/newsfirstlive-kannada/media/post_attachments/wp-content/uploads/2025/01/KAILASH-MANASAROVAR.jpg)
ಕೈಲಾಸ ಮಾನಸ ಸರೋವರ ಯಾತ್ರೆಗೆ ವಿಮಾನ ಯಾನ ಪುನರಾರಂಭಕ್ಕೆ ಚೀನಾ ಹಾಗೂ ಭಾರತ ಎರಡು ಒಪ್ಪಿಕೊಂಡಿದ್ದು, ಇನ್ನು ಮುಂದೆ ಕೈಲಾಸ ಮಾನಸ ಸರೋವರ ಯಾತ್ರೆ ಇನ್ನೂ ಸರಳವಾಗಲಿದೆ. ಇದನ್ನು ನವದೆಹಲಿ ಹಾಗೂ ಬೀಜಿಂಗ್ ನಡುವಿನ ಸಂಬಂಧದ 75ನೇ ವಾರ್ಷಿಕೋತ್ಸವದ ಕೊಡುಗೆ ಎಂದೇ ಗುರುತಿಸಲಾಗುತ್ತಿದೆ.
ದ್ವಿಪಕ್ಷೀಯ ಮಾತುಕತೆಗಳ ಮೂಲಕ ನಡೆದ ಒಪ್ಪಂದದಲ್ಲಿ ಉಭಯ ದೇಶಗಳು ಕೈಲಾಸ ಮಾನಸ ಸರೋವರ ಯಾತ್ರೆಗೆ ವಿಮಾನ ಹಾರಾಟದ ಪುನರಾರಂಭಕ್ಕೆ ಒಪ್ಪಿಗೆ ನೀಡಿವೆ. 2020ರಲ್ಲಿ ಉಭಯ ದೇಶಗಳ ನಡುವೆ ಏರ್ಪಟ್ಟಿದ್ದ ಸಂಘರ್ಷದಿಂದಾಗಿ ಕೈಲಾಸ ಮಾನಸರೋವರ ಯಾತ್ರೆಗೆ ವಿಮಾನ ಯಾನವನ್ನು ನಿಷೇಧ ಮಾಡಲಾಗಿತ್ತು. ಸದ್ಯ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹಾಗೂ ಚೀನದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ನಡೆದ ಮಾತುಕತೆಯೊಂದಿಗೆ ಈ ಸಮಸ್ಯೆಗೆ ತೆರೆಬಿದ್ದಿದೆ. ಕೈಲಾಸ ಮಾನಸ ಸರೋವರಕ್ಕೆ ನೇರ ವಿಮಾನ ಯಾನಕ್ಕೆ ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ.
ಇದನ್ನೂ ಓದಿ: ವೈಟ್‌ಹೌಸ್‌ನಲ್ಲಿ ಭಾರತ ಮೂಲದ ಶ್ರೀರಾಮ ಕೃಷ್ಣನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಜವಾಬ್ದಾರಿ
ಈ ಒಂದು ಒಪ್ಪಂದಕ್ಕೆ ಉಭಯದ ದೇಶದ ನಾಯಕರು ಸಹಿ ಹಾಕಿದ್ದಾರೆ. 2025ರಿಂದ ಕೈಲಾಸ ಮಾನಸಸರೋವರಕ್ಕೆ ನೇರ ಫ್ಲೈಟ್ ಹಾರಾಟವನ್ನು ಪುನರಾರಂಭವಾಗುವುದಾಗಿ ಹೇಳಿದ್ದಾರೆ. ಇನ್ನು ಹಲವು ಒಪ್ಪಂದಗಳ ಬಗ್ಗೆ ವಿಕ್ರಮ್ ಮಿಸ್ರಿ ಹಾಗೂ ವಾಂಗ್ ಯಿ ನಡುವೆ ಮಾತುಕತೆಗಳು ನಡೆಯಲಿವೆ. ಹೈಡ್ರೋಲಾಜಿಕಲ್ ಡಾಟಾ, ಗಡಿರೇಖೆಯಲ್ಲಿರುವ ನದಿ ನೀರಿನ ವಿಚಾರದಲ್ಲಿಯೂ ಹಲವು ರೀತಿಯ ಮಾತುಕತೆಗಳು ನಡೆಯಲಿವೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕೋಟಿ ಕೊಟ್ಟರು ಮನೆ ಬಿಟ್ಟಿರಲಾರೆ ಎಂದ ವ್ಯಕ್ತಿ; ಹೆದ್ದಾರಿಯ ಮಧ್ಯದಲ್ಲಿಯೇ ವಾಸ, ನಿವಾಸ
ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸದ್ಯ ಎರಡು ದಿನಗಳ ಕಾಲ ಬೀಜಿಂಗ್ ಪ್ರವಾಸದಲ್ಲಿದ್ದಾರೆ. ಭಾರತ ಮತ್ತು ಚೀನಾ ನಡುವಿನ ಹಲವು ಮಾತುಕತೆಗಳಿಗಾಗಿ ಭೇಟಿ ನೀಡಿದ್ದಾರೆ. ಈ ಹಿಂದೆ ಕಝಾನ್ನಲ್ಲಿ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಚೀನಾದ ಪ್ರಧಾನಿ ಕ್ಸಿ ಜಿನ್ ಪಿಂಗ್ ಭೇಟಿಯಾಗಿ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದರು. ಅದರ ಮುಂದುವರಿದ ಭಾಗವಾಗಿ ಈಗ ಮಿಸ್ರಿ ಚೀನಾಗೆ ಭೇಟಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ