/newsfirstlive-kannada/media/post_attachments/wp-content/uploads/2025/02/Cow-1.jpg)
ಭಾರತದಲ್ಲಿ ಹಸುವಿಗೆ ಧಾರ್ಮಿಕ ಮಹತ್ವವಿದೆ. ಸನಾತನ ಧರ್ಮದಲ್ಲಿ ಹಸುವಿಗೆ ತಾಯಿಯ ಸ್ಥಾನಮಾನ ನೀಡಲಾಗಿದೆ. ಪ್ರಪಂಚದಲ್ಲೇ ಅತಿ ಹೆಚ್ಚು ಹಸುಗಳನ್ನು ಹೊಂದಿರೋ ದೇಶ ಭಾರತ. ನಮ್ಮ ದೇಶದಲ್ಲಿ ಗರಿಷ್ಠ ಹಾಲು ಉತ್ಪಾದನೆ ಕೂಡ ನಡೆಯುತ್ತದೆ. ಇಲ್ಲಿಂದಲೇ ಇತರೆ ದೇಶಗಳಿಗೂ ಹಾಲು ರಫ್ತಾಗುತ್ತದೆ.
ಇದನ್ನೂ ಓದಿ: ‘ದರ್ಶನ್ ವಿರುದ್ಧ ಮತ್ತೆ ಪೊಲೀಸರ ಸಂಚು’- ಡಿಗ್ಯಾಂಗ್ ಕೋರ್ಟ್‌ಗೆ ಹಾಜರಾದ ಬಳಿಕ ವಕೀಲರ ಆರೋಪ
ಭಾರತವನ್ನು ಹೊರತುಪಡಿಸಿ ಬೇರೆ ಯಾವ ದೇಶಗಳಲ್ಲಿ ಹೆಚ್ಚು ಹಸುಗಳು ಕಂಡುಬರುತ್ತವೆ ಅನ್ನೋ ವಿವರ ಇಲ್ಲಿದೆ. ಮಾಹಿತಿ ಪ್ರಕಾರ, ಭಾರತದಲ್ಲಿ ಸುಮಾರು 307.5 ಮಿಲಿಯನ್ ಹಸುಗಳಿವೆ. ಜಗತ್ತಿನಲ್ಲಿರುವ ಒಟ್ಟು ಹಸುಗಳಲ್ಲಿ ಸುಮಾರು ಶೇ.20 ರಷ್ಟು ಭಾರತದಲ್ಲೇ ಇವೆ. ಭಾರತದ ನಂತರ ಚೀನಾ ಎರಡನೇ ಸ್ಥಾನದಲ್ಲಿದೆ. ಚೀನಾದಲ್ಲಿ ಸುಮಾರು 13 ಕೋಟಿ 97 ಲಕ್ಷದ 21 ಸಾವಿರ ಹಸುಗಳಿವೆ. ಅಮೆರಿಕ ಮೂರನೇ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಸುಮಾರು 9 ಕೋಟಿ 66 ಲಕ್ಷದ 69 ಸಾವಿರ ಹಸುಗಳಿವೆ. ಯುರೋಪಿಯನ್ ಒಕ್ಕೂಟದಲ್ಲಿ ಸುಮಾರು 8 ಕೋಟಿ 76 ಲಕ್ಷದ 50 ಸಾವಿರ ಹಸುಗಳಿವೆ. ಅರ್ಜೆಂಟೀನಾದಲ್ಲಿ 5 ಕೋಟಿ 10 ಲಕ್ಷದ 62 ಸಾವಿರ ಹಸುಗಳಿವೆ.
ಇದನ್ನೂ ಓದಿ: ಶಿವರಾತ್ರಿ ಜಾಗರಣೆಗೆ ದೇವಾಲಯಕ್ಕೆ ಹೋಗ್ತಿದ್ದ 30 ಭಕ್ತರ ಮೇಲೆ ಆನೆ ಹಿಂಡು ದಾಳಿ
ಹಾಲು ಉತ್ಪಾದನೆಯಲ್ಲಿ ಪ್ರಪಂಚದಲ್ಲೇ ನಂಬರ್ ಒನ್ ಸ್ಥಾನ ಭಾರತಕ್ಕೆ ಇದೆ. ಅಮೆರಿಕ ಎರಡನೇ ಸ್ಥಾನದಲ್ಲಿದೆ. ಅಮೆರಿಕ ವಿಶ್ವದ ಪ್ರಮುಖ ಹಾಲು ರಫ್ತುದಾರರಲ್ಲಿ ಒಂದಾಗಿದೆ. ಹಸುವಿನ ಹಾಲು ಪ್ರೋಟೀನ್ ಮತ್ತು ಲ್ಯಾಕ್ಟೋಸ್ ಸೇರಿದಂತೆ ಪೋಷಣೆಯ ಪ್ರಮುಖ ಮೂಲ. ವಿಶ್ವದಾದ್ಯಂತ 264 ದಶಲಕ್ಷಕ್ಕೂ ಹೆಚ್ಚು ಹಾಲು ನೀಡುವ ಹಸುಗಳಿವೆ. ಪ್ರತಿ ವರ್ಷ ಸುಮಾರು 600 ದಶ ಲಕ್ಷ ಟನ್ ಹಾಲು ಉತ್ಪಾದನೆಯಾಗುತ್ತದೆ.
ಅಮೆರಿಕದಲ್ಲಿ ಹಸುಗಳ ಸಂಖ್ಯೆ ಭಾರತಕ್ಕಿಂತ ಕಡಿಮೆ. ಆದರೆ ಅಲ್ಲಿ ಹಾಲಿನ ಉತ್ಪಾದನೆ ತುಂಬಾ ಹೆಚ್ಚಾಗಿದೆ. ಅಮೆರಿಕವು ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ಹಸುಗಳನ್ನು ಹೊಂದಿದೆ. ಹೋಲ್‌ಸ್ಟೈನ್ ತಳಿಯು ವಿಶ್ವದಲ್ಲೇ ಒಂದು ದಿನದಲ್ಲಿ ಅತಿ ಹೆಚ್ಚು ಹಾಲು ನೀಡುತ್ತದೆ.
ಇದನ್ನೂ ಓದಿ: ಕ್ರಿಕೆಟ್ ಚೇಸಿಂಗ್ನಲ್ಲಿ ಅತಿ ಹೆಚ್ಚು ಸೆಂಚುರಿ ಸಿಡಿಸಿದ ಬ್ಯಾಟ್ಸ್ಮನ್ ಯಾರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ