ ನಾಯಕನ ಪಟ್ಟ.. ICC T20 ತಂಡ ಪ್ರಕಟ; ಯಾರಿಗೆಲ್ಲಾ ಸ್ಥಾನ?

ಈಗಾಗಲೇ ಮೊದಲ ಪಂದ್ಯವನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾ 1-0 ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿದೆ. ಇಂದು ಕೂಡ ಸಮಬಲದ ಹೋರಾಟ ಚೆನ್ನೈ ಅಂಗಳದಲ್ಲಿ ನಡೆಯಲಿದ್ದು ಯಾವ ತಂಡ ಗೆದ್ದು ಬೀಗಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment